
ಸದ್ಯ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರು ಸಾಕಷ್ಟು ಗಾಸಿಪ್ಗಳಿಂದ ಸುದ್ದಿಯಲ್ಲಿ ಇರುತ್ತಿದ್ದಾರೆ. ಅಷ್ಟಕ್ಕೂ ಬಣ್ಣದ ಲೋಕ ಅದರಲ್ಲಿಯೂ ಬಾಲಿವುಡ್ ಗಾಸಿಪ್ಗಳಿಗೇನೂ ಕಮ್ಮಿ ಇಲ್ಲ. ಒಬ್ಬರ ಜೊತೆ ಇನ್ನೊಬ್ಬರ ಹೆಸರು ಥಳಕು ಹಾಕಿಕೊಳ್ಳುತ್ತಲೇ ಇರುತ್ತದೆ. ಇದೆ ರೀತಿ, ಕೆಲ ದಿನಗಳ ಹಿಂದೆ ಕದ್ದುಮುಚ್ಚಿ ನಟಿ ಜಾಹ್ನವಿ ಕಪೂರ್ ಮತ್ತು ಅವರ ಬಾಯ್ಫ್ರೆಂಡ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ, ಶಿಖರ್ ಪಹರಿಯಾ (Shikhar Pahariya) ಅವರ ಮದ್ವೆಯಾಗೋಯ್ತು ಎಂದು ಭಾರಿ ಸುದ್ದಿಯಾಗಿತ್ತು. ಇವರ ಸುದ್ದಿ ಗಾಸಿಪ್ ಅನ್ನುವುದಕ್ಕಿಂತಲೂ ಹೆಚ್ಚಾಗಿ ಇಬ್ಬರೂ ನಡೆದುಕೊಳ್ಳುತ್ತಿರುವ ರೀತಿಯಿಂದ ಮದುವೆಯಾಗುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಈ ಜೋಡಿ ಭೇಟಿ ನೀಡಿದ್ದ ಜೋಡಿ ಅಲ್ಲಿ ಒಟ್ಟಿಗೆ ಕುಳಿತು ದಂಪತಿಯಂತೆ ವಿಶೇಷ ಪೂಜೆ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಇಬ್ಬರು ಒಟ್ಟಿಗೆ ಪೂಜೆ ಸಲ್ಲಿಸಿದ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಮದುವೆ ಆಗೋಯ್ತಾ ಅಥವಾ ಶೀಘ್ರವೇ ಮದ್ವೆ ಆಗಲಿದ್ದಾರೆ ಎನ್ನುವ ಚರ್ಚೆ ಬಿ-ಟೌನ್ನಲ್ಲಿ ಶುರುವಾಗಿತ್ತು. ಈ ಬಗ್ಗೆ ನಟಿಯಾಗಲೀ ಶಿಖರ್ ಆಗಲೀ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.
ಅದರ ಬೆನ್ನಲ್ಲೇ ಶ್ರೀದೇವಿ ಪುತ್ರಿಯ ಡ್ರೆಸ್ ಬಗ್ಗೆ ಶ್ರೀದೇವಿ ಅಭಿಮಾನಿಗಳಿಗೂ ಸಾಕಷ್ಟು ನೋವಿದೆ. ಇಂದು ಚಿತ್ರ ನಟಿಯರು ಅದರಲ್ಲಿಯೂ ಹೆಚ್ಚಾಗಿ ಬಾಲಿವುಡ್ ನಟಿಯರು ಇಂದು ಪೈಪೋಟಿಗೆ ಬಿದ್ದವರಂತೆ ದೇಹ ಪ್ರದರ್ಶನ ಮಾಡುವುದು ಮಾಮೂಲಾಗಿದೆ. ಈ ಪೈಪೋಟಿ ಎಷ್ಟರ ಮಟ್ಟಿಗೆ ಇದೆ ಎಂದರೆ, ಇದೀಗ ನಟಿಯರು ಅರೆಬೆರೆ ಬೆತ್ತಲಾಗಿದ್ದು ಸಾಕಾಗಲ್ಲ ಎಂದು ಪೂರ್ಣ ಬೆತ್ತಲಾಗಿದ್ದೂ ನಡೆದಿದೆ. ಚಿತ್ರಕ್ಕೆ ಒಪ್ಪುವಂತಿದ್ದರೆ ನಾನು ರೆಡಿ ಎನ್ನುವ ಮಾತು ಬಹುತೇಕ ನಟಿಯರಿಂದ ಕೇಳಬಹುದು. ಇನ್ನು ಕೆಲವು ನಟಿಯರು ಬಳಕುವ ಬಳ್ಳಿಯಂತೆ ಇರಲು ಇನ್ನಿಲ್ಲದ ಸರ್ಕಸ್ ಮಾಡಿದ್ರೂ, ದೇಹದ ಭಾಗಕ್ಕೆ ಸರ್ಜರಿ ಮಾಡಿಕೊಂಡು ಅದರ ಧಾರಾಳ ಪ್ರದರ್ಶನ ಮಾಡುವುದೂ ನಡೆದಿದೆ. ಇಂಥ ನಟಿಯರು ಟ್ರೋಲ್ ಆಗುವುದರಿಂದಲೇ ಸಕತ್ ಪ್ರಚಾರದಲ್ಲಿ ಇರುವ ಕಾರಣ, ಇವರನ್ನು ನೋಡಿ ಇನ್ನುಳಿದ ನಟಿಯರು ಇವರ ಹಾದಿಯಲ್ಲಿಯೇ ಸಾಗುತ್ತಿದ್ದಾರೆ.
