(ವಿಡಿಯೋ)ಕೋಪೊದ್ರಿಕ್ತಗೊಂಡ ಜಗ್ಗೇಶ್: ಚಪ್ಪಲಿ ತಗೊಂಡು ಹೊಡೆಯಿರಿ, ನನಗೆ ಹೇಳಿ ನಾನೇ ಹಾಗೆ ಮಾಡುತ್ತೇನೆ

Published : Aug 29, 2017, 05:54 PM ISTUpdated : Apr 11, 2018, 12:42 PM IST
(ವಿಡಿಯೋ)ಕೋಪೊದ್ರಿಕ್ತಗೊಂಡ ಜಗ್ಗೇಶ್: ಚಪ್ಪಲಿ ತಗೊಂಡು ಹೊಡೆಯಿರಿ, ನನಗೆ ಹೇಳಿ ನಾನೇ ಹಾಗೆ ಮಾಡುತ್ತೇನೆ

ಸಾರಾಂಶ

ಈ ರೀತಿ ಮಾಡುವವರ ಬಗ್ಗೆ ನಮ್ಮ ಗಮನಕ್ಕೆ ತನ್ನಿ ಅವರ ವಿರುದ್ಧ ಗಂಭೀರ ಕ್ರಮ ಜರುಗಿಸುತ್ತೇವೆ. ಇದು ನಿಜವಾಗಿಯೂ ತಮಾಷೆಯಲ್ಲ.

ಇತ್ತೀಚಿಗೆ ಕನ್ನಡದ ನಟಿ ಸಿಂಧು ಲೋಕ್'ನಾಥ್ ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಸಿನಿಮಾದಲ್ಲಿ ಅವಕಾಶ ನೀಡಿವ ಸಲುವಾಗಿ ಕಲಾವಿದರನ್ನು ಕೆಲವು ನಿರ್ಮಾಪಕರು ಹಾಗೂ ನಿರ್ದೇಶಕರು ಮಂಚಕ್ಕೆ ಕರೆಯುವ ಬೆಳವಣಿಗೆ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಇದೇ ವಿಷಯವಾಗಿ ಪ್ರತಿಕ್ರಿಯೆ ನೀಡಿದ ನಟ ಜಗ್ಗೇಶ್' ಅವಕಾಶ ನೀಡುವ ಸಲುವಾಗಿ ಮಂಚಕ್ಕೆ ಕರೆದರೆ ಅಂತಹವರನ್ನು ಚಪ್ಪಲಿ ತಗೊಂಡು ಹೊಡೆಯಿರಿ. ಇಲ್ಲವೆ ನನಗೆ ಹೇಳಿ ನಾನೆ ಬಂದು ಹಾಗೆ ಮಾಡುತ್ತೇನೆ. ಇದನ್ನು ನಾನು ಗಂಭೀರವಾಗಿ ಹೇಳುತ್ತಿದ್ದೇನೆ. ಮಹಿಳೆಯರಿಗೆ ಗೌರವನೀಡಿ. ಇದು ಅತ್ಯಂತ ಕೆಟ್ಟ ಬೆಳವಣಿಗೆ. ಇದನ್ನು ಯಾರು ಮಾಡುವುದು ಎಂದರೆ ವೃತ್ತಿಯ ಬಗ್ಗೆ ಮರ್ಯಾದೆ ಇಲ್ಲದವರು. ವೃತ್ತಿಯ ಬಗ್ಗೆ ಗೊತ್ತಿಲ್ಲದವರು. ದುಡ್ಡಿಟ್ಟುಕೊಂಡು ಎಲ್ಲಿಲ್ಲಿಂದಲೂ ಬಂದು ಯಾರದೋ ದುಡ್ಡು ಇಟ್ಟುಕೊಂಡು ಬರುವವರು ಈ ರೀತಿ ಮಾಡುತ್ತಾರೆ. ಈ ರೀತಿ ಮಾಡುವವರ ಬಗ್ಗೆ ನಮ್ಮ ಗಮನಕ್ಕೆ ತನ್ನಿ ಅವರ ವಿರುದ್ಧ ಗಂಭೀರ ಕ್ರಮ ಜರುಗಿಸುತ್ತೇವೆ. ಇದು ನಿಜವಾಗಿಯೂ ತಮಾಷೆಯಲ್ಲ. ಇಂತಹದನ್ನು ಕೇಳಿದರೆ ನನಗೆ ಅಸಹ್ಯವಾಗುತ್ತದೆ. ಇದರಿಂದ ನಮ್ಮ ಉದ್ಯಮಕ್ಕೆ ಕೆಟ್ಟ ಹೆಸರು ಬರುತ್ತದೆ' ಎಂದು ಆಕ್ರೋಶಭರಿತವಾಗಿ ಹೇಳಿದರು.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಮನೆಗೆ ಬರುತ್ತಲೇ ರಕ್ಷಿತಾ ಶೆಟ್ಟಿಗೆ ಅಮ್ಮನಿಂದ ಕ್ಲಾಸ್; ಸೂಪರ್ ಅವಕಾಶ ಪಡೆದ ಪುಟ್ಟಿ
ಚಳಿಗಾಲದ ಟೈಮಲ್ಲೇ ಹಾಟ್‌ಬ್ಯೂಟಿ ಆದ ರಾಧಾಮಿಸ್‌!