'ರತ್ನಮಂಜರಿ'ಗೆ ಸಾಥ್ ಕೊಟ್ಟ ಭರಾಟೆ ಕಿಂಗ್!

Published : Apr 15, 2019, 09:29 AM IST
'ರತ್ನಮಂಜರಿ'ಗೆ ಸಾಥ್ ಕೊಟ್ಟ ಭರಾಟೆ ಕಿಂಗ್!

ಸಾರಾಂಶ

ಎನ್‌ಆರ್‌ಐ ಕನ್ನಡಿಗರೇ ನಿರ್ಮಿಸಿ, ನಿರ್ದೇಶಿಸಿರುವ ‘ರತ್ನಮಂಜರಿ’ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ.

ಚಿತ್ರತಂಡ ಅಂದುಕೊಂಡಂತಾದರೆ ಮೇ ತಿಂಗಳಲ್ಲಿ ಈ ಚಿತ್ರ ತೆರೆಗೆ ಬರುವುದು ಖಚಿತ. ಸದ್ಯಕ್ಕೀಗ ಚಿತ್ರತಂಡವು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ಮೂಲಕ ಚಿತ್ರದ ಒಂದು ಡ್ಯುಯೆಟ್ ಸಾಂಗ್ ಲಾಂಚ್ ಮಾಡಿದೆ. ಅದು ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾಹಿತಿ ಕೆ. ಕಲ್ಯಾಣ್ ರಚನೆಯ ‘ಒಮ್ಮೆ ನನ್ನವಳು ನಕ್ಕರೆ ಸಾಕು...’ಎನ್ನುವ ಸಾಲುಗಳ ಯುಗಳ ಗೀತೆಗೆ ಯುವ ಪ್ರತಿಭೆ ಹರ್ಷ ವರ್ಧನ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಗಾಯಕರಾದ ಟಿಪ್ಪು ಹಾಗೂ ಸುಪ್ರಿಯಾ ಲೋಹಿತ್ ಧ್ವನಿ ನೀಡಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋವನ್ನು ಶ್ರೀಮುರುಳಿ ಬಿಡುಗಡೆ ಮಾಡಿದರು. ಈ ಡ್ಯುಯೆಟ್ ಗೀತೆಗೆ ಅಪಾರ ಮೆಚ್ಚುಗೆ ಹೇಳಿರುವ ಅವರು, ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಶುಭ ಕೋರಿದರು. ‘ತಂಡದ ಶ್ರಮ ಸಾರ್ಥಕವಾಗ ಬೇಕಾದರೆ, ಚಿತ್ರಕ್ಕೆ ಕನ್ನಡಿಗರ ಬೆಂಬಲ ಸಿಗಬೇಕಿದೆ’ ಎಂದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

NTR, ಕಮಲ್ ಹಾಸನ್ ದಾಖಲೆ ಮುರಿಯಲು ಸಜ್ಜಾದ ಹಾಸ್ಯನಟ ಯಾರು? ಏನಿದು ಅಸಲಿ ಕಥೆ?
Anchor Suma: 'ಸುಮಾ ಗಂಡ' ಅನ್ನೋದು ಇಷ್ಟವಿಲ್ಲ: 'ಸುಮಾ ಬಿಟ್ಟ ಗಂಡ' ಅನ್ನಿಸಿಕೊಳ್ಳಬೇಡ ಎಂದಿದ್ಯಾಕೆ ಗೆಳೆಯ!