
ಬೆಂಗಳೂರು(ಎ.06): ಎಲ್ಲಾ ಸರಿ ಹೋದರೆ ನಟ ರಾಕಿಂಗ್ ಸ್ಟಾರ್ ಯಶ್ ಕಿರುತೆರೆಯ ದೊಡ್ಡ ಶೋ ಒಂದನ್ನು ನಿರ್ಮಿಸಲಿದ್ದಾರೆ! ಹೌದು, ಈಗಾಗಲೇ ತೆರೆ ಮರೆಯಲ್ಲಿ ಆ ಕುರಿತಂತೆ ಚಟುವಟಿಕೆಗಳು ಪ್ರಾರಂಭವಾಗಿದ್ದು ಯಶ್ ನಿರ್ಮಾಣಕ್ಕೆ ಆಸಕ್ತಿ ತೋರಿದ್ದಾರಂತೆ.
ಅಂದಹಾಗೆ ಅವರು ನಿರ್ಮಾಣ ಮಾಡಲು ಆಸಕ್ತಿ ತೋರಿಸಿದ್ದು ಕಲರ್ಸ್ ಚಾನಲ್‌ನಲ್ಲಿ. ಕಲರ್ಸ್ ಸೂಪರ್ ಹೊಸ ಚಾನಲ್ ಪ್ರಾರಂಭವಾದಾಗ ಆ ಚಾನಲ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದ ಯಶ್, ಅನಂತರ ಕೂಡ ಚಾನಲ್ ಜೊತೆ ಸೌಹಾರ್ದ ಸಂಬಂಧ ಇಟ್ಟುಕೊಂಡಿದ್ದರು. ಆಗಾಗ ಬೇರೆ ಬೇರೆ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಹೋಗುತ್ತಿದ್ದರು. ಇತ್ತೀಚೆಗೆ ಬಹಳಷ್ಟುಹೀರೋಗಳು ಕಿರುತೆರೆ ನಿರ್ಮಾಣದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಯಶ್ ಕೂಡ ನಿರ್ಮಾಣದ ಕುರಿತಂತೆ ಗಂಭೀರವಾಗಿ ಯೋಚನೆ ಮಾಡಿದ್ದಾರೆನ್ನಲಾಗಿದೆ. ಎಲ್ಲಾ ಸುಸೂತ್ರವಾಗಿ ನಡೆದರೆ ಒಂದು ಸೋಶಿಯೋ-ಮೈಥೋ (ಸಾಮಾಜಿಕ- ಪೌರಾಣಿಕ) ಕಥಾನಕವನ್ನು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲಿದ್ದಾರೆ ಅನ್ನಲಾಗುತ್ತಿದೆ. ಆದರೆ ಅದು ಯಾವಾಗ ಪ್ರಾರಂಭವಾಗಲಿದೆ ಎಂಬ ಬಗೆಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಒಟ್ಟಿನಲ್ಲಿ ಕಿರುತೆರೆಯಲ್ಲೇ ದೊಡ್ಡ ಫಿಕ್ಷನ್ ಶೋ ಅದಾಗಿರಲಿದೆ ಎನ್ನುತ್ತವೆ ಮೂಲಗಳು.
<ಸ್ಟಾರ್‌ಗಳು ಕಿರುತೆರೆಗೆ: ಸ್ಟಾರ್‌ಗಳು ಕಿರುತೆರೆಯಲ್ಲಿ ನಿರ್ಮಾಣಕ್ಕೆ ತೊಡಗಿಕೊಳ್ಳುವುದಕ್ಕೆ ದೊಡ್ಡ ಇತಿಹಾಸವೇ ಇದೆ. ಪುನೀತ್ ರಾಜ್‌ಕುಮಾರ್ ಕಲರ್ಸ್‌ಗಾಗಿ ‘ಮನೆದೇವ್ರು' ಧಾರಾವಾಹಿಯನ್ನು ನಿರ್ಮಿಸುತ್ತಿರುವುದಲ್ಲದೇ ಅದರ ಲಾಂಚ್‌ಗೆ ಸ್ವತಃ ಅವರೇ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಹಾಗೇ ಕಿರುತೆರೆ ಶೋಗಳ ಜನಪ್ರಿಯ ಹೋಸ್ಟ್ ಸುದೀಪ್ ಅವರೂ ಝಿ ಕನ್ನಡಕ್ಕೆ ಇದೀಗ ‘ವಾರಸ್ದಾರ' ಎಂಬ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.