ಗೋಲ್ಡನ್‌ ಸ್ಟಾರ್‌ ಗಣೇಶ್‌ ಜೊತೆ ಕೈ ಜೋಡಿಸಿದ 'ಜೇಮ್ಸ್‌' ಡೈರೆಕ್ಟರ್‌ ಚೇತನ್‌ ಕುಮಾರ್‌.. ಹೊಸ ಸಿನಿಮಾ ಅನೌನ್ಸ್!

Published : Jul 02, 2025, 01:35 PM IST
Golden Star Ganesh Chathan Kumar

ಸಾರಾಂಶ

ಕಮರ್ಷಿಯಲ್ ಸಿನಿಮಾಗಳನ್ನು ಮಾಡಿಕೊಂಡು ಬಂದವರು ಚೇತನ್. ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾಗಳ ಸರದಾರ ಗಣೇಶ್. ಹಾಗಾಗಿ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಯಾವ ರೀತಿಯ ಸಿನಿಮಾ ಬರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಇದಕ್ಕೀಗ ಉತ್ತರ ಸಿಕ್ಕಿದೆ. ಗಣೇಶ್‌..

ಗೋಲ್ಡನ್‌ ಸ್ಟಾರ್‌ ಗಣೇಶ್‌ (Golden Star Ganesh) ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಳೆ ಹುಡ್ಗನ ಬರ್ತಡೇ ಪ್ರಯುಕ್ತ ಹೊಸ ಸಿನಿಮಾ ಘೋಷಣೆಯಾಗಿದೆ. ಬಹಳ ದಿನಗಳಿಂದ ಸುದ್ದಿಯಲ್ಲಿದ್ದ ಭರ್ಜರಿ, ಬಹದ್ದೂರ್‌‌, ಭರಾಟೆ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಚೇತನ್‌ ಕುಮಾರ್‌ ಗಣೇಶ್‌ ಅವರ ಮುಂದಿನ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಸದ್ಯ ಗಣೇಶ್‌ ಪಿನಾಕಾ, Yours Sincerely Raam ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಡೈರೆಕ್ಟರ್ ಅರಸು ಅಂತಾರೆ ನಿರ್ದೇಶನದ ಚಿತ್ರವನ್ನು ಗಣೇಶ್ ಮಾಡುತ್ತಿದ್ದಾರೆ. ಈ ಚಿತ್ರದ ಬಳಿಕ ಚೇತನ್ ಕುಮಾರ್ ನಿರ್ದೇಶನದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟಿಸಲಿದ್ದಾರೆ.

ಕಮರ್ಷಿಯಲ್ ಸಿನಿಮಾಗಳನ್ನು ಮಾಡಿಕೊಂಡು ಬಂದವರು ಚೇತನ್. ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾಗಳ ಸರದಾರ ಗಣೇಶ್. ಹಾಗಾಗಿ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಯಾವ ರೀತಿಯ ಸಿನಿಮಾ ಬರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಇದಕ್ಕೀಗ ಉತ್ತರ ಸಿಕ್ಕಿದೆ. ಗಣೇಶ್‌ ಅವರ ಮ್ಯಾನರಿಸಂಗೆ ತಕ್ಕಂತೆ ಚೇತನ್‌ ಸಿನಿಮಾ ಮಾಡಲು ಹೊರಟ್ಟಿದ್ದಾರೆ. ರೋಮ್ಯಾಂಟಿಕ್ ಎಲಿಮೆಂಟ್ಸ್ ಇರಲಿದ್ದು, ಆದರೆ ಚೇತನ್‌ ಅವರ ಮೇಕಿಂಗ್ ಸ್ಟೈಲ್ ಅಲ್ಲಿಯೇ ಚಿತ್ರದಲ್ಲಿ ಇರಲಿದೆ ಅನ್ನೋದೇ ಸ್ಪೆಷಲ್.‌

ಭುವನಂ ಗಗನಂ, ಅಯೋಗ್ಯ 2 ಸಿನಿಮಾ ನಿರ್ಮಿಸಿರುವ ಮುನೇಗೌಡ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಶಿವು ಗೌಡ ಕೂಡ ನಿರ್ಮಾಣದಲ್ಲಿ ಸಾಥ್‌ ಕೊಡುತ್ತಿದ್ದಾರೆ. ಎಸ್‌ ವಿಜಿ ಫಿಲ್ಮಂ ಬ್ಯಾನರ್‌ ನಡಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಸದ್ಯ ಪ್ರೊಡಕ್ಷನ್‌ 3 ಎಂಬ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ. ಇನ್ನು ಮುನೇಗೌಡ ಅವರೇ ಈ ಚಿತ್ರವನ್ನು ಪ್ರೆಸೆಂಟ್‌ ಮಾಡಲಿದ್ದಾರೆ. ಶೀಘ್ರದಲ್ಲೇ ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

