ಅಖ್ತರ್ ಹೆಸರು ‘ಪಿಎಂ ನರೇಂದ್ರ ಮೋದಿ’ ಚಲನಚಿತ್ರದ ಟ್ರೈಲರ್‌ನಲ್ಲಿ ಜಾವೇದ್ ಅಖ್ತರ್ ಹೆಸರು| ನಾನು ಗೀತೆ ರಚಿಸಿಲ್ಲ ಎಂದ್ರು ಜಾವೇದ್
ಮುಂಬೈ[ಮಾ.23]: ನಟ ವಿವೇಕ್ ಒಬೇರಾಯ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಪಿಎಂ ನರೇಂದ್ರ ಮೋದಿ’ ಚಲನ ಚಿತ್ರದ ಟ್ರೈಲರ್‌ನಲ್ಲಿ ತಮ್ಮ ಹೆಸರನ್ನು ಬಳಕೆ ಮಾಡಿಕೊಂಡಿರುವುದಕ್ಕೆ ಹಿರಿಯ ಗೀತ ರಚನೆಕಾರ ಜಾವೇದ್ ಅಖ್ತರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಚಿತ್ರಕ್ಕೆ ತಾವು ಯಾವುದೇ ಗೀತೆಗಳನ್ನು ಬರೆದುಕೊಟ್ಟಿಲ್ಲ. ಆದಾಗ್ಯೂ ಟ್ರೈಲರ್‌ನಲ್ಲಿ ಗೀತರಚನೆಕಾರರಾದ ಪ್ರಸೂನ್ ಜೋಶಿ, ಸಮೀರ್, ಅಭೇಂದ್ರಕುಮಾರ್ ಉಪಾಧ್ಯಾಯ, ಸರದಾರ್, ಪರ್ರಿ ಜಿ ಮತ್ತು ಲವ್‌ರಾಜ್ ಜತೆಗೆ ತಮ್ಮ ಹೆಸರು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.
Am shocked to find my name on the poster of this film. Have not written any songs for it ! pic.twitter.com/tIeg2vMpVG
— Javed Akhtar (@Javedakhtarjadu)‘ಪಿಎಂ ನರೇಂದ್ರ ಮೋದಿ’ ಏಪ್ರಿಲ್ 5 ರಂದು ಬಿಡುಗಡೆಯಾಗಲಿದ್ದು, ಈಗಾಗಲೇ ಸಾಮಾಜಿಕ ಜಾಲಾತಾಣಗಳಲ್ಲಿ ಟ್ರೈಲರ್ ಭಾರೀ ಸೌಂಡ್ ಮಾಡುತ್ತಿದೆ.