'ಕಟ್ಟಪ್ಪ'ನ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು: ಬಾಹುಬಲಿ 2 ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಾ ?

By Suvarna Web DeskFirst Published Apr 6, 2017, 7:19 AM IST
Highlights

ಪ್ರತಿಭಟನೆಯುಹೆಣ್ಣೂರುಬಸ್ನಿಲ್ದಾಣದಿಂದಪ್ರಾರಂಭವಾಗಿಕಮ್ಮನಹಳ್ಳಿಮುಖ್ಯರಸ್ತೆಯಮೂಲಕಸಾಗಿಬಂದುಬಾಣಸವಾಡಿಸಹಾಯಕಪೊಲೀಸ್ಆಯುಕ್ತರಿಗೆದೂರುನೀಡಿದರು.

ಬೆಂಗಳೂರು(ಏ.06): ಕನ್ನಡ ವಿರೋಧಿ ಹೇಳಿಕೆ ನೀಡಿರುವ ತಮಿಳು ನಟ ಸತ್ಯರಾಜ್ (ಕಟ್ಟಪ್ಪ) ಅಭಿನಯಿಸಿರುವ ಬಾಹುಬಲಿ-2 ಚಲನಚಿತ್ರ ರಾಜ್ಯದಾದ್ಯಂತ ಬಿಡುಗಡೆ ನಿಷೇಧಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಪರ ಸಂಘಟನೆ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸುವುದರ ಜೊತೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯು ಹೆಣ್ಣೂರು ಬಸ್ ನಿಲ್ದಾಣದಿಂದ ಪ್ರಾರಂಭವಾಗಿ ಕಮ್ಮನಹಳ್ಳಿ ಮುಖ್ಯರಸ್ತೆಯ ಮೂಲಕ ಸಾಗಿ ಬಂದು ಬಾಣಸವಾಡಿ ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ನೀಡಿದರು. ಬಾಣಸವಾಡಿಯ ಓರಿಯನ್ ಮಾಲ್'ನಲ್ಲಿ ಬಾಹುಬಲಿ 1 ಹಿಂದಿ ಅವತರಣಿಕೆ ಸಿನಿಮಾ ಪ್ರದರ್ಶನವಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕರವೇ ಅಧ್ಯಕ್ಷ ಪ್ರವೀಣ್ ಶಟ್ಟಿ ನೇತೃತ್ವದಲ್ಲಿ ಮಾಲ್'ಗೆ ನುಗ್ಗಿ ಪ್ರತಿಭಟನೆ ನಡೆಸಲು ಯತ್ನಿಸಿದರು.

ಈ ಸಂದರ್ಭದಲ್ಲಿ ಹೊರಬಂದ ಮಾಲ್ ಸಿಬ್ಬಂದಿ ನಾಳೆ ಬಾಹುಬಲಿ-1 ಸಿನಿಮಾ ಪ್ರದರ್ಶನಕ್ಕೆ ಮುಂಗಡ ಟಿಕೆಟ್ ನೀಡಲಾಗಿತ್ತು. ಆದರೆ, ಪ್ರತಿಭಟನೆ ಹಿನ್ನೆಲೆಯಲ್ಲಿ ನಾವು ಪ್ರದರ್ಶನ ಸ್ಥಗಿತಗೊಳಿಸುತ್ತೇವೆ. ಮುಂಗಡ ಟಿಕೆಟ್ ಹಣವನ್ನು ಗ್ರಾಹಕರಿಗೆ ವಾಪಸ್ ನೀಡುವುದಾಗಿ ಹೇಳಿದರು. ಇದಾದ ನಂತರ ಬಾಹುಬಲಿ 2 ಸಿನಿಮಾವನ್ನು ಯಾವುದೇ ಕಾರಣಕ್ಕೂ ರಾಜ್ಯದಾದ್ಯಂತ ಹಂಚಿಕೆ ಮಾಡದಂತೆ ಒಎಫ್ಒ ಸಂಸ್ಥೆಗೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್, ಬಾಹುಬಲಿ 2 ಚಿತ್ರ ಬಿಡುಗಡೆ ಮಾಡಿದರೆ, ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು. ಈ ಹೋರಾಟದಲ್ಲಿ ಕಾನೂನು ಸುವ್ಯವಸ್ಥೆ ಹಾಳದರೆ ಸರ್ಕಾರವೇ ಹೊಣೆ. ಹೀಗಾಗಿ ರಾಜ್ಯ ಸರ್ಕಾರ ಈ ಚಲನಚಿತ್ರ ಬಿಡುಗಡೆ ಮೇಲೆ ನಿಷೇಧ ಹೇರಬೇಕು ಎಂದರು.

ಕರವೇ ಹೋರಾಟಗಾರ ಪ್ರವೀಣ್ ಶಟ್ಟಿ ಮಾತನಾಡಿ, ಕನ್ನಡಿಗರು ನಾಯಿಗಳೆಂದು ತಮಿಳು ನಟ ಕನ್ನಡ ನಾಡು-ನುಡಿಗೆ ಅವಮಾನ ಮಾಡಿದ್ದಾನೆ. ಅವರು ಕ್ಷಮೆ ಕೇಳುವ ವರೆಗೂ ಕರ್ನಾಟಕದಲ್ಲಿ ಅವರ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದರು.

 

click me!