ನಟಿಯರು ಧಾರಾಳವಾಗಿ ಎಲ್ಲವನ್ನೂ ತೋರಿಸುತ್ತಾರೆ ಎಂದ ಮೇಲೆ ಪಾಪರಾಜಿಗಳಿಗೆ ಇನ್ನೇನು? ಅವರಿಗೆ ಹಬ್ಬವೋ ಹಬ್ಬ. ಹಿಂದೆ ಮುಂದೆ ಎಲ್ಲೆಲ್ಲಿ ಜೂಮ್ ಮಾಡಬೇಕೋ ಅಲ್ಲೆಲ್ಲಾ ತಮ್ಮ ಕ್ಯಾಮೆರಾಗಳನ್ನು ಓಡಿಸಿ ಅದನ್ನೇ ತೋರಿಸುತ್ತಾರೆ. ತಮ್ಮ ದೇಹ ಸೌಂದರ್ಯವನ್ನು ನೋಡಲಿ ಎನ್ನುವ ಕಾರಣಕ್ಕೇ ಇಂಥ ಅಸಭ್ಯ, ಅಶ್ಲೀಲ ಎನ್ನುವ ತುಂಡುಡುಗೆ ಹಾಕಿಕೊಂಡು ಇಂಥ ನಟಿಯರು ಓಡಾಡುವುದು ಏನೂ ಗುಟ್ಟಾಗಿ ಉಳಿದಿಲ್ಲ.
ಆದರೆ ಇದೀಗ ನಟಿ ಜಾಹ್ನವಿ ಕಪೂರ್ ಪಾಪರಾಜಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ಎಲ್ಲೆಲ್ಲೋ ಜೂಮ್ ಮಾಡುತ್ತೀರಿ. ಹಿಂದೆ-ಮುಂದೆ ಬೇಡದ ಕಡೆಗಳಲ್ಲೆಲ್ಲಾ ಜೂಮ್ ಮಾಡುತ್ತೀರಿ. ಹಾಗೆಲ್ಲಾ ಮಾಡಬೇಡಿ ಎಂದು ಸ್ವಲ್ಪ ಗರಂ ಆಗಿಯೇ ಹೇಳಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ನೆಟ್ಟಿಗರು ನಟಿಯ ವಿರುದ್ಧ ಸಕತ್ ಟ್ರೋಲ್ ಮಾಡಿದ್ದಾರೆ. ಮೂರೂ ಬಿಟ್ಟವರಿಗೆ ನಾಚಿಕೆ ಎಂದರೆ ಏನು ಗೊತ್ತಿದ್ಯಾ ಎಂದು ಪ್ರಶ್ನಿಸುತ್ತಿದ್ದಾರೆ. ಜೂಮ್ ಮಾಡಿದೇ ಹೋದರೆ ನಿಮ್ಮ ಲೈಫೇ ವೇಸ್ಟ್ ಅಲ್ವಾ ಎಂದು ಮತ್ತೆ ಕೆಲವರು ಪ್ರಶ್ನಿಸುತ್ತಿದ್ದಾರೆ. ಎಲ್ಲರೂ ನೋಡಲಿ ಎನ್ನುವ ಕಾರಣಕ್ಕೇ ಇಂಥ ಉಡುಗೆ ತೊಟ್ಟು ಬರುತ್ತೀರಿ, ಮೂರು ಬಿಟ್ಟವರಂತೆ ವರ್ತಿಸುತ್ತೀರಿ. ಇನ್ನು ಜೂಮ್ ಮಾಡಬಾರದು ಎಂದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.