
ಬೆಂಗಳೂರು (ಫೆ.15): ಹಿಂದಿ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿ. ‘ಪಾನ್ ಸಿಂಗ್ ತೋಮರ್’ ಖ್ಯಾತಿಯ ನಿರ್ದೇಶಕ ಟಿಗ್ಮಾನ್ಷು ಧುಲಿಯಾ ತಮ್ಮ ‘ಮಿಲನ್ ಟಾಕೀಸ್’ ಚಿತ್ರಕ್ಕೆ ಶ್ರದ್ಧಾ ಅವರನ್ನು ಆಯ್ಕೆ ಮಾಡಿದ್ದಾರೆ. ಬಾಲಿವುಡ್ ಹಾಗೂ ಹಾಲಿವುಡ್ ಖ್ಯಾತಿಯ ನಟ ಅಲಿ ಫಝಲ್ ಈ ಚಿತ್ರದ ನಾಯಕ.
ಈಗಾಗಲೇ ಮಾತುಕತೆ ಫೈನಲ್ ಆಗಿದೆ. ಶ್ರದ್ಧಾ ಮುಂಬೈಗೆ ತೆರಳಿ ಕಾಲ್‌ಶೀಟ್ ಅಗ್ರಿಮೆಂಟ್‌ಗೂ ಸಹಿ ಹಾಕಿ ಬಂದಿದ್ದಾರೆ. ಸದ್ಯಕ್ಕೀಗ ಅವರು ‘ಗೋಧ್ರಾ’ ಚಿತ್ರದ ಚಿತ್ರೀಕರಣಕ್ಕಾಗಿ ಕೇರಳದ ‘ಅಲೆಪ್ಪಿ’ಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಈಗಾಗಲೇ ಕನ್ನಡದಿಂದ ಹೋಗಿರುವ ಅನೇಕ ಪ್ರತಿಭೆಗಳು ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದಾರೆ. ಶ್ರದ್ಧಾ ಶ್ರೀನಾಥ್ ಕೂಡ ಅವರ ಸಾಲಿಗೆ ಸೇರುವ ಲಕ್ಷಣ ಕಾಣುತ್ತಿದೆ. ಶ್ರದ್ಧಾ ಹೇಳಿದ್ದು: ‘ನಾನು ನಟಿ ಆಗಿದ್ದು ಆಕಸ್ಮಿಕ. ‘ಯೂಟರ್ನ್’ ಬಂತು, ಅಲ್ಲಿಂದ
ಕಾಲಿವುಡ್ ಕಡೆಗೂ ಕರೆ ಬಂತು. ಇಲ್ಲಿ ಸಿಕ್ಕಷ್ಟೇ ನೇಮ್ ಆ್ಯಂಡ್ ಫೇಮ್ ಅಲ್ಲೂ ಸಿಕ್ಕಿತು. ಅಲ್ಲಿಂದ ಟಾಲಿವುಡ್‌ಗೂ ಹೋದೆ. ಅಲ್ಲಿಂದ ಬಾಲಿವುಡ್‌ಗೂ ಹೋಗಬೇಕು ಅಂತ ಆಸೆ ಇತ್ತಾದರೂ ಅದಕ್ಕಂತಲೇ ಮುಂಬೈಗೆ ಹೋಗಿ ಅವಕಾಶಗಳಿಗೆ ಅಲೆದಾಟ ನಡೆಸಿದ್ದಿಲ್ಲ. ಬದಲಿಗೆ ಈ ಅವಕಾಶ ಸಿಕ್ಕಿದ್ದು ಒಬ್ಬರು ಪರಿಚಯದವರ ಮೂಲಕ. ಅವರು ಅಲ್ಲಿ ಸಿನಿಮಾ ಸ್ಕ್ರಿಪ್ಟ್ ರೈಟರ್. ಅವರು ಈ ಆಫರ್ ಬಗ್ಗೆ ಹೇಳಿದ್ರು. ಹೇಗೆ, ಏನು, ಸಿನಿಮಾ ತಂಡದ ವಿವರವೇನು ಅಂತೆಲ್ಲ ಮಾಹಿತಿ ಪಡೆದ ನಂತರವೇ ಮುಂಬೈ ವಿಮಾನ ಹತ್ತಿದೆ. ಹೋಗಿ ಕತೆ ಕೇಳಿದೆ. ಇಂಟರೆಸ್ಟಿಂಗ್ ಆಗಿತ್ತು ಆ ಕತೆ. ಪಾತ್ರವೂ ಚೆನ್ನಾಗಿತ್ತು. ಓಕೆ ಹೇಳಿ ಎಲ್ಲಾ ಫಾರ್ಮಾಲಿಟೀಸ್ ಮುಗಿಸಿಕೊಂಡು ಬಂದಿದ್ದೇನೆ’.
ಮಿಲನ್ ಟಾಕೀಸ್ ವಿಶೇಷ: ‘ಮಿಲನ್ ಟಾಕೀಸ್’ ಚಿತ್ರದ ಕತೆಯೂ ಅಷ್ಟೇ ಕುತೂಹಲಕಾರಿ ಆಗಿದೆ ಎನ್ನುತ್ತಾರೆ ಶ್ರದ್ಧಾ. ಇದರ ಇಡೀ ಕತೆ ಉತ್ತರ ಪ್ರದೇಶದ ನೇಟಿವಿಟಿಗೆ ಸಂಬಂಧಿಸಿದ್ದು. ಚಿತ್ರದ ಅಷ್ಟೂ ಚಿತ್ರೀಕರಣ ಮಾರ್ಚ್‌ನಿಂದ ಉತ್ತರ ಪ್ರದೇಶದಲ್ಲಿಯೇ ನಡೆಯಲಿದೆ. ಇನ್ನು ಈ ಚಿತ್ರದ ನಿರ್ದೇಶಕ ಟಿಗ್ಮಾನ್ಷು ಧುಲಿಯಾ ಹಾಗೂ ನಾಯಕ ಅಲಿ ಫಝಲ್ ದೊಡ್ಡ ಹೆಸರು ಮಾಡಿದವರು. ಹಾಗಾಗಿ ಶ್ರದ್ಧಾ ಅವರ ಸಿನಿಮಾ ಕೆರಿಯರ್‌ನಲ್ಲಿ ಈ ಚಿತ್ರ ಮಹತ್ವದ್ದಾಗಿದೆ. ಅಂದಹಾಗೆ ಶ್ರದ್ಧಾ ಇಲ್ಲಿ
ಕಾಲೇಜು ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.