‘ಅಮ್ಮಚ್ಚಿಯೆಂಬ ನೆನಪು’ಚಿತ್ರಕ್ಕೆ ಕಥೆಗಾರ್ತಿ ವೈದೇಹಿ ಖುಷಿಯಾದರು

By Kannadaprabha NewsFirst Published Oct 5, 2018, 12:35 PM IST
Highlights

ಒಂದು ಸಿನಿಮಾ ಹೇಗಿದೆ ಎನ್ನುವುದಕ್ಕೆ ಒಂದು ಹಾಡು ಸಾಕು. ಇಲ್ಲಿ ಹಾಡೇ ಎಲ್ಲವನ್ನೂ ಹೇಳಿದೆ.
 - ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಆ ಚಿತ್ರದ ಬಗೆಗೆ ಹೀಗೊಂದು ಮುನ್ನೋಟ ಕೊಟ್ಟು ಕುತೂಹಲ ಕೆರಳಿಸಿದರು. ಅವರು ಹಾಗೆ ಹೇಳಿದ್ದು ‘ಅಮ್ಮಚ್ಚಿಯೆಂಬ ನೆನಪು’ ಚಿತ್ರದ ಕುರಿತು. ಇತ್ತೀಚೆಗಷ್ಟೇ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ರಂಗಕರ್ಮಿ ಶ್ರೀನಿವಾಸ್ ಕಪ್ಪಣ್ಣ ಹಾಗೂ ಕಥೆಗಾರ್ತಿ ವೈದೇಹಿ ಅಂದಿನ ಆಕರ್ಷಣೆ. ವಿಶೇಷ ಅಂದ್ರೆ, ಇದು ವೈದೇಹಿ ಅವರ ಕಾದಂಬರಿ. ಅದನ್ನು ಚಿತ್ರಕ್ಕೆ ಅಳವಡಿಸಿದ್ದು ನಿರ್ದೇಶಕಿ ಚಂಪಾ ಪಿ.ಶೆಟ್ಟಿ. ಈ ಹಿಂದೆ ಅವರೇ ಇದನ್ನು ನಾಟಕ ರೂಪಕ್ಕೂ ತಂದು ಹಲವು ಪ್ರಯೋಗ ಮಾಡಿದ್ದರು. ಅದೀಗ ಸಿನಿಮಾ ರೂಪದೊಂದಿಗೆ ಸದ್ದು ಮಾಡುತ್ತಿದೆ. ಅಂದು ಚಿತ್ರದ ಆಡಿಯೋ ಲಾಂಚ್ ಮೂಲಕ ಚಿತ್ರ ತಂಡ ಮಾಧ್ಯಮದ ಮುಂದೆ ಬಂದಿತ್ತು. ಮೊದಲು ಹಾಡುಗಳನ್ನು ಪ್ರದರ್ಶಿಸಲಾಯಿತು.

ಹಾಡು ವೀಕ್ಷಿಸಿದ ವೈದೇಹಿ, ‘ನನ್ನ ಕಥೆ ದೃಶ್ಯರೂಪದಲ್ಲಿ ಅಷ್ಟೊಂದು ಚೆನ್ನಾಗಿ ಕಾಣುತ್ತಿರುವುದನ್ನು ನೋಡಿ ಖುಷಿಯಾಯ್ತು. ನಾನು ಹಿಂದೆ ‘ಅಕ್ಕು’ ನಾಟಕ ನೋಡಿ ಖುಷಿಪಟ್ಟಿದ್ದೆ. ಈ ಚಿತ್ರ ನನ್ನ ಕಥೆಯನ್ನೂ ದಾಟಿ ಹೋಗಿದೆ. ಕಥೆ ಬರೆಯುವಾಗ, ನಾನು ಕಂಡ ಜಗತ್ತು ಬೇರೆ ಯಾಗಿತ್ತು. ಚಿತ್ರ ನೋಡಿದಾಗ, ಇನ್ನೊಂದು ಮಜಲು ಎನಿಸಿದೆ. ಆಶಯವೆಲ್ಲ ಚೌಕಟ್ಟಿನೊಳಗೆ ಇಟ್ಟು ಸಿನಿಮಾ ಮಾಡಿದ್ದಾರೆ.ಇದೊಂದು ಹೊಸತನದ ನಿರೂಪಣೆಯ ಚಿತ್ರ. ಕಥೆ ಇಟ್ಟು ಚಿತ್ರ ಮಾಡಿದ್ದಕ್ಕೆ ಸಾರ್ಥಕವೆನಿಸಿದೆ’ ಎಂಬುದು ವೈದೇಹಿ ಅವರ ಮಾತು.

