ಆ ಸಿನಿಮಾ ನೋಡಿದ ಬಳಿಕ ನಾನೇ ಬದಲಾಗಿದ್ದೆ: ಮನದ ನೋವು ಹಂಚಿಕೊಂಡ ಶ್ರೀಲೀಲಾ!

Published : Nov 18, 2026, 05:15 PM IST
Sreeleela

ಸಾರಾಂಶ

ಆ ಸಿನಿಮಾ ನೋಡಿದ ಬಳಿಕ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೆ ಎಂದು ನಟಿ ಶ್ರೀಲೀಲಾ ಹೇಳಿದ್ದಾರೆ. ಧನುಷ್ ಜೊತೆಗಿನ ಹೊಸ ಚಿತ್ರದ ಪ್ರಚಾರದ ನಡುವೆ ಅಮರನ್ ಚಿತ್ರದ ಅನುಭವ ಹಂಚಿಕೊಂಡ ನಟಿಯ ಮಾತುಗಳು ವೈರಲ್ ಆಗಿವೆ.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಶ್ರೀಲೀಲಾ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅಮರನ್ ಸಿನಿಮಾ ಕುರಿತು ಮಾತನಾಡಿದ್ದಾರೆ. ಈ ಚಿತ್ರದ ಬಗ್ಗೆ ಅವರು ಹಂಚಿಕೊಂಡಿರುವ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ತೆಲುಗು ಚಿತ್ರರಂಗದಲ್ಲಿ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರೀಲೀಲಾ, ಇಂದು ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಪ್ರಮುಖ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಅಭಿನಯದ ಸಿನಿಮಾಗಳು ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ವಿಮರ್ಶಕರ ಮೆಚ್ಚುಗೆ ಮಾತ್ರವಲ್ಲದೆ, ಬಾಕ್ಸ್ ಆಫೀಸ್‌ನಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ.

ಇನ್ನು ಈ ವರ್ಷ ಬಿಡುಗಡೆಯಾದ ಪರಾಶಕ್ತಿ ಚಿತ್ರದ ಮೂಲಕ ಶ್ರೀಲೀಲಾ ತಮಿಳು ಚಿತ್ರರಂಗಕ್ಕೂ ನಾಯಕಿಯಾಗಿ ಪದಾರ್ಪಣೆ ಮಾಡಿದ್ದಾರೆ. ಸಿನಿಮಾ ನಿರೀಕ್ಷಿತ ಮಟ್ಟದ ಯಶಸ್ಸು ಕಾಣದಿದ್ದರೂ, ಚಿತ್ರದಲ್ಲಿನ ಶ್ರೀಲೀಲಾ ಅವರ ಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ತಮಿಳಿನಲ್ಲಿ ಮತ್ತಷ್ಟು ಸಿನಿಮಾಗಳಲ್ಲಿ ನಟಿಸಲು ಅವರು ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ.

ಈ ನಡುವೆ ಶ್ರೀಲೀಲಾ ಅಭಿನಯದ ಮತ್ತೊಂದು ತಮಿಳು ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ನಟ ಧನುಷ್ ನಾಯಕನಾಗಿ ನಟಿಸಿರುವ ಓ.ಎಂ. ಆಪರೇಷನ್ ಮೋಲ್ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳು ಬಿರುಸಿನಿಂದ ಸಾಗುತ್ತಿದ್ದು, ಈ ಸಂದರ್ಭದಲ್ಲೇ ಅವರು ನೀಡಿರುವ ಸಂದರ್ಶನವೊಂದು ಸದ್ದು ಮಾಡುತ್ತಿದೆ.

ಅಮರನ್ ಸಿನಿಮಾ ನೋಡಿದ ಬಳಿಕ ಮನಸ್ಸಿಗೆ ತೀವ್ರ ನೋವಾಗಿತ್ತು

ಇನ್ನು ಸಂದರ್ಶನದಲ್ಲಿ ನಿರ್ದೇಶಕ ರಾಜ್‌ಕುಮಾರ್ ಪೆರಿಯಸ್ವಾಮಿ ಅವರ ಅಮರನ್ ಸಿನಿಮಾ ಕುರಿತು ಮಾತನಾಡಿದ ಶ್ರೀಲೀಲಾ, ಚಿತ್ರವನ್ನು ವೀಕ್ಷಿಸಿದ ಬಳಿಕ ತಾವು ಅನುಭವಿಸಿದ ಭಾವನಾತ್ಮಕ ಸಂಕಟವನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕ ರಾಜ್‌ಕುಮಾರ್ ಪೆರಿಯಸ್ವಾಮಿ ಅವರ ಅಮರನ್ ಸಿನಿಮಾ ನೋಡಿದ ಬಳಿಕ ನಾನು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೆ. ಏನು ಹೇಳಬೇಕು ಎಂಬುದೇ ನನಗೆ ತಿಳಿಯಲಿಲ್ಲ. ಅಷ್ಟೊಂದು ನೋವಾಗಿತ್ತು. ಆ ಸಿನಿಮಾ ನೀಡಿದ ಅನುಭವ ಬಹಳ ಭಾರವಾಗಿತ್ತು.

ಒಂದು ಸಿನಿಮಾವನ್ನು ನೋಡಿದ ಬಳಿಕ ಅದರ ಪ್ರಭಾವ ನಮ್ಮ ಮನಸ್ಸಿನಲ್ಲಿ ಬಹಳ ಸಮಯ ಉಳಿದುಕೊಳ್ಳುತ್ತದೆ. ಈ ಸಿನಿಮಾ ನಾನು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಸಮಯ ನನ್ನ ಮನಸ್ಸಿನಲ್ಲಿ ಉಳಿಯಿತು. ಅದೇ ವ್ಯಕ್ತಿಗಳ ಜೊತೆ ಸೇರಿ ನಾನೂ ಒಂದು ಸಿನಿಮಾದಲ್ಲಿ ಕೆಲಸ ಮಾಡುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದು ಶ್ರೀಲೀಲಾ ಹೇಳಿದ್ದಾರೆ. ಶ್ರೀಲೀಲಾ ಅವರ ಈ ಮಾತುಗಳು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಅಮರನ್ ಸಿನಿಮಾ ಅವರ ಮೇಲೆ ಬೀರಿದ ಭಾವನಾತ್ಮಕ ಪರಿಣಾಮದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾವಿ ಪತಿ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದವರಿಗೆ ಸ್ಪಂದನಾ ಸೋಮಣ್ಣ ಕೊಟ್ರು ಖಡಕ್ ವಾರ್ನಿಂಗ್!
'ಪ್ರೇಮದ ಊರಲಿ' ಸಿನಿಮಾದಂತೆ ಥಿಯೇಟರ್ ಸಿಗದ 40 ವರ್ಷ ಹಳೆಯ 'ಶಂಖನಾದ' ಮಾಡಿತ್ತು 105 ದಿನ ಪ್ರದರ್ಶನ ದಾಖಲೆ!