
ನಿರ್ದೇಶಕ ಶಶಾಂಕ್ ಹೋಮ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ‘ತಾಯಿಗೆ ತಕ್ಕ ಮಗ’ ಚಿತ್ರದಲ್ಲಿ ಹಿರಿಯ ನಟಿ ಸುಮಲತಾ, ತಾಯಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆನ್ನುವುದು ಹಳೇ ಸುದ್ದಿ. ಅಷ್ಟೇ ಅಲ್ಲ, ‘ಎಕ್ಸ್ ಕ್ಯೂಸ್..ಮಿ’ ಚಿತ್ರ ಬಂದು ಹೋದ 14 ವರ್ಷಗಳ ನಂತರ ನಟ ಅಜಯ ರಾವ್‌ಗೆ ಮತ್ತೆ ಅವರು ತಾಯಿಯಾಗಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ಮತ್ತೊಂದು ವಿಶೇಷ. ಇದರಾಚೆಗೂ ನಟಿ ಸುಮಲತಾ ಅವರಿಗೆ ‘ತಾಯಿಗೆ ತಕ್ಕ ಮಗ’ ಚಿತ್ರ ತಮ್ಮ ಸಿನಿ ಜರ್ನಿಯಲ್ಲಿ ವಿಶೇಷತೆಯಲ್ಲಿಯೇ ವಿಶೇಷ ಎನಿಸಿದ್ದಕ್ಕೆ ಎರಡು ಕಾರಣಗಳಿವೆಯಂತೆ. ಅದರಲ್ಲಿ ಪ್ರಮುಖವಾದದ್ದು ಒಂದು ಪಾತ್ರ. ಮತ್ತೊಂದು ಚಿತ್ರಕತೆಯ ಸ್ಕ್ರಿಪ್ಟ್. ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಅವರೇ ಈ ಮಾತು ಹೇಳಿದರು. ಚಿತ್ರತಂಡ ಅಂದುಕೊಂಡಂತೆ ಈ ಚಿತ್ರಕ್ಕೆ ಸೋಮವಾರ ಅದ್ಧೂರಿ ಮುಹೂರ್ತ ನಡೆಯಿತು.
ಚಿತ್ರದ ಶೀರ್ಷಿಕೆಯ ಆಶಯಕ್ಕೆ ತಕ್ಕಂತೆ ನಿರ್ಮಾಪಕ ಶಶಾಂಕ್ ಮತ್ತು ನಾಯಕ ನಟ ಅಜಯ್ ರಾವ್ ತಾಯಿ, ಚಿತ್ರದ ಮುಹೂರ್ತದ ಕೇಂದ್ರ ಬಿಂದು.ಅವರೊಂದಿಗೆ ಅಲ್ಲಿ ಗಮನ ಸೆಳೆದಿದ್ದು ನಟಿ ಸುಮಲತಾ. ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ಮುಗಿದ ನಂತರ ಮಾತಿಗೆ ಕುಳಿತಾಗ ಅವರು ತಾವು ಈ ಪಾತ್ರ ಒಪ್ಪಿಕೊಂಡಿದ್ದರ ಕಾರಣ ತೆರೆದಿಟ್ಟರು. ಅವರು ಮೊದಲು ಹೇಳಿದ್ದು ಇದೇ ಮೊದಲು ಒಂದು ಬೌಂಡೆಡ್ ಸ್ಕ್ರಿಪ್ಟ್ ಓದಿದ್ದರ ಕುರಿತು. ನನ್ನ ಸಿನಿಮಾ ಜರ್ನಿ ಶುರುವಾಗಿ 36
ವರ್ಷ. 1980ರಲ್ಲಿ. ಅಲ್ಲಿಂದ ಇಲ್ಲಿ ತನಕ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಒಂದು ಬೌಂಡೆಡ್ ಸ್ಕ್ರಿಪ್ಟ್ ಕೈಯಲ್ಲಿಡಿದು, ಅಷ್ಟು ಕತೆಯನ್ನು ಕುತೂಹಲದಿಂದ ಒಂದೇ ಉಸಿರಲ್ಲಿ ಓದಿ ಮುಗಿಸಿದ್ದು ಈ ಚಿತ್ರದ ಕತೆ ಮಾತ್ರ. ಕತೆ, ಚಿತ್ರಕತೆ, ಬರವಣಿಗೆ ಮತ್ತು ಚಿತ್ರದ ಸಿದ್ಧತೆಯಲ್ಲಿ ಶಶಾಂಕ್ ಮತ್ತವರ ತಂಡ ನೀಟ್‌ನೆಸ್ ವಹಿಸಿದೆ. ಅದು ಮೊದಲು ನನಗೆ ತುಂಬಾನೆ ಇಂಪ್ರೆಸ್ ಮಾಡಿತು.
ಆ ನಂತರ ಪಾತ್ರ. ಇಲ್ಲಿ ನಾನು ಲಾಯರ್. ಮಗ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದರೆ, ನಾನು ನ್ಯಾಯಾಲಯದಲ್ಲಿ ನಿಂತು ಆತನ ಹೋರಾಟಕ್ಕೆ ಬೆಂಬಲ ನೀಡುತ್ತೇನೆ. ಆ ಮಟ್ಟಿಗೆ ನಾನೊಬ್ಬ ರೆಬೆಲ್ ಮದರ್. ಪಾತ್ರ ಅದ್ಭುತವಾಗಿದೆ’ಎಂದರು. ಇನ್ನು ನಿರ್ಮಾಪಕ ಕಮ್ ನಿರ್ದೇಶಕ ಶಶಾಂಕ್ ಹೇಳುವ ಪ್ರಕಾರ ಈ ಕತೆ ಹುಟ್ಟಿದ್ದಕ್ಕೆ ಅಜಯರಾವ್ ಅವರೇ ಕಾರಣವಂತೆ. ‘ಪ್ರತಿಯೊಬ್ಬರಿಗೆ ಅವರ ತಾಯಿ ಅಂದ್ರೆ ಪಂಚ ಪ್ರಾಣ. ವಿಶೇಷವಾದ ಪ್ರೀತಿ, ಕಾಳಜಿ ಇದ್ದೇ ಇರುತ್ತೆ. ಆದರೆ, ಅಜಯ ರಾವ್ ಅವರಿಗೆ ತಮ್ಮ ತಾಯಿಯ ಮೇಲೆ ವಿಶೇಷವಾದ ಪ್ರೀತಿ, ಗೌರವ. ಅದನ್ನು ನೋಡಿದ ನನಗೆ ತಾಯಿಗೆ ತಕ್ಕ ಮಗ ಕತೆ ಬರೆಯಲು ಪ್ರೇರಣೆ ನೀಡಿತು. ಚಿತ್ರದಲ್ಲೂ ಒಂದಷ್ಟು ಅವರ ರಿಯಾಲಿಸ್ಟಿಕ್ ಸನ್ನಿವೇಶಗಳು ಬರುತ್ತವೆ’ ಎಂದರು ಶಶಾಂಕ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.