ಚಿತ್ರ ವಿಮರ್ಶೆ: ದೇವಕಿ

Published : Jul 06, 2019, 12:54 PM IST
ಚಿತ್ರ ವಿಮರ್ಶೆ: ದೇವಕಿ

ಸಾರಾಂಶ

ಮುದ್ದಾಗಿ ಸಾಕಿದ ಮಗಳು ಕಾಣೆಯಾಗಿದ್ದಾಳೆ. ಅಮ್ಮನ ಹುಡುಕಾಟ ಶುರುವಾಗಿದೆ. ಆಕೆಗೆ ಪೊಲೀಸ್ ಅಧಿಕಾರಿ ಜೊತೆಯಾಗಿದ್ದಾರೆ. ಆ ಅಧಿಕಾರಿಯ ಹಿಂದೊಂದು ನೋವಿನ ಕತೆಯಿದೆ. ಸಾಗುವ ದಾರಿಯೂ ನೋವಿನದ್ದೇ. ಇದು ಪ್ರಿಯಾಂಕ ಉಪೇಂದ್ರ ದೇವಕಿ ಸಿನಿಮಾದ ಒನ್ ಲೈನ್ ಸ್ಟೋರಿ. 

ಮುದ್ದಾಗಿ ಸಾಕಿದ ಮಗಳು ಕಾಣೆಯಾಗಿದ್ದಾಳೆ. ಅಮ್ಮನ ಹುಡುಕಾಟ ಶುರುವಾಗಿದೆ. ಆಕೆಗೆ ಪೊಲೀಸ್ ಅಧಿಕಾರಿ ಜೊತೆಯಾಗಿದ್ದಾರೆ. ಆ ಅಧಿಕಾರಿಯ ಹಿಂದೊಂದು ನೋವಿನ ಕತೆಯಿದೆ. ಸಾಗುವ ದಾರಿಯೂ ನೋವಿನದ್ದೇ.

ಪೈಲ್ವಾನ್ V/S ಕುರುಕ್ಷೇತ್ರ: ಸ್ಟಾರ್ ವಾರ್ ಬಗ್ಗೆ ಸುದೀಪ್ ಕೂಲ್ ಉತ್ತರವಿದು!

ಅನಾಥ ಮಕ್ಕಳು, ಭಿಕ್ಷಾಟನೆಯ ಮಾಫಿಯಾ, ಎಲ್ಲಕ್ಕಿಂತ ಮುಖ್ಯವಾಗಿ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿರುವ ಘಟನೆಗಳು, ಕತ್ತಲಲ್ಲಿ ಕರಗುತ್ತಿರುವ ಅಪ್ರಾಪ್ತ ಹೆಣ್ಣು ಜೀವಗಳು.. ಇವು ಹುಡುಕಾಟದ ಹಾದಿಯ ಚಿತ್ರಗಳು. ಹೀಗೆ ಮಗಳನ್ನು ಹುಡುಕುವುದು ಕೊಲ್ಕೊತ್ತಾದಲ್ಲಿ. ಕನ್ನಡ ಚಿತ್ರವೊಂದರಲ್ಲಿ ಕೊಲ್ಕತ್ತಾ ಮೊದಲ ಬಾರಿಗೆ ಇಷ್ಟು ವಿವರವಾಗಿ ಕಾಣಿಸಿಕೊಂಡಿದೆ. ಹೀಗಾಗಿ ಈ ಚಿತ್ರಕ್ಕೆ ಹೊಸತನವೂ ಅಪರಿಚಿತತೆಯೂ ಅನಾಯಾಸವಾಗಿ ದಕ್ಕಿಬಿಟ್ಟಿದೆ.

ನಾವು ನೋಡುತ್ತಿರುವ ದೃಶ್ಯಗಳು ಇದು ಪರಭಾಷೆಯ ಚಿತ್ರವೇನೋ ಎಂಬ ಭಾವನೆ ಮೂಡಿಸಿದರೆ, ಪಾತ್ರಗಳು ನಮ್ಮವೇ ಆಗಿ ಇದು ಕನ್ನಡದ ಸಿನಿಮಾ ಎಂಬುದನ್ನು ನೆನಪಿಸುತ್ತಿರುತ್ತವೆ. ಕ್ರೈಮ್ ಥ್ರಿಲ್ಲರ್ ಚಿತ್ರವನ್ನು ನಿರ್ದೇಶಕ ಲೋಹಿತ್ ಮತ್ತು ಛಾಯಾಗ್ರಾಹಕ ವೇಣು ವಿಭಿನ್ನವಾಗಿ, ಆಕರ್ಷಕವಾಗಿ ಕಟ್ಟಿಕೊಟ್ಟಿದ್ದಾರೆ.

