3 ಪೆಗ್ ಹಾಡು ಚಂದನ್ ಶೆಟ್ಟಿಯದ್ದಲ್ವಾ? ಹಾಡಿನ ಹಿಂದಿರುವವರು ಯಾರು?

By Suvarna Web DeskFirst Published Feb 15, 2018, 8:48 AM IST
Highlights

ಬಿಗ್‌ಬಾಸ್ ಸೀಸನ್ ೫ಗೆ ಹೋಗುವುದಕ್ಕೂ ಮುನ್ನ ರ‌್ಯಾಪ್ ಸಿಂಗರ್ ಚಂದನ್ ಶೆಟ್ಟಿ ದೊಡ್ಡ ಸುದ್ದಿ ಆಗಿದ್ದು 3 ಪೆಗ್ ರ‌್ಯಾಪ್ ಸಾಂಗ್ ಮೂಲಕ. ಅಲ್ಲಿಂದಲೇ ಗ್ಲಾಮರ್ ಜಗತ್ತಿನಲ್ಲಿ ಒಂದಷ್ಟು ಸುದ್ದಿ ಮಾಡಿ, ಅಭಿಮಾನಿಗಳನ್ನು ಸೃಷ್ಟಿಕೊಂಡು ಈಗ ಬಿಗ್‌ಬಾಸ್ ಸೀಸನ್  5 ವಿನ್ನರ್ ಆಗಿ ಬಂದಿದ್ದು ಹಳೇ ಮಾತು. ಆದರೆ, 3  ಪೆಗ್ ರ‌್ಯಾಪ್ ಸಾಂಗ್ ಮೂಲಕ ಚಂದನ್ ಶೆಟ್ಟಿಗೆ ಸಿಕ್ಕ ಯಶಸ್ಸಿನ ಹಿಂದೆ ಅವರ ಕಾಲೇಜು ಸ್ನೇಹಿತರ ಶ್ರಮವಿದೆ ಅನ್ನೋದರ ಜತೆಗೆ, ಅವರಿಂದಾಗಿಯೇ ಚಂದನ್ ಶೆಟ್ಟಿಗೆ ಇಷ್ಟೆಲ್ಲ ಜನಪ್ರಿಯತೆ ಸಿಗುವಂತಾಯಿತು ಎನ್ನುವ ಸಂಗತಿ ಈಗ ಬಯಲಾಗಿದೆ.

ಬೆಂಗಳೂರು (ಫೆ. 15): ಬಿಗ್‌ಬಾಸ್ ಸೀಸನ್ ೫ಗೆ ಹೋಗುವುದಕ್ಕೂ ಮುನ್ನ ರ‌್ಯಾಪ್ ಸಿಂಗರ್ ಚಂದನ್ ಶೆಟ್ಟಿ ದೊಡ್ಡ ಸುದ್ದಿ ಆಗಿದ್ದು 3 ಪೆಗ್ ರ‌್ಯಾಪ್ ಸಾಂಗ್ ಮೂಲಕ. ಅಲ್ಲಿಂದಲೇ ಗ್ಲಾಮರ್ ಜಗತ್ತಿನಲ್ಲಿ ಒಂದಷ್ಟು ಸುದ್ದಿ ಮಾಡಿ, ಅಭಿಮಾನಿಗಳನ್ನು ಸೃಷ್ಟಿಕೊಂಡು ಈಗ ಬಿಗ್‌ಬಾಸ್ ಸೀಸನ್ ೫ ವಿನ್ನರ್ ಆಗಿ ಬಂದಿದ್ದು ಹಳೇ ಮಾತು. ಆದರೆ, 3  ಪೆಗ್ ರ‌್ಯಾಪ್ ಸಾಂಗ್ ಮೂಲಕ ಚಂದನ್ ಶೆಟ್ಟಿಗೆ ಸಿಕ್ಕ ಯಶಸ್ಸಿನ ಹಿಂದೆ ಅವರ ಕಾಲೇಜು ಸ್ನೇಹಿತರ ಶ್ರಮವಿದೆ ಅನ್ನೋದರ ಜತೆಗೆ, ಅವರಿಂದಾಗಿಯೇ ಚಂದನ್ ಶೆಟ್ಟಿಗೆ ಇಷ್ಟೆಲ್ಲ ಜನಪ್ರಿಯತೆ ಸಿಗುವಂತಾಯಿತು ಎನ್ನುವ ಸಂಗತಿ ಈಗ ಬಯಲಾಗಿದೆ.

