ದರ್ಶನ್ ಬಂಧನದ ಬಳಿಕ ಡೆವಿಲ್ ಅಭಿಮಾನಿಗಳಿಗೆ ಮತ್ತೊಂದು ಬೇಸರದ ನ್ಯೂಸ್

Published : Aug 14, 2025, 06:47 PM IST
Darshan Devil

ಸಾರಾಂಶ

ಈ ಸುದ್ದಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ದರ್ಶನ್ ಬಂಧನದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ 2ನೇ ಅರೋಪಿಯಾಗಿರುವ ನಟ ದರ್ಶನ್ (Kannada Actor Darshan) ಅಭಿಮಾನಿಗಳಿಗೆ ಮತ್ತೊಂದು ಬೇಸರದ ಸಂಗತಿ ಎದುರಾಗಿದೆ. ನಾಳೆ ಬಿಡುಗಡೆಯಾಗಬೇಕಿದ್ದ ಡೆವಿಲ್ ಚಿತ್ರದ ಹಾಡಿನ ಸಮಯವನ್ನು ಮುಂದೂಡಿಕೆ ಮಾಡಲಾಗಿದೆ. ಈ ಬಗ್ಗೆ Shri Jaimatha Combines ಎಕ್ಸ್ ಖಾತೆ ಮೂಲಕ ಮಾಹಿತಿಯನ್ನು ನೀಡಿದೆ. ನಾಳೆ ಬಿಡುಗಡೆಯಾಗಬೇಕಿದ್ದ ಡೆವಿಲ್ ಸಿನಿಮಾದ ಹಾಡನ್ನು ಅನಿವಾರ್ಯ ಕಾರಣದಿಂದ ಮುಂದೂಡಲಾಗಿದೆ ಎಂದು ಶ್ರೀ ಜೈಮಾತಾ ಕಂಬೈನ್ಸ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.

ಡೆವಿಲ್ ಸುನಾಮಿಗೆ ಬಿಗ್ ಬ್ರೇಕ್

ದಿ ಡೆವಿಲ್ ಸುನಾಮಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಮತ್ತು ಚಿತ್ರತಂಡ ಕಳೆದ ಎರಡು ದಿನಗಳಿಂದ ಸಾಲು ಸಾಲು ಪೋಸ್ಟ್ ಮಾಡಲಾರಂಭಿಸಿತ್ತು. ಇದ್ರೆ ನೆಮ್ಮದಿಯಾಗ ಇರ್ಬೇಕ್ ಎಂಬ ಶೀರ್ಷಿಕೆಯಡಿಯಲ್ಲಿ ಹಲವು ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಅಂದುಕೊಂಡಂತೆ ಆಗಿದ್ರೆ ನಾಳೆ ಬೆಳಗ್ಗೆ 10.05ಕ್ಕೆ ಬಿಡುಗಡೆಯಾಗಬೇಕಿತ್ತು. ತಮ್ಮ ನೆಚ್ಚಿನ ನಟನ ಬೆನ್ನಲ್ಲೇ ಡೆವಿಲ್ ಫ್ಯಾನ್ಸ್‌ಗೆ ಬೇಸರದ ಸಂಗತಿಯನ್ನು ಜೈ ಮಾತಾ ಕಂಬೈನ್ಸ್ ತಿಳಿಸಿದೆ.

ಜೈ ಮಾತಾ ಕಂಬೈನ್ಸ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಯಾವ ಅನಿವಾರ್ಯ ಕಾರಣನು ಇಲ್ಲ ದರ್ಶನ್ ಜೈಲಿಗೆ ಹೋದ ಅದಿಕ್ಕೆ ಅಂತ ಹೇಳಿ. ಎಲ್ಲಿಗೆ ಅಂತ ಮುಂದೂಡ್ತಿರಾ, ಸುಮ್ನೆ ರಿಲೀಸ್ ಮಾಡಿ. ಸಜ್ಜನರ ಸಂಘ ಹೆಜ್ಜೇನು ಸವಿದಂತೆ...ರಿಲೀಸ್ ಮಾಡಿ ಎಂದು ಕಮೆಂಟ್ ಮಾಡಿದ್ದಾರೆ. ಜೈಲಿನಲ್ಲಿಯೇ ಆರೋಪಿ ತನ್ನ ಚಿತ್ರದ ಹೊಸ ಹಾಡನ್ನು ಕೇಳಿಸಿಕೊಳ್ಳಲಿ ಎಂಬ ಕಮೆಂಟ್‌ಗಳು ಸಹ ಬಂದಿವೆ.

 

 

ದರ್ಶನ್ ಅಭಿಮಾನಿಗಳಿಗೆ ಲಾಠಿ ರುಚಿ

ದರ್ಶನ್ ಬಂಧನ ವಿಷಯ ತಿಳಿಯುತ್ತಿದ್ದಂತೆ ನಟನ ಅಭಿಮಾನಿಗಳು ಅನ್ನಪೂರ್ಣೆಶ್ವರಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಪೊರ್ಕಿ ನಟನ ಅಭಿಮಾನಿಗಳು ಡಿ-ಬಾಸ್ ಎಂದು ಘೋಷಣೆ ಕೂಗುತ್ತಾ ಗಲಾಟೆ ಮಾಡುತ್ತಿದ್ದರು. ಈ ಹಿನ್ನೆಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದ ಜಮಾವಣೆಗೊಂಡಿದ್ದ ಜನರ ಗುಂಪನ್ನು ಚದುರಿಸಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?