
ಬೆಂಗಳೂರು(ಅ.28): ಒಂದು ಸಿನಿಮಾ ಮಾಡುವುದು ಟೈಲರ್ ಶರ್ಟ್‌ಗೆ ಅಳತೆ ತೆಗೆದುಕೊಂಡಷ್ಟೇ ಸುಲಭ. ಆದರೆ, ಆ ಚಿತ್ರವನ್ನು ಜನಕ್ಕೆ ತಲುಪಿಸುವುದು ಮಾತ್ರ ಅಳತೆ ತೆಗೆದುಕೊಂಡಷ್ಟು ಸುಲಭ ಅಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿರುವ ಸಿನಿಮಾ ಮೇಕರ್‌ಗಳು ಗಮನ ಸೆಳೆಯುವುದಕ್ಕೆ ಸಾಕಷ್ಟು ಕಸರತ್ತುಗಳನ್ನು ಮಾಡುತ್ತಿದ್ದಾರೆ. ಅಂಥ ಕಸರತ್ತುಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅದೇ ಒಂದು ಮುಗಿಯದ ಸಿನಿಮಾ ಆಗುತ್ತದೆ. ಇಂಥವರ ಚಿತ್ರಗಳ ನಡುವೆ ಇಲ್ಲೊಂದು ಸಿನಿಮಾ ಒಂದಿಷ್ಟು ಸೌಂಡು ಮಾಡುತ್ತಿದೆ. ಅದಕ್ಕೆ ಕಾರಣ ಚಿತ್ರದ ಹೆಸರು ಮತ್ತು ಚಿತ್ರದಲ್ಲಿ ನಟಿಸಿರುವ ಕಲಾವಿದರು. ಚಿತ್ರದ ಹೆಸರು: ‘ವನ್ ಟೈಮ್’. ಉಪೇಂದ್ರ ಅವರ ‘ಸೂಪರ್’ ಹಾಗೂ ಶರಣ್ ಅವರ ‘ವಿಕ್ಟರಿ’ ಹೆಸರಿನ ಸಿಂಬಲ್‌ನಿಂದ ಪ್ರೇರಣೆ ಪಡೆದಂತೆ ಕಾಣುವ ‘ವನ್ ಟೈಮ್’ ರೂಪದ ಈ ಸಿಂಬಲ್ ಹೆಸರಿನ ಈ ಚಿತ್ರದಲ್ಲಿ 15 ಮಂದಿ ನಿರ್ದೇಶಕರು ನಟಿಸಿದ್ದಾರೆಂಬುದು ಚಿತ್ರದ ಮತ್ತೊಂದು ಗಮನ ಸೆಳೆಯುವ ಪಾಯಿಂಟ್. ಹೀಗೆ ಕನ್ನಡದ 15 ಮಂದಿ ನಿರ್ದೇಶಕರನ್ನು ಒಟ್ಟು ಮಾಡಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ರಾಜು ಬಿ ಎನ್ ಎಂಬುವವರು. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು.