ಇನ್ನು, ರಾಯಲ ಸ್ಟುಡಿಯೋಸ್ ಮೂಲಕ ವಿಖ್ಯಾತ್ ಆರ್ ನಿರ್ದೇಶನದಲ್ಲಿ 'ಯುವರ್ ಸಿನ್ಸಿಯರ್ಲಿ ರಾಮ್' ಚಿತ್ರ ತಯಾರಾಗುತ್ತಿರೋದು ಎಲ್ಲರಿಗೂ ಗೊತ್ತಿದೆ. ಈಗ ಚಿತ್ರತಂಡ 'ಗೋಲ್ಡನ್ ಸ್ಟಾರ್ ಗಣೇಶ್' ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಪೊಸ್ಟರ್ ವೊಂದನ್ನು ಬಿಡುಗಡೆ ಮಾಡಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರು ಹನುಮಂತನ ವೇಷದಲ್ಲಿದ್ದು, ಕೈಯಲ್ಲಿ ಅಂಚೆಪತ್ರಗಳನ್ನ ಹಿಡಿದು ಸೈಕಲ್ಲಿನ ಮೇಲೆ ಕುಳಿತಿದ್ದಾರೆ. ಈ ಪೋಸ್ಟರ್ ವಿಶೇಷವಾಗಿದ್ದು, ಕುತೂಹಲ ಹುಟ್ಟಿಸುವಂತಿದೆ.

ಅಲ್ಲದೇ ಮೊದಲ ಬಾರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸೀತೆಗಾಗಿ ಸಂದೇಶ ತೆಗೆದುಕೊಂಡು ಹೋಗುತ್ತಿರುವ ಹನುಮಂತನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸೈಕಲ್ ಚಲಾಯಿಸುತ್ತಿರುವ ರಾಮನಾಗಿ ರಮೇಶ್ ಅರವಿಂದ ಕಾಣಿಸಿಕೊಳ್ಳಬಹುದ ಎಂಬ ಕುತೂಹಲವಿದೆ. ಒಟ್ಟಾರೆ ಸಿನಿಮಾ ತಂಡ ಬಿಡುಗಡೆಗೊಳಿಸಿರುವ ಪೋಸ್ಟರ್ ನಲ್ಲಿ ಹಲವು ಕುತೂಹಲದ ಅಂಶಗಳಿದ್ದು, ಗಮನಿಸುತ್ತಾ ಹೋದಷ್ಟು ವಿಷಯಗಳು ಅಡಗಿವೆ ಎಂಬುದನ್ನ ಕಾಣಬಹುದು.

ಇನ್ನೂ ಈ ಚಿತ್ರಕ್ಕೆ ಸತ್ಯ ರಾಯಲ ಅವರು ಬಂಡವಾಳ ಹೂಡಿದ್ದು, ವಿಖ್ಯಾತ್ ಆರ್ ಮೊದಲ ಬಾರಿಗೆ ನಿರ್ದೇಶನದ ಜವಬ್ದಾರಿ ಹೊತ್ತಿದ್ದಾರೆ. ನವೀನ್ ಕುಮಾರ್ ಐ ಛಾಯಾಗ್ರಹಣ, ಅನೂಪ್ ಸಿಳೀನ್ ಸಂಗೀತ ನೀಡುತ್ತಿದ್ದು, ಹರೀಶ್ ಕೊಮ್ಮೆಯವರ ಸಂಕಲನ ಚಿತ್ರಕ್ಕಿರಲಿದೆ. ಮುಖ್ಯಭೂಮಿಕೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮಿಸ್ಟರ್ ಪರ್ಫೆಕ್ಟ್ ರಮೇಶ್ ಅರವಿಂದ್ ಇರಲಿದ್ದಾರೆ. ಉಳಿದ ತಾರಾಗಣವನ್ನ ಚಿತ್ರತಂಡ ಇನ್ನು ಬಿಟ್ಟುಕೊಟ್ಟಿಲ್ಲ. ಮುಂದಿನ ಅಪ್ಡೇಟ್ ಹಂತ ಹಂತವಾಗಿ ನೀಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Sudeep with Suvarna: ಕೂದ್ಲಲ್ಲ ಸರ್​, ಏನ್ ಬೇಕಾದ್ರೂ ತಗೀತಿನಿ ಅಂದೆ, ಎಲ್ಲ ರಿಜೆಕ್ಟ್​ ಮಾಡಿದ ಚಿತ್ರ ಒಪ್ಪಿದೆ!
ಪ್ರಖ್ಯಾತ ಸಿನಿಮಾ ನಟಿ-ನಿರೂಪಕಿ ಜೊತೆ ಆರ್‌ಸಿಬಿ ಮಾಜಿ ಪ್ಲೇಯರ್‌ ಡೇಟಿಂಗ್‌?