ಲೋಹಿತ್ ಹಿಂದಿನ ಚಿತ್ರ ‘ಮಮ್ಮಿ’ಯಲ್ಲಿ ದೆವ್ವವಿತ್ತು. ಇಲ್ಲಿ ಮಮ್ಮಿ ಅಪ್ಪಟ ತಾಯಿ. ಕೊಲ್ಕತಾ ಎಂಬ ಚಾರಿತ್ರಿಕ ಊರಿನ ನಿರ್ಜನ ಬೀದಿ, ಸೇತುವೆ, ಕಮಾನು, ರಸ್ತೆ, ಕಂಬ, ರಾತ್ರಿ, ಆಕಾಶಗಳನ್ನು ವೇಣು ಸೊಗಸಾಗಿ ಸೆರೆಹಿಡಿದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ಸುವರ್ಣ ನ್ಯೂಸ್ ಜೊತೆ ಕಿಚ್ಚ ಸುದೀಪ್ ಟಿಕ್‌ಟಾಕ್

ಲಿಪ್‌ಸಿಂಕ್ ಸಮಸ್ಯೆಯ ಹೊರತಾಗಿಯೂ ‘ದೇವಕಿ’ಯಲ್ಲಿ ಒಂದಿಷ್ಟು ಕುತೂಹಲ ಅಂಶಗಳಿವೆ. ಮಗಳನ್ನು ಹುಡುಕುತ್ತಿರುವ ಅಮ್ಮನ ಕತೆಯೇ ಬೇರೆ. ಮುಂದೆ ಅದೇ ಮುನ್ನೆಲೆಗೆ ಬಿದ್ದು ಮಗಳೇ ಅಮ್ಮನಾಗುವ ಸಂದರ್ಭವಿದೆ. ವೇಶ್ಯಾವಾಟಿಕೆಯ ಮುಂದೆ ಅಸಹಾಯಕನಂತೆ ನಿಲ್ಲುವ ಪೊಲೀಸ್ ಅಧಿಕಾರಿಯ ಸ್ಥಿತಿ ವಾಸ್ತವಕ್ಕೆ ಹತ್ತಿರವಾಗಿದೆ. ದೇವಕಿಯ ಇಡೀ ಕತೆ ಕಿಶೋರ್ ಹಾಗೂ ಪ್ರಿಯಾಂಕ ಉಪೇಂದ್ರ ಅವರ ಹೆಗಲ ಮೇಲೆ ಕೂತು ಪ್ರಯಾಣಿಸುತ್ತದೆ.

ಉಪೇಂದ್ರ ಮಗಳು ಐಶ್ವರ್ಯ ಉಪೇಂದ್ರ ಈ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಪರಿಚಯಗೊಂಡಿದ್ದಾರೆ. ಅವರ ನಟನೆಯ ಮಿಕ್ಕ ಆಯಾಮಗಳಿಗಾಗಿ ಮುಂಬರುವ ಚಿತ್ರಗಳಿಗಾಗಿ ಕಾಯಬೇಕು.

ಚಿತ್ರ: ದೇವಕಿ
ತಾರಾಗಣ: ಪ್ರಿಯಾಂಕ ಉಪೇಂದ್ರ, ಕಿಶೋರ್,
ಐಶ್ವರ್ಯ ಉಪೇಂದ್ರ, ಸಂದೀಪ್,
ಸಂಜೀವ್ ಜೈಸ್ವಾಲ್
ನಿರ್ದೇಶಕ: ಲೋಹಿತ್
ನಿರ್ಮಾಣ: ರವೀಶ್ ಆರ್ ಸಿ, ಅಕ್ಷಯ್ ಸಿ ಎಸ್
ಛಾಯಾಗ್ರಹಣ: ಎಚ್ ಸಿ ವೇಣು
ಸಂಗೀತ: ನೊಬಿನ್ ಪಾಲ್
ರೇಟಿಂಗ್: ***

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಪಘಾತದಲ್ಲಿ ತಂದೆ ಆಸ್ಪತ್ರೆ ದಾಖಲಾದ ಬೆನ್ನಲ್ಲೇ ರಾಜ್ಯ ಪ್ರಶಸ್ತಿ ವಿಜೇತ ಯುವ ನಟ ಶವವಾಗಿ ಪತ್ತೆ
ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