
ಬೆಂಗಳೂರು (ಸೆ.21): ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಆಲೋಚನೆಯೇ ಹಾಗೆ. ಕಲ್ಪನೆಯ ಕನಸಿನ ಕನ್ಯೆ ತೆರೆಯಮೇಲೆ ಮೂಡಿಬಿಡುತ್ತಾಳೆ. ಈ ನಿರ್ದೇಶಕನ ಕೈಯ್ಯಲ್ಲಿ ಅರಳಿದ ದೀಪಿಕಾಳ ರಾಮ್ ಲೀಲಾ, ಬಾಜೀ ರಾವ್ ಮಸ್ತಾನಿಯ ಲುಕ್ ನಂತರ ಇದೀಗ ರಾಣಿ ಪದ್ಮಾವತಿ ಲುಕ್. ನಿಜಕ್ಕೂ ದೀಪಕ ಸೌಂದರ್ಯ ಹೃದಯಕ್ಕೆ ಕಿಚ್ಚು ಹಚ್ಚುವಂತಿದೆ. ಬಿಡುಗಡೆಯಾಗಿರೋ ಪದ್ಮಾವತಿಯ ಎರಡು ಪೋಸ್ಟರ್ಗಳು ವಾರೆ..!! ವಾ..!! ಎಂದು ಉದ್ಗಾರ ತೆಗೆಯುವಂತೆ ಮಾಡುತ್ತಿವೆ. ಮೈತುಂಬ ಒಡವೆ. ಅದ್ದೂರಿ ಪೋಷಾಕು, ಮುಖದಲ್ಲಿ ರಾಣಿಯ ರಾಜಗಾಂಭೀರ್ಯ. ರಾಣಿ ಪದ್ಮಾವತಿ ಆಗಲಿಕ್ಕೆ ದೀಪಿಕಾ ನಿಜಕ್ಕೂ ಅದೃಷ್ಟ ಮಾಡಿದ್ದಾಳೆಂದು ಮೊದಲ ನೋಟಕ್ಕೆ ಹೇಳಬಹುದು. ರಣವೀರ್ ಸಿಂಗ್ ಶಾಹೀದ್ ಕಪೂರ್ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದು ಡಿಸೆಂಬರ್ 1ನೇ ತಾರೀಖು ಸಿನಿಮಾ ತೆರೆಕಾಣಲಿದೆ. ಅಲ್ಲಿಯವರೆಗೆ ಪದ್ಮಾವತಿಯ ಈ ಸೌಂಧರ್ಯವನ್ನ ನಿಮ್ಮ ಕಣ್ಣಲ್ಲಿ ಸೆರೆಯಾಗಿಸಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.