ಹಾಡು ವೀಕ್ಷಿಸಿದ ವೈದೇಹಿ, ‘ನನ್ನ ಕಥೆ ದೃಶ್ಯರೂಪದಲ್ಲಿ ಅಷ್ಟೊಂದು ಚೆನ್ನಾಗಿ ಕಾಣುತ್ತಿರುವುದನ್ನು ನೋಡಿ ಖುಷಿಯಾಯ್ತು. ನಾನು ಹಿಂದೆ ‘ಅಕ್ಕು’ ನಾಟಕ ನೋಡಿ ಖುಷಿಪಟ್ಟಿದ್ದೆ. ಈ ಚಿತ್ರ ನನ್ನ ಕಥೆಯನ್ನೂ ದಾಟಿ ಹೋಗಿದೆ. ಕಥೆ ಬರೆಯುವಾಗ, ನಾನು ಕಂಡ ಜಗತ್ತು ಬೇರೆ ಯಾಗಿತ್ತು. ಚಿತ್ರ ನೋಡಿದಾಗ, ಇನ್ನೊಂದು ಮಜಲು ಎನಿಸಿದೆ. ಆಶಯವೆಲ್ಲ ಚೌಕಟ್ಟಿನೊಳಗೆ ಇಟ್ಟು ಸಿನಿಮಾ ಮಾಡಿದ್ದಾರೆ. ಇದೊಂದು ಹೊಸತನದ ನಿರೂಪಣೆಯ ಚಿತ್ರ. ಕಥೆ ಇಟ್ಟು ಚಿತ್ರ ಮಾಡಿದ್ದಕ್ಕೆ ಸಾರ್ಥಕವೆನಿಸಿದೆ’ ಎಂಬುದು ವೈದೇಹಿ ಅವರ ಮಾತು.

ನಂತರ ಕಪ್ಪಣ್ಣ ಅವರ ಮಾತು. ಅವರ ಪ್ರಕಾರ, ಆಸಕ್ತಿ ಇರುವವರಿಗೆ ಮಾತ್ರ, ಕೃತಿ ಇಟ್ಟುಕೊಂಡು ಸಿನಿಮಾ ಕಟ್ಟಿಕೊಡಲು ಸಾಧ್ಯ. ಹಾಗಂತಲೇ ಮಾತು ಶುರು ಮಾಡಿದರು. ‘ಇಲ್ಲಿ ಶುದ್ಧ ಸಾಹಿತ್ಯ, ಶುದ್ಧ ಸಂಗೀತವಿದೆ. ಇಂತಹ ಚಿತ್ರಗಳು ಜನರನ್ನು ತಲುಪಬೇಕು. ಎಲ್ಲರ ಶ್ರಮ ಇಲ್ಲಿ ಎದ್ದು ಕಾಣುತ್ತಿದೆ. ರಂಗಾಸಕ್ತರೆಲ್ಲ ಸೇರಿ ಹಿಂದೆ ‘ಕಾಕನ ಕೋಟೆ’ ಚಿತ್ರ ಮಾಡಿದ್ದೆವು. ಆ ಚಿತ್ರ ಹಲವು ಪ್ರಶಸ್ತಿ ಪಡೆದಿತ್ತು. ಈ ಚಿತ್ರಕ್ಕೂ ರಂಗಾಸಕ್ತರ ಸ್ಪರ್ಶವಿದೆ. ಇದಕ್ಕೂ ಮೆಚ್ಚುಗೆ ಸಿಗಲಿ’ ಎಂದು ಶುಭಹಾರೈಸಿದರು ಶ್ರೀನಿವಾಸ್ ಕಪ್ಪಣ್ಣ. ಆಡಿಯೋ ಸಿಡಿ ಬಿಡುಗಡೆ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ, ನಿರ್ದೇಶಕಿ ಚಂಪಾ ಪಿ.ಶೆಟ್ಟಿ ಪ್ರಯತ್ನ ಸಾರ್ಥಕ ಎನಿಸಿದೆಯಂತೆ. ‘ಇಲ್ಲಿ ಹಾಡೇ ಎಲ್ಲವನ್ನೂ ಹೇಳಿದೆ. ಸಾಹಿತ್ಯದ ವ್ಯಾಕರಣ ಬೇರೆ, ಸಿನಿಮಾ ವ್ಯಾಕರಣವೇ ಬೇರೆ. ಎರಡನ್ನೂ ಬ್ಯಾಲೆನ್ಸ್ ಮಾಡಿ ಸಿನಿಮಾ ಮಾಡುವುದು ಸುಲಭವಲ್ಲ. ಚಿತ್ರಕ್ಕೆ ಗೆಲುವು ಸಿಗಲಿ’ ಎಂದರು ನಾಗತಿಹಳ್ಳಿ ಚಂದ್ರಶೇಖರ್. ನಿರ್ದೇಶಕಿ ಚಂಪಾ ಪಿ.ಶೆಟ್ಟಿ ಅಂದು ಹೆಚ್ಚು ಮಾತನಾಡಲಿಲ್ಲ. ಎಲ್ಲರ ಸಹಕಾರಕ್ಕೆ ಥ್ಯಾಂಕ್ಸ್ ಹೇಳಿದರು. ‘ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಪ್ರೋತ್ಸಾಹ ಇರಲಿ’ ಎಂದಷ್ಟೇ ಹೇಳಿ ಸುಮ್ಮನಾದರು. 

click me!