ಕೇರಳ ಪ್ರವಾಹ ಸಂತ್ರಸ್ತರಿಗೆ ಚಿಯಾನ್ ವಿಕ್ರಂ, ಹೃತಿಕ್ ರೋಶನ್ ನೆರವು

Published : Aug 20, 2018, 04:13 PM ISTUpdated : Sep 09, 2018, 08:37 PM IST
ಕೇರಳ ಪ್ರವಾಹ ಸಂತ್ರಸ್ತರಿಗೆ ಚಿಯಾನ್ ವಿಕ್ರಂ, ಹೃತಿಕ್ ರೋಶನ್ ನೆರವು

ಸಾರಾಂಶ

ಕೇರಳ ಪ್ರವಾಹ ಸಂತ್ರಸ್ತರಿಗೆ ಚಿಯಾನ್ ವಿಕ್ಂ, ಹೃತಿಕ್ ರೋಶನ್ ನೆರವು  ಪ್ರವಾಹ ಸಂತ್ರಸ್ತರಿಗೆ ದೇಶದ ಮೂಲೆ ಮೂಲೆಗಳಿಂದ ಹರಿದು ಬರುತ್ತಿದೆ ನೆರವು  ಹಣಕಾಸಿನ ನೆರವು ನೀಡಿದ ಹೃತಿಕ್ ಹಾಗೂ ಚಿಯಾನ್ ವಿಕ್ರಂ 

ತಿರುವನಂತಪುರಂ (ಆ. 20): ಕೇರಳ ಪ್ರವಾಹ ಸಂತ್ರಸ್ತರ ನೆರವಿಗೆ ಇಡೀ ದೇಶವೇ ಒಂದಾಗಿದೆ. ಲಕ್ಷಾಂತರ ಮಂದಿ ಸಹಾಯ ಮಾಡಿದ್ದಾರೆ. ಚಿತ್ರರಂಗದ ತಾರೆಯರೂ ಕೂಡಾ ನೆರವಿನ ಹಸ್ತ ಚಾಚಿದ್ದಾರೆ. 

ನಟರಾದ ಅಕ್ಷಯ್ ಕುಮಾರ್, ಅಮಿತಾಬಚ್ಚನ್, ಶಾರುಕ್ ಖಾನ್, ಚಿರಂಜೀವಿ, ಕಮಲ್ ಹಾಸನ್, ರಾಮ್ ಚರಣ್, ಪ್ರಭಾಸ್ ಸೇರಿದಂತೆ ಸಾಕಷ್ಟು ಮಂದಿ ಸಂತ್ರಸ್ತರ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಅವರ ಪಟ್ಟಿಗೆ ಇದೀಗ ಹೃತಿಕ್ ರೋಶನ್ ಹಾಗೂ ಚಿಯಾನ್ ವಿಕ್ರಮ್  ಕೂಡಾ ಸೇರಿದ್ದಾರೆ. ಹೃತಿಕ್  ರೋಶನ್ ಹಣಕಾಸಿನ ನೆರವಿನ ಜೊತೆಗೆ ಅಲ್ಲಿನ ಸ್ಥಿತಿಗತಿ ವೀಕ್ಷಿಸಲು ಒಂದು ತಂಡವನ್ನು ಕಳುಹಿಸಿದ್ದಾರೆ. 

ಚಿಯಾನ್ ವಿಕ್ರಮ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 35 ಲಕ್ಷ ರೂ ದೇಣಿಗೆ ನೀಡಿದ್ದಾರೆ. 


 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡೆವಿಲ್ ಇನ್ ಟ್ರಬಲ್: ನಟ ದರ್ಶನ್‌ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು
ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!