ರಾಜಮೌಳಿ ಸಿನಿಮಾ 'ರಾಮಾಯಣ' ಜೊತೆ ಲಿಂಕ್? ಮಹೇಶ್ ಬಾಬು ಚಿತ್ರಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ 'ವೈರಲ್ ಥಿಯರಿ'

Published : Nov 09, 2026, 07:09 PM IST
Varanasi Based On Ramayana

ಸಾರಾಂಶ

ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ಅಭಿನಯದ 'ವಾರಣಾಸಿ' ಸಿನಿಮಾ ರಾಮಾಯಣ ಆಧಾರಿತ ಎಂಬ ಸುದ್ದಿ ವೈರಲ್ ಆಗಿದೆ. ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಕುಂಭಕರ್ಣನ ಪುನರ್ಜನ್ಮದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಭಾರತೀಯ ಚಿತ್ರರಂಗದಲ್ಲಿ ಪ್ರಸ್ತುತ ರಾಮಾಯಣ ಬಗ್ಗೆ ಮಸ್ತ್ ಚರ್ಚೆ ಆಗ್ತಿದೆ. ಯಶ್, ರಣಬಿರ್ ಕಪೂರ್ ಹಾಗೂ ಸಾಯಿ ಪಲ್ಲವಿ ನಟನೆಯ ಸಿನಿಮಾ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿನಿಮಾ ಬಿಗ್ ಹಿಟ್ ಕಾಣ್ತಿದೆ. ಇದರ ನಡುವೆ ಗ್ರೇಟ್ ಡೈರೆಕ್ಟರ್ ರಾಜಮೌಳಿ ಅವರ ಬಹುನಿರೀಕ್ಷಿತ 'ವಾರಣಾಸಿ' ಸಿನಿಮಾ ರಾಮಾಯಣ ಕಥೆ ಆಧಾರದ ಮೇಲೆಯೇ ತೆಗೆಯಲಾಗಿದೆ ಎಂಬ ಸುದ್ದಿ ವೈರಲ್ ಆಗ್ತಿದೆ. ಬೆನ್ನಲ್ಲೇ, ರಾಜಮೌಳಿ ಸಿನಿಮಾ ಬಗ್ಗೆ ಎಕ್ಸೈಟ್‌ಮೆಂಟ್ ಹೆಚ್ಚಾಗಿದೆ. ಇದರ ಜೊತೆಗೆ ಚಿತ್ರತಂಡ ಸಣ್ಣ ತಪ್ಪಿನಿಂದಾಗಿ ಇಡೀ ಸಿನಿಮಾದ ಗುಟ್ಟನ್ನೇ ಬಿಟ್ಟುಕೊಟ್ಟು ಬಿಟ್ರಾ ಎಂಬ ಚರ್ಚೆಯೂ ಜೋರಾಗಿದೆ.

ಏನಿದು ವಾರಣಾಸಿ ಪುರಾಣ?

RRR ಸಿನಿಮಾ ಬಳಿಕ ರಾಜಮೌಳಿ ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ಹೊಸ ಚಿತ್ರ ಮಾಡ್ತಿದ್ದಾರೆ. ಆ ಸಿನಿಮಾಗೆ Varanasi ಎಂದು ಹೆಸರಿಡಲಾಗಿದೆ ಎನ್ನಲಾಗ್ತಿದೆ. ಈ ಮೆಗಾ ಪ್ರಾಜೆಕ್ಟ್‌ನಲ್ಲಿ ಮಹೇಶ್ ಬಾಬು ಜೊತೆಗೆ ಪ್ರಿಯಾಂಕಾ ಚೋಪ್ರಾ, ಮಲಯಾಳಂನ ಜನಪ್ರಿಯ ನಟ ಪೃಥ್ವಿರಾಜ್ ಸುಕುಮಾರನ್ ಬಣ್ಣ ಹಚ್ಚಲಿದ್ದಾರೆ. ಇದೇ ಚಿತ್ರದ ಕಥೆ ಲೀಕ್ ಆಗಿದೆ ಎನ್ನಲಾಗುತ್ತಿದೆ.

ವೈರಲ್ ಆಗುತ್ತಿರುವ ವದಂತಿಗಳ ಪ್ರಕಾರ.. ನಟ ಪೃಥ್ವಿರಾಜ್ ಸುಕುಮಾರನ್ ಅವರು ಚಿತ್ರದಲ್ಲಿ 'ಕುಂಭ' ಎಂಬ ಪವರ್‌ಫುಲ್ ಪಾತ್ರ ನಿರ್ವಹಿಸ್ತಿದ್ದಾರೆ. ಈ ಕುಂಭ, ರಾಮಾಯಣದ ರಾವಣನ ಶಕ್ತಿಶಾಲಿ ಸಹೋದರ ಕುಂಭಕರ್ಣನ ಪುನರ್ಜನ್ಮ ಅವತಾರ. ರಾಮ ಮತ್ತು ರಾವಣರ ಅಂತಿಮ ಯುದ್ಧದ ಸಮಯದಲ್ಲಿ ಕಳೆದುಹೋಗಿ ಜಗತ್ತಿನ ಬೇರೆ ಬೇರೆ ಖಂಡಗಳಲ್ಲಿ ಹರಡಿಹೋದ ‘ನವರತ್ನ ನಾಲ’ ಎಂಬ ಒಂಬತ್ತು ಮಾಂತ್ರಿಕ ರತ್ನಗಳನ್ನು ಹುಡುಕುವುದು ಈತನ ಮುಖ್ಯ ಉದ್ದೇಶ ಆಗಿರುತ್ತದೆ.

