
ಬಾಗಲಕೋಟೆ[ಆ.20]: ಸ್ಯಾಂಡಲ್ ವುಡ್ ಭರವಸೆಯ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ ಅವರು ಬಾಗಲಕೋಟೆಯಲ್ಲಿ ಇಂದು ಗುರುಹಿರಿಯರು ಹಾಗೂ ಬಂಧುಗಳ ಸಮ್ಮುಖದಲ್ಲಿ ವೈವಾಹಿಕ ಜೀವನ ಕ್ಕೆಕಾಲಿಟ್ಟರು.
ಪಟ್ಟಣದ ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಜರುಗಿದ ವಿವಾಹದಲ್ಲಿ ನೂತನ ವಧುವರರಿಗೆ ಪುನೀತ್ ರಾಜ್'ಕುಮಾರ್ ಸೇರಿದಂತೆ ಸ್ಯಾಂಡಲ್'ವುಡ್'ನ ಹಲವು ನಟ ನಟಿಯರು ಶುಭ ಹಾರೈಸಿದರು.
ನಟ ಕೋಮಲ್ ಅಭಿನಯದ ಗೋವಿಂದಾಯ ನಮಃ ಚಿತ್ರದ ಮೂಲಕ ನಿರ್ದೇಶಕ ವೃತ್ತಿಗೆ ಕಾಲಿಟ್ಟ ಪವನ್ ಗೂಗ್ಲಿ, ರಣವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಸ್ತುತ ಪುನೀತ್ ರಾಜ್ ಕುಮಾರ್ ಅಭಿನಯದ ನಟ ಸಾರ್ವಭೌಮ ಚಿತ್ರ ನಿರ್ದೇಶಿಸುತ್ತಿದ್ದಾರೆ. ಅಪೇಕ್ಷಾ ಅವರು ಟಿ.ಎನ್. ಸೀತಾರಾಂ ನಿರ್ದೇಶನದ ಕಾಫಿ ತೋಟ ಚಿತ್ರದಲ್ಲಿ ನಟಿಸಿದ್ದಾರೆ.
ವಿವಾಹ ಸಮಾರಂಭಕ್ಕೆ ಬಂಧುಬಳಗ ಸೇರಿದಂತೆ ಕೆಲವು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಅಗಸ್ಟ್ 26 ರಂದು ಬೆಂಗಳೂರಿನ ಸ್ಯಾಂಗ್ರೀಲಾ ಹೊಟೇಲ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಅಂದು ಸ್ಯಾಂಡಲ್ ವುಡ್ ಗಣ್ಯಾತಿಗಣ್ಯರು ಆಗಮಿಸಿ ಶುಭ ಕೋರಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.