
ಬೆಂಗಳೂರು: ನೀನಾಸಂ ಮಂಜು ನಿರ್ದೇಶನದ ‘ಮೂಕ ಹಕ್ಕಿ' ಚಿತ್ರೀಕರಣದ ವೇಳೆ ನಟಿ ಪೂಜಾ ಗಾಯಗೊಂಡಿದ್ದಾರೆ. ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣದ ನಂತರ ಚಿತ್ರತಂಡ ಪ್ಯಾಕ್ ಆಪ್ ಸಿದ್ಧತೆಯಲ್ಲಿದ್ದಾಗ ಹಸು ಗುದ್ದಿ ಪಕ್ಕೆಲುಬು ಬಳಿ ಅವರಿಗೆ ಗಾಯವಾಗಿದ್ದು, ಬನ್ನೇರುಘಟ್ಟರಸ್ತೆಯಲ್ಲಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೆಚ್ಚಿನ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಯ ನಂತರ ಹತ್ತು ದಿನ ವಿಶ್ರಾಂತಿ ಪಡೆಯುವಂತೆ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆಂದು ಚಿತ್ರತಂಡ ತಿಳಿಸಿದೆ. ‘ತಿಥಿ' ಚಿತ್ರದ ಮೂಲಕ ನಟಿಯಾಗಿ ಪೂಜಾ ಜನಪ್ರಿಯತೆ ಪಡೆದಿದ್ದಾರೆ.
ಬೇಗೂರು ಸಮೀಪ ನಡೆದ ಚಿತ್ರೀಕರಣ ಸಂಜೆ ಹೊತ್ತಿಗೆ ಮುಗಿದಿದ್ದು, ಚಿತ್ರ ತಂಡ ಪ್ಯಾಕ್‌ಅಪ್ ಸಿದ್ಧತೆಯಲ್ಲಿತ್ತು. ಚಿತ್ರೀಕರಣಕ್ಕೆ ಬಳಸಿಕೊಂಡಿದ್ದ ಹಸು ಈ ವೇಳೆ ಪೂಜಾ ಅವರಿಗೆ ಗುದ್ದಿದೆ. ಯಾವುದೇ ರೀತಿಯ ಅನಾಹುತವಾಗಿಲ್ಲ. ಸಣ್ಣಪುಟ್ಟಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪೂಜಾ ಆರೋಗ್ಯವಾಗಿದ್ದಾರೆ' ಎಂದು ‘ಮೂಕ ಹಕ್ಕಿ' ನಿರ್ದೇಶಕ ನಿನಾಸಂ ಮಂಜು ‘ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.