ಈ ಕುಂಭನ ಸೂಚನೆಯ ಮೇರೆಗೆ ನಾಯಕ ಮಹೇಶ್ ಬಾಬು ಜಗತ್ತಿನಾದ್ಯಂತ ಒಂಬತ್ತು ನಿಗೂಢ ರತ್ನಗಳನ್ನು ಹುಡುಕುವ ಹೊರಡುತ್ತಾರೆ. ಆರಂಭದಲ್ಲಿ ಇದರ ಹಿಂದಿನ ಅಸಲಿ ರಹಸ್ಯ ನಾಯಕನಿಗೆ ತಿಳಿಯೋದಿಲ್ಲ. ಒಂಬತ್ತೂ ರತ್ನಗಳು ಒಂದಾದರೆ ಕುಂಭನಿಗೆ ಯಾರೂ ಎದುರಿಸಲಾಗದ ಅಜೇಯ ಶಕ್ತಿ ಸಿಗುತ್ತದೆ. ಇದರಿಂದ ಜಗತ್ತು ಅಪಾಯಕ್ಕೆ ಸಿಲುಕುತ್ತದೆ ಎಂಬ ಸುದ್ದಿ ನಿಧಾನವಾಗಿ ಅರಿವಾಗುತ್ತದೆ.

ಈ ಚಿತ್ರ ಕೇವಲ ಪೌರಾಣಿಕ ಕಥೆಯಷ್ಟೇ ಅಲ್ಲ. ರೋಮಾಂಚಕ ಸೈನ್ಸ್ ಫಿಕ್ಷನ್ ಇರಲಿದೆ. ಸಿನಿಮಾ ಕಥೆ ಪ್ರಕಾರ.. ರತ್ನಗಳನ್ನು ಹುಡುಕುವ ಹಾದಿಯಲ್ಲಿ ಮಹೇಶ್ ಬಾಬು ಬಾಹ್ಯಾಕಾಶದ Cosmic Wormhole ಪತ್ತೆಹಚ್ಚುತ್ತಾರೆ. ಅದರ ಮೂಲಕ ಅವರು ಸಮಯದ ಹಿಂದೆ ಪ್ರಯಾಣಿಸಿ, ರಾಮ-ರಾವಣರ ಮಹಾಯುದ್ಧ ನಡೆಯುತ್ತಿದ್ದ ರಾಮಾಯಣದ ಯುಗಕ್ಕೆ ತಲುಪುತ್ತಾರೆ. ಭವಿಷ್ಯದಲ್ಲಿ ಈ ಶಕ್ತಿಶಾಲಿ ರತ್ನಗಳು ದುರುಪಯೋಗವಾಗುವುದನ್ನು ಮತ್ತು ಆಯುಧಗಳಾಗಿ ಬಳಕೆಯಾಗುವುದನ್ನು ತಡೆಯಲು ನಾಯಕ ಇತಿಹಾಸವನ್ನೇ ಬದಲಾಯಿಸಲು ಹೊರಡುತ್ತಾನೆ ಎನ್ನಲಾಗಿದೆ.

ಸಿನಿಮಾ ರಿಲೀಸ್ ಯಾವಾಗ?

ರಾಜಮೌಳಿ ನಿರ್ದೇಶನದಲ್ಲಿ ಈ ಸಿನಿಮಾಗೆ 1200 ಕೋಟಿಯಿಂದ 1400 ಕೋಟಿ ರೂಪಾಯಿವರೆಗೆ ಹಣ ಮೀಸಲಿಡಲಾಗಿದೆ. ಮೂಲ ತೆಲುಗಿನ ಜೊತೆಗೆ ಹಿಂದಿ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹಲವು ಅಂತಾರಾಷ್ಟ್ರೀಯ ಭಾಷೆಗಳಲ್ಲೂ ಸಿನಿಮಾ ಮೂಡಿ ಬರಲಿದೆ. ಆರಂಭದಲ್ಲಿ ಏಪ್ರಿಲ್ 7, 2026ಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತಾದರೂ, VFX ಕೆಲಸಗಳು ಅಪಾರ ಪ್ರಮಾಣದಲ್ಲಿ ಇರೋದ್ರಿಂದ ಸಿನಿಮಾ ವಿಳಂಬ ಆಗುವ ಸಾಧ್ಯತೆ ಇದೆ. ಇದೀಗ ವೈರಲ್ ಆಗಿರೋ ಸ್ಟೋರಿ ಬೆನ್ನಲ್ಲೇ ರಾಜಮೌಳಿ ಸಿನಿಮಾವು ರಾಮಾಯಣ ಕತೆಯ ಜೊತೆಗೆ ಲಿಂಕ್ ಇದೆಯೇ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಹೆಚ್ಚಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವಿಭಿನ್ನ ರೀತಿಯ ಮಟರ್ನಿಟಿ ಫೋಟೋಶೂಟ್​ನಲ್ಲಿ ಎಲ್ಲರ ಗಮನ ಸೆಳೆದ ನಟಿ ಸಮಂತಾ: ಫ್ಯಾನ್ಸ್​ ಶ್ಲಾಘನೆ
Premada Oorali ನಟಿ ರಮಿಕಾಗೆ ಗಂಡ ರೈತ ಆದ್ರೆ ಓಕೆನಾ? ಆ್ಯಂಕರ್​ ಅನುಶ್ರೀ ಪ್ರಶ್ನೆಗೆ 'ವಸಂತಾ' ಏನಂದ್ರು ಕೇಳಿ