ಚಿತ್ರಕ್ಕೆ ಅಭಿಮಾನ್ ರಾಯ್ ಸಂಗೀತ ನೀಡಿದ್ದು, ಸೂರ್ಯಕಾಂತ್ ಹೊನ್ನಳ್ಳಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ‘ಮಿಸ್ ಮಾಡ್ಕೋಬೇಡಿ’ ಎಂಬುದು ಚಿತ್ರದ ಟ್ಯಾಗ್ ಲೈನ್. ಚಿತ್ರದಲ್ಲಿ ಏಳು ಹಾಡುಗಳಿವೆ. ಮಾಜಿ ಮಹಾಪೌರ ಪುಟ್ಟರಾಜು, ಲಹರಿ ವೇಲು, ವಿಜಯ ಲಕ್ಷ್ಮೀ ಮೂವಿಸ್‌ನ ರಾಜು ಅವರು ಚಿತ್ರದ ಆಡಿಯೋ ಬಿಡುಗಡೆಗೆ ಅತಿಥಿಗಳಾಗಿ ಆಗಮಿಸಿದ್ದರು. ‘ಬದುಕಿನಲ್ಲಿ ಯಾರಿಗಾದರೂ ಒಳ್ಳೆಯದು ಅನ್ನುವುದು ಒಂದೇ ಸಲ ಬರುತ್ತದೆ. ಆ ಒಂದು ಸಲ ಬರುವ ಅದೃಷ್ಟವನ್ನು ಮಿಸ್ ಮಾಡಿಕೊಳ್ಳಬಾರದು. ಏನು ಆ ಒಳ್ಳೆಯದು? ಪ್ರೀತಿ ಆಗಿರಬಹುದು, ಬದುಕಿನ ಗುರಿಯಾಗಿರಬಹುದು. ಇವು ಒಮ್ಮೆ ಮಾತ್ರ ದಕ್ಕುತ್ತವೆ. ಸಿಕ್ಕಾಗ ಕೈ ಬಿಡಬಾರದು. ಹಾಗೆ ಪ್ರೀತಿಯ ಅಮಲಿನಲ್ಲಿ ಹೆತ್ತವರನ್ನು ಮರೆಯಬಾರದು ಎನ್ನುವ ಸಂದೇಶ ಕೂಡ ಚಿತ್ರದಲ್ಲಿ’ ಎಂದರು ನಿರ್ದೇಶಕರು. ಇನ್ನು ಪ್ರತಿ ನಿರ್ದೇಶಕರನೂ ಕಲಾವಿದನೇ ಹೀಗಾಗಿ 15 ಮಂದಿ ನಿರ್ದೇಶಕರು ಚಿತ್ರದಲ್ಲಿ ನಟಿಸಿದ್ದಾರೆಂಬುದು ರಾಜು ಅವರ ಮಾತು. ತೇಜಸ್ ಹಾಗೂ ನೇಹಾ ಸೆಕ್ಸೇನಾ ಚಿತ್ರದ ಜೋಡಿ. ತೇಜಸ್ ಈಗಾಗಲೇ ಎರಡು ತಮಿಳು ಹಾಗೂ ಒಂದು ಮಲಯಾಳಂ ಚಿತ್ರದಲ್ಲಿ ನಟಿಸಿಸುತ್ತಿದ್ದಾರಂತೆ. ಅಲ್ಲದೆ ನೋಡಕ್ಕೆ ಬೇರೆ ತಮಿಳಿನ ತಲ ಅಜಿತ್ ಅವರಂತೆಯೇ ಕಾಣುತ್ತಾರಂತೆ.
‘ನಾನು ಅದೃಷ್ಟವಂತ. ಮೊದಲ ಚಿತ್ರದಲ್ಲೇ 15 ಮಂದಿ ನಿರ್ದೇಶಕರು ನಟಿಸಿದ್ದಾರೆ. ಈ ಚಿತ್ರದಲ್ಲಿ ನನ್ನದು ವಿಜಯ್ ಎನ್ನುವ ಪಾತ್ರ’ ಎಂದರು ತೇಜಸ್. ನಟಿ ನೇಹ ಸಕ್ಸೇನಾ ಅವರಿಗೆ ಇಲ್ಲಿ ಎರಡು ರೀತಿಯ ಪಾತ್ರವಂತೆ. ಅಭಿಮಾನ್ ರಾಯ್ ಎಲ್ಲ ಚಿತ್ರಗಳಂತೆ ಈ ಚಿತ್ರಕ್ಕೂ ಕೆಲಸ ಮಾಡಿದ್ದಾರೆ. ಐದು ಹಾಡುಗಳು ಚೆನ್ನಾಗಿ ಬಂದಿವೆ. ಸಮಾಜಕ್ಕೆ ಸಂದೇಶ ಕೊಡುವಂಥ ಚಿತ್ರದಲ್ಲಿ ಹಾಡು ಸಂಯೋಜನೆ ಮಾಡುವ ಕೆಲಸ ಸಿಕ್ಕಿರುವುದು ಖುಷಿ ಕೊಡುತ್ತಿದೆ ಎಂಬುದು ಅಭಿಮಾನ್ ಮಾತು. ಲಹರಿ ವೇಲು ಅವರು ಚಿತ್ರದ ಹಾಡುಗಳನ್ನು ಮಾರುಕಟ್ಟೆ ಮಾಡಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.