ಸೈಲೆಂಟಾಗಿ ಫೈಟಿಂಗ್‌ ಮುಗಿಸಿ ಬಂದ ನಟಿ!

By Web Desk  |  First Published May 14, 2019, 9:35 AM IST

ಸದ್ದಿಲ್ಲದೆ ನಟಿ ಪೂಜಾ ಗಾಂಧಿ ಮತ್ತೆ ಬಂದಿದ್ದಾರೆ. ಬಂದವರು ಒಂದು ಚಿತ್ರದ ಶೂಟಿಂಗ್‌ ಕೂಡ ಮುಗಿಸಿದ್ದಾರೆ. ಪೂಜಾ ಗಾಂಧಿ ನಟಿಸಿರುವ ಚಿತ್ರದ ಹೆಸರು ‘ಸಂಹಾರಿಣಿ’. 


ಮಹಿಳಾ ಸಾಹಸ ಪ್ರಧಾನ ಸಿನಿಮಾ ಇದು. ಕೈಯಲ್ಲಿ ಪಿಸ್ತೂಲು, ಕತ್ತಿ ಹಿಡಿದ ಪೂಜಾ ಗಾಂಧಿ ಅವರಿಗೆ ಇಲ್ಲಿ ಬೇರೆಯದ್ದೇ ಆದ ಪಾತ್ರವಿದೆ. ಮಹಿಳೆ ಮನಸ್ಸು ಮಾಡಿದರೆ ಎಂಥ ಹೋರಾಟಕ್ಕೂ ಸಿದ್ಧ ಎನ್ನುವ ಕತೆಯನ್ನು ಒಳಗೊಂಡ ಈ ಚಿತ್ರದ ನಿರ್ದೇಶನ ಮಾಡಿರುವುದು ಕೆ ಜವಾಹರ್‌ ಎಂಬುವವರು.

ಕೆ ಶಬರೀಶ್‌ ನಿರ್ಮಾಣ ಮಾಡಿರುವ, ಥ್ರಿಲ್ಲರ್‌ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವಿದು. ಬಾಲಿವುಡ್‌ನ ರಾಹುಲ್‌ ದೇವ್‌, ರವಿ ಕಾಳೆ, ಹ್ಯಾರಿ ಜೋಶ್‌ ಈ ಚಿತ್ರದಲ್ಲಿ ಖಳನಟರಾಗಿದ್ದಾರೆ. ನಟ ಕಿಶೋರ್‌ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಚಿನ್‌ ಹಾಗೂ ಅರುಣ್‌ ಪೋಷಕ ಕಲಾವಿದರುಗಳಾಗಿ ಅಭಿನಯಿಸಿದ್ದಾರೆ. ಮಾಸ್‌ ಮಾದ ಸಾಹಸ, ಡಾ ವಿ. ನಾಗೇಂದ್ರ ಪ್ರಸಾದ್‌ ಗೀತ ಸಾಹಿತ್ಯ ಇದೆ. ರಾಜೇಶ್‌ ಕುಮಾರ್‌ ಅವರು ಛಾಯಾಗ್ರಹಣ ಮಾಡಿದ್ದಾರೆ.

Tap to resize

Latest Videos

ನೀನ್ಯಾರು? ನಾನ್ಯಾರು? ಫೋನ್ ಲೈನ್‌ನಲ್ಲೇ ಅನಿಲ್ - ಪೂಜಾ ಜಟಾಪಟಿ

click me!