
ಬೆಂಗಳೂರು( ಡಿ.01 ): ಸಾಮಾಜಿಕ ಮಾಧ್ಯಮಗಳು ಬಂದ ಮೇಲೆ ಗಾಸಿಪ್ ಸುದ್ದಿಗಳಿಗೆ ಬರವಿಲ್ಲ. ನಟ ಶಿವರಾಂ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹರಿದಾಡುತ್ತಿದೆ. ಶಬರಿಮಲೆಗೆ ತೆರಳಿದ್ದಾಗ ಶಿವರಾಂ ಮೃತಪಟ್ಟಿದ್ದಾರೆಂಬ ಗಾಳಿಸುದ್ದಿ ಹರಿದಾಡುತ್ತಿದ್ದು, ಆದರೆ ಇದು ಕೇವಲ ವದಂತಿಯಾಗಿದೆ.
ನಟ ಶಿವರಾಂ ಆರೋಗ್ಯವಾಗಿದ್ದಾರೆ. ಈ ಬಗ್ಗೆ ಸುವರ್ಣ ನ್ಯೂಸ್ಗೆ ನಟ ಶಿವರಾಂ ಅವರೆ ಸ್ಪಷ್ಟನೆ ನೀಡಿದ್ದಾರೆ. ಭಗವಂತನ ದಯೆಯಿಂದ ಆರೋಗ್ಯವಾಗಿದ್ದೇನೆ.ಇನ್ನೂ ಕೆಲವು ವರ್ಷ ದೇವರ ಸೇವೆ ಮಾಡುವ ಅವಕಾಶ ಕೊಡಲಿ. ನಾನು ಈಗ ಚೆನ್ನೈನಲ್ಲಿ ಅಯ್ಯಪ್ಪ ಪೂಜೆಯಲ್ಲಿ ಇದ್ದೇನೆ. ಚೆನ್ನೈನಿಂದ ನಾಳೆ ಬೆಂಗಳೂರಿಗೆ ಬರಲಿದ್ದೇನೆ. ಶಬರಿ ಮಲೆಯಲ್ಲಿ ಯಾವುದೇ ಪ್ರವಾಹ ಬಂದಿಲ್ಲ. ನೀರಿಗೆ ವಿಷ ಬೆರೆಸಿದ್ದಾರೆ ಅನ್ನೋ ಸುಳ್ಳು ಸುದ್ದಿ ಹರಡುತ್ತಿದೆ. ಇಂಥ ಸುದ್ದಿಗಳನ್ನು ನಂಬಬೇಡಿ' ಎಂದು ಹಿರಿಯ ನಟ' ತಿಳಿಸಿದ್ದಾರೆ.
ಶಬರಿಮಲೆ ದೇಗುಲ ಮುಚ್ಚಿಲ್ಲ
ಶಬರಿಮಲೆ ದೇವಸ್ಥಾನ ಮುಚ್ಚಲಾಗಿದೆ ಅನ್ನೋ ಸುದ್ದಿ ಹರಡಿದೆ. ಶಬರಿಮಲೆ ದೇವಸ್ಥಾನ ಮುಚ್ಚಿಲ್ಲ. ಮುಚ್ಚುವುದಿಲ್ಲ.ತಾಂತ್ರಿಕ ಕಾರಣದಿಂದ ಪಂದಳ ದೇವಸ್ಥಾನ ಮಾತ್ರ 3 ದಿನ ಮುಚ್ಚಲಾಗಿದೆ. ಅಲ್ಲಿ ಶಬರಿಮಲೆಯಲ್ಲಿ ಮಂಡಳ ಪೂಜೆ ನಡೆಯುತ್ತಿದೆ. ಡಿಸೆಂಬರ್ 26ರವರೆಗೆ ದೇಗುಲ ತೆರೆದೇ ಇರುತ್ತದೆ. ಅಯ್ಯಪ್ಪ ಭಕ್ತರು ಯಾವುದೇ ಆತಂಕ ಪಡಬೇಕಾಗಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.