ಮೂಕಜ್ಜಿಯಾಗಿ ಜಯಶ್ರೀ

By Kannadaprabha NewsFirst Published Oct 5, 2018, 10:00 AM IST
Highlights

ಕಡಲ ತೀರದ ಭಾರ್ಗವ ಶಿವರಾಮ ಕಾರಂತರಿಗೆ ಜ್ಞಾನಪೀಠದ ಗೌರವ ತಂದುಕೊಟ್ಟ ಕಾದಂಬರಿ ‘ಮೂಕಜ್ಜಿಯ ಕನಸುಗಳು’. ಇದು ರಚನೆಯಾಗಿ 50 ವರ್ಷಗಳು ತುಂಬಿದೆ. ಇದುವರೆಗೂ ಪುಸ್ತಕದ ಮೂಲಕ, ನಾಟಕದ ಮೂಲಕ ಮೂಕಜ್ಜಿಯನ್ನು ಕಂಡಿದ್ದ ಜನತೆ ಮುಂದೆ ಸಿನಿಮಾ ರೂಪದಲ್ಲೂ ಮೂಕಜ್ಜಿಯನ್ನು ಕಣ್ತುಂಬಿಕೊಳ್ಳುವ ಅವಕಾಶದ ಬಾಗಿಲನ್ನು ತೆರೆಯಲು ಸಿದ್ಧರಾಗಿದ್ದಾರೆ ನಿರ್ದೇಶಕ ಪಿ. ಶೇಷಾದಿ

ರಂಗದ ಮೇಲೆ ಮೂಕಜ್ಜಿ ಎಂದರೆ ಮೊದಲಿಗೆ ಕಣ್ಣೆದುರು ಬರುವುದು ಬಿ. ಜಯಶ್ರೀ. ಈಗ ಈ ಚಿತ್ರದಲ್ಲಿಯೂ ಜಯಶ್ರೀ ಅವರೇ ಮೂಕಜ್ಜಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ರಾಜೇಂದ್ರ ಕಾರಂತ್ ಸುಬ್ರಾಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಜಿ.ಎಸ್. ಭಾಸ್ಕರ್ ಛಾಯಾಗ್ರಹಣ ಮಾಡಲಿದ್ದಾರೆ.

ಈಗಾಗಲೇ ಚಿತ್ರಕತೆ ಮತ್ತು ಸಂಭಾಷಣೆ ಬರೆದು ಸಿದ್ಧರಾಗಿರುವ ನಿರ್ದೇಶಕರು ಶಿವರಾಮ ಕಾರಂತರ ಜನ್ಮದಿನವಾದ ಅಕ್ಟೋಬರ್ 10ರಂದು ಚಿತ್ರೀಕಣರ ಆರಂಭಿಸಿ, ಉಡುಪಿ, ಬ್ರಹ್ಮಾವರ ಸುತ್ತಮುತ್ತಲು 25 ದಿನಗಳ ಕಾಲ ಒಂದೇ ಶೆಡ್ಯೂಲ್‌ನಲ್ಲಿ ಶೂಟಿಂಗ್ ಮುಗಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಜಯಶ್ರೀಗೆ ಹೆಚ್ಚು ಒಲವು:
ತಾವು ‘ಮೂಕಜ್ಜಿಯ ಕನಸು’ ಚಿತ್ರ ಮಾಡಲಿದ್ದು ,  ಅಜ್ಜಿಯ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಬಹುದು ಎಂದು ಶೇಷಾದ್ರಿ ಅವರು ಫೇಸ್ ಬುಕ್‌ನಲ್ಲಿ ಕೇಳಿದ್ದರು. ಇದಕ್ಕೆ 160ಕ್ಕೂ ಹೆಚ್ಚು ಮಂದಿ ಬಿ. ಜಯಶ್ರೀ ಅವರ ಹೆಸರನ್ನು
ಸೂಚಿಸಿದ್ದಾರೆ.

click me!