ಚಂದನ್ ಶೆಟ್ಟಿಯ ಒಂದು ಕಾಲದ ಆತ್ಮೀಯ ಗೆಳೆಯ ನಿರ್ದೇಶಕ ವಿಜೇತ ಕೃಷ್ಣ ಅವರಿಂದಲೇ ಈ ವಿಚಾರ ಹೊರಬಿದ್ದಿದೆ. ‘3 ಪೆಗ್ ರ‌್ಯಾಪ್ ಸಾಂಗ್ ಸಂಗೀತ ಸಂಯೋಜನೆಯಲ್ಲಿ ತಮ್ಮ ಪಾತ್ರವಿದ್ದರೂ ಚಂದನ್ ಅದನ್ನು ಹೈಡ್ ಮಾಡುತ್ತಿರುವ ದುರುದ್ದೇಶ ತಮಗೆ ಅರ್ಥವಾಗುತ್ತಿಲ್ಲ’ ಅಂತ ಬೇಸರ ಹೊರ ಹಾಕಿದ್ದಾರೆ ವಿಜೇತ್ ಕೃಷ್ಣ. ಈ ವಿಜೇತ ಕೃಷ್ಣ ಬೇರಾರು ಅಲ್ಲ,ಅರ್ಜುನ್ ಸರ್ಜಾ ದೂರ ಸಂಬಂಧಿ.


ವಿಜೇತ್ ಕೃಷ್ಣ ಹೇಳುವ ಪ್ರಕಾರ: ಮೈಸೂರಿನಲ್ಲಿ ಕಾಲೇಜು ಓದುತ್ತಿದ್ದಾಗ ವಿಜೇತ್‌ಗೆ ಚಂದನ್ ಶೆಟ್ಟಿ ಪರಿಚಯವಾಗಿತ್ತಂತೆ. ಆ ಹೊತ್ತಿಗೆ ವಿಜೇತ್ ಹಾಗೂ ಧ್ರುವ ಸರ್ಜಾ, ಅವರ ಸಹೋದರ ಸೂರಜ್ ಸರ್ಜಾ (ಕಿಶೋರ್ ಸರ್ಜಾ ಪುತ್ರ) ಸೇರಿ ನಾಲ್ಕೈದು ಯುವಕರ ತಂಡ ಕನ್ನಡದಲ್ಲೂ ರ‌್ಯಾಪ್ ಸಾಂಗ್ ನಿರ್ಮಾಣಕ್ಕೆ ಮುಂದಾಗಿತ್ತು. ಹಾಗೂ ಸಂಗೀತ ನಿರ್ದೇಶನ ಗೊತ್ತಿದ್ದ  ಕಾರಣಕ್ಕೆ ರ‌್ಯಾಪ್ ಸಾಂಗ್ ಮೂಲಕ ತಮ್ಮನ್ನು ಗುರುತಿಸಿಕೊಳ್ಳಬೇಕು ಎನ್ನುವ ಆಸೆ ಈ ತಂಡಕ್ಕೆ ಇತ್ತು. ಈ
ಹಂತದಲ್ಲಿ ಡೌನ್ಸ್ ಆರ್ ರಿದಮ್ ಹೆಸರಿನ ಒಂದು ಆಲ್ಬಂ ಹೊರ ತಂದಿದ್ದರು. ಆ ನಂತರ ಅವರ ಟೀಮ್‌’ಗೆ ಪರಿಚಯವಾಗಿದ್ದು ಚಂದನ್ ಶೆಟ್ಟಿ. ಅದು 2008 ರ ಸಮಯ. ಆ ಹೊತ್ತಿಗೆ ಚಂದನ್ ಮೈಸೂರಿನ ವಿದ್ಯಾ
ವಿಕಾಸ್ ಕಾಲೇಜಿನಲ್ಲಿ ಡಿಪ್ಲೊಮಾ ಓದುತ್ತಿದ್ದರು. ಅವರು ವಿಜೇತ ತಂಡಕ್ಕೆ ಪರಿಚಯವಾದ ನಂತರ 2010 ರಲ್ಲಿ 3 ಪೆಗ್ ರ‌್ಯಾಪ್ ಸಾಂಗ್ ಹೊರ ತರುವ ಪ್ರಯತ್ನ ನಡೆದಿತ್ತು. ಆದರೆ ಅದು ಆ ಹೊತ್ತಿಗೆ ಪೂರ್ಣ ಪ್ರಮಾಣದಲ್ಲಿ ಕೈಗೂಡಲಿಲ್ಲ. ಅಲ್ಲಿಂದ ನಾವೆಲ್ಲ ಬೆಂಗಳೂರಿಗೆ ಬಂದು ಸಂಗೀತ ನಿರ್ದೇಶನದಲ್ಲಿ ತೊಡಗಿಸಿಕೊಂಡ ನಂತರ ಮತ್ತೆ  ರ‌್ಯಾಪ್ ಸಾಂಗ್ ಹೊರ ತರುವ ಪ್ರಯತ್ನ ನಡೆಯಿತು. ಚಂದನ್ ತಾವೇ ‘ಹಾಳಾಗ್ ಹೋದೆ’ ರ‌್ಯಾಪ್ ಸಾಂಗ್ ಹೊರ ತಂದರು. ನಾನದಕ್ಕೆ ಪ್ರೋಗ್ರಾಮಿಂಗ್ ಮಾಡಿದೆ.
2912 ರಲ್ಲಿ ಮತ್ತೆ 3 ಪೆಗ್ ರ‌್ಯಾಪ್ ಸಾಂಗ್ ಹೊರ ತರಲು ಹೊರಟೆವು. ಅದಕ್ಕೆ ಚಂದನ್ ಸಾಹಿತ್ಯ ಬರೆದರು. ನಾನು ಸಂಗೀತ ನೀಡಿದೆ. ಮತ್ತೆ ಅದು ಅರ್ಧಕ್ಕೆ ನಿಂತು ಹೋಯಿತು. 2016 ರಲ್ಲಿ ಅದನ್ನು ಯೂಟ್ಯೂಬ್‌ಗೆ ಲಾಂಚ್ ಮಾಡಿದೆವು. ಆರಂಭದಲ್ಲಿ ಸಾಕಷ್ಟು ಸುದ್ದಿ ಆಯಿತು. ಒಂದಷ್ಟು ಹಣ ಬಂತು. 15 ಸಾವಿರ ಮಾತ್ರ ನಾನು ತೆಗೆದುಕೊಂಡೆ. ಮುಂದೆ ಯುಟ್ಯೂಬ್‌ನಲ್ಲಿ ಅದು ವೈರಲ್ ಆಗಿ, ಸಾಕಷ್ಟು ಹಣ ಬಂದರೂ ಚಂದನ್ ನಮಗೆ ಯಾವುದೇ ಮಾಹಿತಿ ಕೊಡಲಿಲ್ಲ. ಮೊಬೈಲ್‌'ಗೆ ಕರೆ ಮಾಡಿದ್ರೆ ರೆಸ್ಪಾನ್ಸ್ ಮಾಡುತ್ತಿಲ್ಲ ಎಂದು ಬೇಸರ ಹೊರ ಹಾಕುತ್ತಾರೆ ವಿಜೇತ್ ಕೃಷ್ಣ.
 

