ಪ್ರೀತಿಯಿಂದ ವ್ಯಕ್ತಿ ಬದಲಾಗ್ತಾರೆ ಎನ್ನೋದು ಶುದ್ಧ ಸುಳ್ಳು: ದಾಂಪತ್ಯದ ರಹಸ್ಯ ತೆರೆದಿಟ್ಟ ನಟಿ ಸಂಜನಾ ಬುರ್ಲಿ

Published : Nov 18, 2026, 01:14 PM IST
Sanjana Burli

ಸಾರಾಂಶ

ಪುಟ್ಟಕ್ಕನ ಮಕ್ಕಳು ಖ್ಯಾತಿಯ ನಟಿ ಸಂಜನಾ ಬುರ್ಲಿ ವೈದ್ಯ ಸಮರ್ಥ್ ಅವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೀತಿಯಿಂದ ಮನುಷ್ಯ ಬದಲಾಗಲ್ಲ, ಮೊರಾಲಿಟಿ ಮುಖ್ಯ ಎಂದು ಅವರು ಸಂಬಂಧಗಳ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ಹಾಗೆಯೇ ದಾಂಪತ್ಯದ ರಹಸ್ಯವನ್ನೂ ಬಿಚ್ಚಿಟ್ಟಿದ್ದಾರೆ ನಟಿ.

ಬೆಂಗಳೂರು: ನಟಿ ಸಂಜನಾ ಬುರ್ಲಿ ಅರ್ಥಾತ್​ ಪುಟ್ಟಕ್ಕನ ಮಕ್ಕಳು ಖ್ಯಾತಿಯ ಡಿಸಿ ಮೇಡಂ ಸ್ನೇಹಾ, ಹಾಗೂ ಗಂಧದ ಗುಡಿ (Gandhada Gudi) ಸೀರಿಯಲ್​ ಚಂದನಾ ಆಗಿ ಮಿಂಚಿದ್ದ ನಟಿ ಇದೀಗ ದಾಂಪತ್ಯ ಜೀವನ ಎಂಜಾಯ್‌ ಮಾಡುತ್ತಿದ್ದಾರೆ. ದಾವಣಗೆರೆ ಮೂಲದ ವೈದ್ಯ ಸಮರ್ಥ ಚನ್ನಗಿರಿ ಅವರನ್ನು ಮದುವೆಯಾಗಿರುವ ಸಂಜನಾ ಅವರು ಸದ್ಯ ನಟನೆಯಿಂದ ದೂರವಾಗಿದ್ದಾರೆ. ಸಮರ್ಥ ಅವರು ಎಂಬಿಬಿಎಸ್ ಪೂರೈಸಿದ್ದು, ಇಂಟರ್ನಲ್ ಮೆಡಿಸಿನ್‌ನಲ್ಲಿ ಎಂಡಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಸಮರ್ಥ ಚನ್ನಗಿರಿ ಅವರು ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಂಪತಿ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ.

ಈ ಸಂದರ್ಭದಲ್ಲಿ ಸಂಬಂಧಗಳ ಕುರಿತು ನಟಿ ಸಂಜನಾ ಬುರ್ಲಿ (Sanjana Burli) ಮಾತನಾಡಿದ್ದಾರೆ. ಪ್ರೀತಿಯಿಂದ ಎಲ್ಲವೂ ಬದಲಾಗುತ್ತದೆ, ಪ್ರೀತಿಯಿಂದ ಮನುಷ್ಯರನ್ನು ಬದಲು ಮಾಡಬಹುದು ಎನ್ನುವ ಮಾತಿದೆ. ಆದರೆ, ಇದು ಮಾತಿಗೆ ಮಾತ್ರ ಸೀಮಿತ. ಎಷ್ಟೋ ಸಂದರ್ಭಗಳಲ್ಲಿ ಈ ಮಾತು ನೂರಕ್ಕೆ ನೂರರಷ್ಟು ಸುಳ್ಳಾಗುವುದು ಇದೆ ಎಂದು ಹಲವರಿಗೆ ಅನುಭವ ಆಗಿದ್ದುಂಟು. ಇದರ ಬಗ್ಗೆ ಅತ್ಯಂತ ಸುಂದರವಾಗಿ ಓಪನ್​ ಆಗಿಯೇ ಮಾತನಾಡಿದ್ದಾರೆ ನಟಿ. ಪ್ರೀತಿಯಿಂದ ಮನುಷ್ಯ ಬದಲಾಗುತ್ತಾರೆ ಎನ್ನುವುದು ಸುಳ್ಳು. ಯಾರೂ ಯಾರನ್ನೂ ಬದಲಾಯಿಸಲು ಸಾಧ್ಯವಿಲ್ಲ. ಸ್ವಾರ್ಥ ಎನ್ನುವುದು ವಂಶ ಪಾರಂಪರ್ಯವಾಗಿ ಬಂದಿದ್ದರೆ ಯಾರನ್ನೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಸತ್ಯವನ್ನು ಅತ್ಯಂತ ತೀಕ್ಷ್ಣವಾಗಿ ಹೇಳಿದ್ದಾರೆ. ಆದ್ದರಿಂದಲೇ ಪಾರ್ಟನರ್​ನಲ್ಲಿ ಮೊರಾಲಿಟಿ ಇದೆಯೇ ಎಂದು ನೋಡಿಕೊಂಡು ಮದುವೆಯಾಗಬೇಕು. ಆಗ ಮಾತ್ರ ದಾಂಪತ್ಯ ಜೀವನ ಚೆನ್ನಾಗಿ ಹೋಗಲು ಸಾಧ್ಯ. ನಾನು ಅಂದುಕೊಂಡಿದ್ದ ಸಂಗಾತಿಯೇ ನನಗೆ ಸಿಕ್ಕಿರುವುದು ಅತ್ಯಂತ ಖುಷಿ ಕೊಟ್ಟಿದೆ ಎಂದು ಚಿತ್ತಾರಾ ಮೀಡಿಯಾಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ ನಟಿ.

