
ಅನೂಪ್ ಸೀಳಿನ್ ಹೊಸ ಪ್ರಯತ್ನ
ಕನ್ನಡ ಸಾಹಿತ್ಯ ಲೋಕದಲ್ಲಿ ಕಾಯಕಯೋಗಿ ಅಣ್ಣಾ ಬಸವಣ್ಣನವರ (Basavanna) ವಚನ ಸಾಹಿತ್ಯ ಇದಿಂಗೂ ಪ್ರಸ್ತುತ. ಪ್ರತಿಯೊಬ್ಬರ ಜೀವನಕ್ಕೂ ಹಿತ , ಸರಿ ಸೂಕ್ತವಾದ ಪಥ. ಬಸವಣ್ಣನವರ ವಚನ ಸಾಹಿತ್ಯದಲ್ಲೊಂದು ಸರಳ ಸುಂದರವಾದ ಸಾಲುಗಳನ್ನು ಇಟ್ಕೊಂಡು ಒಂದು ವಿಡಿಯೋ ಸಾಂಗ್ ಮಾಡಿದ್ರೆ ಹೇಗೆ ಅನ್ನೋ ಕಲ್ಪನೆಯಲ್ಲಿ, ಇವತ್ತಿನ ಜೆನ್ ಝೀ ಜನರೇಷನ್ ಗೂ ಮುಟ್ಟಿಸುವ ಸಲುವಾಗಿ ದೃಶ್ಯಕಾವ್ಯವೊಂದು ಬಿಡುಗಡೆಯಾಗಿದೆ.
ಸ್ಯಾಂಡಲ್ ವುಡ್ ನ ರಾಗನಿಧಿ ಜೆ.ಅನೂಪ್ ಸೀಳಿನ್ (J Anoop Seelin) ಸಿನಿಮಾ ಗೀತೆ , ಭಕ್ತಿಗೀತೆ ಹಾಗೂ ಭಾವಗೀತೆ ಲೋಕದಲ್ಲಿ ತನ್ನದೆಯಾದ ಕೊಡುಗೆಯನ್ನ ನೀಡಿದ್ದಾರೆ. ಈ ಬಾರಿ ಕನ್ನಡ ವಚನ ಸಾಹಿತ್ಯದ ಭಂಡಾರದಿಂದ ಒಂದು ಮಹತ್ತರವಾದ ವಚನವೊಂದನ್ನು ಹೆಕ್ಕಿ ಕನ್ನಡ ಸಂಗೀತ ಲೋಕಕ್ಕೆ ಅರ್ಪಿಸಿದ್ದಾರೆ. ಅದುವೆ ‘‘ಉಳ್ಳುವರು ಶಿವಾಲಯವ’’ ವಿಡಿಯೋ ಸಾಂಗ್.
ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬ , ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ...
12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಈ ಸರಳ ಸುಂದರ ವಚನವನ್ನು ಅಂದು ಭಗವಂತನಿಗೆ ಅರ್ಪಿಸಿದ್ರು. ಇಂದು ಜೆ.ಅನೂಪ್ ಸೀಳಿನ್ ಕನ್ನಡ ಸಂಗೀತ ಲೋಕಕ್ಕೆ ಮನಮುಟ್ಟುವ ಕಣ್ಣು ಕಟ್ಟುವ ದೃಶ್ಯಕಾವ್ಯವನ್ನು ಅರ್ಪಿಸಿದ್ದಾರೆ. ಇವ್ರ ಕನಸಿಗೆ ಅನೂಪ್ ಅವರ ಅರ್ಧಾಂಗಿ ಕೃತಿ.ಬಿ ಶೆಟ್ಟಿ ಹಣದ ಜೊತೆ ತನ್ನ ಕಲೆಯ ಕಥಕ್ ಶೈಲಿಯಾ ನೃತ್ಯದ ಮೂಲಕ ಮೇರಗು ಮೂಡಿಸಿದ್ದಾರೆ.
‘ಉಳ್ಳವರು ಶಿವಾಲಯವ’ ವಚನ ಸಾಲುಗಳಿಗೆ ರಾಗಪೋಣಿಸಿ ತಾವೇ ರಾಗಕ್ಕೆ ಗಾಯನ ಪ್ಲಸ್ ಅಭಿನಯದ ಮಲ್ಲಿಗೆಯ ಹಾರವನ್ನು ಜೆ.ಅನೂಪ್ ಸಿಳಿನ್ ಕಟ್ಟಿದ್ದಾರೆ. ದೊಡ್ಡ ಮಟ್ಟಕ್ಕೆ ವಿಶೇಷವಾದ ಲೈಟಿಂಗ್ ಮಾಡಿ ಅದಕ್ಕೆ ತಕ್ಕನಾದ ಸ್ಟುಡಿಯೋ ಬ್ಯಾಕ್ ಡ್ರಾಪ್ನಲ್ಲಿ ಹಾಡು ಮೂಡಿಬಂದಿದ್ದು ಛಾಯಾಗ್ರಹಣ ಮತ್ತು ನಿರ್ದೇಶನವನ್ನು ಚೆನ್ನೈ ಮೂಲದ ಮಸಾನಿ ಅದ್ಭುತವಾಗಿ ನಿಭಾಯಿಸಿದ್ದಾರೆ.
ಈ ಹಿಂದೆ ‘ಕಾಫಿ’ ಅನ್ನೋ ವಿಡಿಯೋ ಸಾಂಗ್ ಹೊರಬಿಟ್ಟು ಗೆದ್ದಿರುವ ಜೆ.ಪಿ ಮ್ಯೂಸಿಕ್ ಬ್ಯಾನರ್ ಅಡಿ ಈ ಹಾಡು ಮೂಡಿಬಂದಿದೆ. ‘ಉಳ್ಳವರು ಶಿವಾಲಯವ’ ವಿಡಿಯೋ ಹಾಡನ್ನು ನೀವು ಎಲ್ಲಾ ಫ್ಲಾಟ್ ಫಾರ್ಮ್ಗಳಲ್ಲು ಕೇಳಿ ಆನಂದಿಸ ಬಹುದು. ಕನ್ನಡದ ಈ ಹೊಸ ಪ್ರಯತ್ನಕ್ಕೆ ಹಲವರು ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.