ವಿಜೇತ್ ಕೃಷ್ಣ ಮತ್ತು ಚಂದನ್ ಶೆಟ್ಟಿ ನಡುವೆ ಆಗಿದ್ದೇನು?

ರ‌್ಯಾಪ್ ಸಾಂಗ್ ಹೊರ ತರುವಲ್ಲಿ ಇವರು ನಡುವೆ ಯಾವುದೇ ರೈಟಿಂಗ್ ಅಗ್ರಿಮೆಂಟ್ ಆಗಿಲ್ಲ. ಸ್ನೇಹಿತರಾಗಿ ಎಲ್ಲವನ್ನು ಮಾಡಿದ್ದಾರೆ. 3  ಪೆಗ್ ಹೊರ ಬಂದ ನಂತರ ಚಂದನ್ ತೆರೆ ಮೇಲೆ ಕಾಣಿಸಿಕೊಂಡಿದ್ದರಿಂದ ಅವರೇ ಹೈಲೈಟ್ ಆದರು.
ಅವರಿಗೆ ಜನಪ್ರಿಯತೆ ಸಿಕ್ಕಿತು. ಏನು ನಡೆಯುತ್ತಿದೆ ಅಂತ ತಮಗೆ ಗೊತ್ತಿರಲಿಲ್ಲ. ಹಾಗಾಗಿ ಕೇಳುವುದಕ್ಕೂ ಹೋಗಿರಲಿಲ್ಲ. ಆದರೆ ಈಗ ಕೆಲವರು ಈ ಬಗ್ಗೆ ಹೇಳಿದಾಗ ಬೇಸರವಾಗುತ್ತಿದೆ ಅಂತಾರೆ ವಿಜೇತ್. 

click me!