ನನ್ನನ್ನು ಸೈಡ್​ಲೈನ್​ ಮಾಡಿದ್ರು

ಮದುವೆಗಿಂತ ಮುಂಚೆ ಮಾತ್ರವಲ್ಲ, ಮದುವೆಯಾದ ಮೇಲೆ ಪರಸ್ಪರ ಹೊಂದಿಕೊಂಡು ಹೋಗುವ ಗುಣ ಇರಬೇಕು. ಸಂಗಾತಿಯ ಬೆಳವಣಿಗೆಯ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ ಸಂಜನಾ. ನಾನು ಹೆಚ್ಚಾಗಿ ಎಲ್ಲರ ಜೊತೆ ಬೆರೆಯಲ್ಲ. ಪಾರ್ಟಿ ಮಾಡಲ್ಲ, ನಾನ್​ವೆಜ್​ ತಿನ್ನಲ್ಲ. ಅದಕ್ಕಾಗಿ ಹಲವು ಕಡೆ ನನ್ನನ್ನು ಸೈಡ್​ಲೈನ್​ ಮಾಡಿದ್ದು ಇದೆ. ಇಂಥವಳಿಗೆ ಅದೆಂಥ ಗಂಡ ಸಿಕ್ತಾನೆ ಎನ್ನುವುದು ನನ್ನ ಪ್ರಶ್ನೆಯಾಗಿತ್ತು. ಆದರೆ ಅಂಥ ವ್ಯಕ್ತಿ ನನಗೆ ಸಿಕ್ಕಿದ್ದಾರೆ. ನಾನು ಭವಿಷ್ಯದಲ್ಲಿ ಏನೆಲ್ಲಾ ಯೋಜನೆ ರೂಪಿಸಿದ್ದೇನೋ ಅದನ್ನು ಫುಲ್​ಫಿಲ್​ ಮಾಡಿಕೊಳ್ಳುವ ಅವಕಾಶ ಇವರಿಂದ ನನಗೆ ಸಿಕ್ಕಿದೆ ಎಂದಿದ್ದಾರೆ ಸಂಜನಾ ಬುರ್ಲಿ.

ನಟಿಯ ಕುರಿತು

ಇನ್ನು ಸಂಜನಾ ಕುರಿತು ಹೇಳುವುದಾದರೆ, ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಬೆಂಗಳೂರಿನ ಡಾ. ಅಂಬೇಡ್ಕರ್​ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿಯಲ್ಲಿ ವಿಧ್ಯಾಭ್ಯಾಸ ಮುಗಿಸಿರುವ ಇವರು `ವಿಕೇಂಡ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮುಂದಿನ ವಿದ್ಯಾಭ್ಯಾಸಕ್ಕೆ, ಉನ್ನತ ಶಿಕ್ಷಣ ಪಡೆಯುವ ಹಿನ್ನೆಲೆಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ದೂರ ಆಗ್ತಿರೋದಾಗಿ ನಟಿ ಹೇಳಿದ್ದರು. ಅವರು ಹೊರಕ್ಕೆ ಬರುವುದು ತಿಳಿದ ಕಾರಣ ಸ್ನೇಹಾ ಪಾತ್ರವನ್ನೇ ಸಾಯಿಸಲಾಗಿತ್ತು. ಇದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಗಂಧದ ಗುಡಿ ಸೀರಿಯಲ್​ನಲ್ಲಿ ಕೆಲವು ಎಪಿಸೋಡ್​ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಮದುವೆ ಫಿಕ್ಸ್​ ಆಗಿ ಅದರಿಂದಲೂ ಹೊರಕ್ಕೆ ಬಂದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕನ್ನಡದಲ್ಲಿದೆ ಹಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆಯೋ ಸೈನ್ಸ್-ಫಿಕ್ಷನ್ ಮೂವಿ: ಸಿನಿಮಾ ಮುಗಿದ ಮೇಲೂ ನಿಮ್ಮನ್ನು ಕಾಡುವ ಕಥೆ!
ಐದೂ ಭಾಷೆಯಲ್ಲಿ 50 ಕೋಟಿ ಗಳಿಕೆ ಕಂಡ ರಾಮಾಯಣ! ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್