ಕಂಗನಾ ಬಟ್ಟೆ ಬದಲಿಸಿದ್ದು ಎಲ್ಲಿ ಗೊತ್ತಾ? : ನಿಜ ಜೀವನದ ಖಾಸಗಿ ಸತ್ಯ ಹೇಳಿದ ನಟಿ

Published : Oct 28, 2016, 06:49 PM ISTUpdated : Apr 11, 2018, 12:35 PM IST
ಕಂಗನಾ ಬಟ್ಟೆ ಬದಲಿಸಿದ್ದು ಎಲ್ಲಿ ಗೊತ್ತಾ?  : ನಿಜ ಜೀವನದ ಖಾಸಗಿ ಸತ್ಯ ಹೇಳಿದ ನಟಿ

ಸಾರಾಂಶ

ನಟಿಯೆಂದ ಮೇಲೆ ಸಿನಿಮಾದ ಕೆಲವು ವ್ಯವಸ್ಥೆಗಳಿಗೆ ಅನಿವಾರ್ಯವಾಗಿ ಹೊಂದಿಕೊಳ್ಳಬೇಕು. ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ಗೊಣಗಿ ಕುಳಿತರೆ ಪ್ರಯೋಜನವಿಲ್ಲ

ಕಂಗನಾ ರಣಾವತ್ ತೆರೆ ಮೇಲಷ್ಟೇ ಅಲ್ಲ, ನಿಜ ಬದುಕಿನಲ್ಲೂ ಸಖತ್ ಬೋಲ್ಡ್. ರಂಗೂನ್ ಸಿನಿಮಾದ ಶೂಟಿಂಗ್ ವೇಳೆ ಇದು ಪುನಃ ಸಾಬೀತಾಗಿದೆ. ಅರುಣಾಚಲ ಪ್ರದೇಶದ ದೂರದ ಹಳ್ಳಿಯೊಂದರಲ್ಲಿ ರಂಗೂನ್ ಚಿತ್ರದ ಸೆಟ್ ಹಾಕಲಾಗಿತ್ತಂತೆ. ಅಲ್ಲಿ ಟಾಯ್ಲೆಟ್ ಇರಲಿಲ್ಲ. ಬಟ್ಟೆ ಬದಲಿಸಲು ರೂಮ್‌ನ ವ್ಯವಸ್ಥೆಯೂ ಇರಲಿಲ್ಲ. ಇಷ್ಟೆಲ್ಲ ಅವ್ಯವಸ್ಥೆ ಇರೋವಾಗ ಕಂಗನಾ ಏನು ಮಾಡಿರಬಹುದು ಎಂಬುದನ್ನು ಅವರ ಮಾತಿನಲ್ಲೇ ಕೇಳಿಬಿಡಿ. ‘ನಾನು ಬಂಡೆಯ ಹಿಂಬದಿ ಹೋಗಿ ಪ್ರಾಥಃವಿಧಿಗಳನ್ನು ಮುಗಿಸುವುದು ಅನಿವಾರ್ಯವಾಗಿತ್ತು. ಅಲ್ಲಿ ಜನರೂ ಇರುತ್ತಿದ್ದರು.

ಅವರಿದ್ದಾರೆಂಬ ಕಾರಣಕ್ಕೆ ಶರೀರದ ಒತ್ತಡಗಳನ್ನು ತಡೆದುಕೊಳ್ಳಲು ಸಾಹಾಯವಾಗುವುದಿಲ್ಲ. ಎಷ್ಟೋ ಸಲ ಕಾಸ್ಟ್ಯೂಮ್ ಅನ್ನೂ ಬಂಡೆಯ ಹಿಂಬದಿಯಲ್ಲಿಯೇ ಬದಲಿಸಿದ್ದೆ ಎಂದಿದ್ದಾರೆ ಕಂಗನಾ. ನಟಿಯೆಂದ ಮೇಲೆ ಸಿನಿಮಾದ ಕೆಲವು ವ್ಯವಸ್ಥೆಗಳಿಗೆ ಅನಿವಾರ್ಯವಾಗಿ ಹೊಂದಿಕೊಳ್ಳಬೇಕು. ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ಗೊಣಗಿ ಕುಳಿತರೆ ಪ್ರಯೋಜನವಿಲ್ಲ. ಹಣವೂ ವ್ಯರ್ಥ, ಸಮಯವೂ ವ್ಯರ್ಥ. ಭಾರತದ ಅನೇಕ ಹಳ್ಳಿಗಳಲ್ಲಿ ಮೂಲಭೂತ ವ್ಯವಸ್ಥೆಗಳೇ ಇಲ್ಲ. ಅವರೇ ಬದುಕುತ್ತಿರುವಾಗ, ನಾವು ಅವರ ಮುಂದೆ ಏನು ಅಂತನ್ನಿಸಿತು ಎನ್ನುತ್ತಾರೆ ಕ್ವೀನ್ ತಾರೆ.

--

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೇದಿಕೆ ಮೇಲೆಯೇ 'ಕಚಡಾ ನನ್​ ಮಗನೆ, ಪಾಪಿ ನನ್​ ಮಗನೇ' ಎಂದೆಲ್ಲಾ ಬೈಯೋದಾ ನಟ ಉಪೇಂದ್ರ? ಸ್ಟಾರ್​ ನಟರು ಸುಸ್ತು!
ಶಾರುಖ್ ಖಾನ್ ಜೊತೆ ಮಲ್ಟಿಸ್ಟಾರರ್ ಚಿತ್ರದಲ್ಲಿ ಜೂ.ಎನ್‌ಟಿಆರ್‌: 'ವಾರ್ 2' ಸೋತರೂ ಜಗ್ಗದ ಯಂಗ್ ಟೈಗರ್!