
ನಟ ಟೈಗರ್ ಶ್ರಾಫ್ ಮತ್ತು ನಟಿ ದಿಶಾ ಪಟಾನಿ ನಡುವಿನ ಸಂಬಂಧಗಳ ಬಗ್ಗೆ ಇದ್ದ ಚರ್ಚೆಗೆ ಈಗ ಹೊಸ ಆಯಾಮವೊಂದು ದೊರೆತಿದೆ. ಈಗ ಇಬ್ಬರೂ ಜೊತೆಯಾಗಿ ನಟಿಸುತ್ತಿರುವ ‘‘ಭಾಗಿ 2’ ಚಿತ್ರದ ಫೋಟೋಶೂಟ್'ನಲ್ಲಿ ಸಂಭ್ರಮಿಸಿದ ಸುದ್ದಿ ಬಂದಿದೆ.
ಇದಕ್ಕೂ ಮೊದಲೇ ದಿಶಾ ಇನ್'ಸ್ಟಾಗ್ರಾಂನಲ್ಲಿ ಜಿಮ್'ನಲ್ಲಿ ಸಖತ್ತಾಗಿ ವರ್ಕೌಟ್ ಮಾಡಿ ಬಾಡಿ ಫಿಟ್ ಮಾಡಿಕೊಂಡಿರುವ ಫೋಟೋ ಅಪ್'ಲೋಡ್ ಮಾಡಿದ್ದಳು. ಬಿಕಿನಿ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್‌ಲೋಡ್ ಮಾಡಿ ಬಹಳಷ್ಟು ಸುದ್ದಿಯಾಗುತ್ತಿದ್ದ ಈ ಬೆಡಗಿ ಈಗ ಸ್ಟ್ರಾಂಗ್ ಬಾಡಿಯೊಂದಿಗೆ ಬಂದಿರುವುದು ಹಲವರ ಆಶ್ಚರ್ಯಕ್ಕೆ ಕಾರಣವಾಗಿದೆ.
ಕೆಲವು ದಿನಗಳ ಹಿಂದೆ ಲ್ಯಾಕ್'ಮಿ ಫ್ಯಾಷನ್ ವೀಕ್ ರ್ಯಾಂಪ್'ನಲ್ಲಿ ಹೆಜ್ಜೆ ಹಾಕಿದ್ದಾಗ ತಂಗಿ ಖುಷ್ಬೋಳಿಂದ ಗಿಫ್ಟ್ ಒಂದನ್ನು ದಿಶಾ ಪಡೆದುಕೊಂಡಿದ್ದಳು. ದಿಶಾಗೆ ಈ ಗಿಫ್ಟ್ ತುಂಬಾ ಇಷ್ಟವಾಗಿತ್ತಂತೆ. ಅಷ್ಟಕ್ಕೂ ಆ ಗಿಫ್ಟ್ ಏನು ಗೊತ್ತಾ? ಬ್ಯಾಕ್ ಲೆಸ್ ಡ್ರೆಸ್. ಇದನ್ನು ಹಾಕಿಕೊಂಡು ತನ್ನ ಬೆನ್ನಿನ ಫೋಟೋ ಅಪ್‌ಲೋಡ್ ಮಾಡಿದ್ದ ಈ ಸುಂದರಿ ಅಭಿಮಾನಿಗಳಿಂದ ಸಾಕಷ್ಟು ಲೈಕ್ ಗಿಟ್ಟಿಸಿಕೊಂಡಿದ್ದಳು.
ಸದ್ಯ ಬಾಲಿವುಡ್‌ನಲ್ಲಿ ಸ್ಥಾನ ಗಟ್ಟಿಗೊಳಿಸಿಕೊಳ್ಳುವಲ್ಲಿ ಸಾಕಷ್ಟು ಶ್ರಮ ಹಾಕುತ್ತಿರುವ ದಿಶಾ ಶ್ರಮಕ್ಕೆ ಈ ವರ್ಕೌಟ್ ಸಾಕ್ಷಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.