ಬಾಲಿವುಡ್ ಬೆಡಗಿ ಪ್ರಿಯಾಂಕ ಮದ್ವೆ ಪಕ್ಕಾನಾ?

Published : Jun 23, 2018, 12:35 PM ISTUpdated : Jun 23, 2018, 12:43 PM IST
ಬಾಲಿವುಡ್ ಬೆಡಗಿ ಪ್ರಿಯಾಂಕ ಮದ್ವೆ ಪಕ್ಕಾನಾ?

ಸಾರಾಂಶ

ಪ್ರಿಯಕರನ ಜೊತೆ ಹೆಚ್ಚಾಗಿ ಅಮೆರಿಕದಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ಬೆಡಗಿ ಪ್ರಿಯಾಂಕಾ ಛೋಪ್ರಾ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ.  ಅಮೆರಿಕದ ಪಾಪ್ ಸಿಂಗರ್ ನಿಕ್ ಜೊನಾಸ್‌ನನ್ನು ತನ್ನ ಕುಟುಂಬದ ಸದಸ್ಯರಿಗೆ ಭೇಟಿ ಮಾಡಿಸಲು ಮುಂಬೈಗೆ ಕರೆದುಕೊಂಡು ಬಂದಿದ್ದಾರೆ.

ಈಗಾಗಲೇ ಈ ಜೋಡಿ ದಾಂಪತ್ಯಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಈ ಗಾಳಿ ಸುದ್ದಿಗೆ ಪಿಗ್ಗಿಯ ಈ ನಡೆ ಮತ್ತಷ್ಟು ಪುಷ್ಟಿ ನೀಡಿದೆ.

ತನ್ನ ಸಹೋದರನ ಮಗಳು ಕೃಷ್ಣಾಳೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಪಿಗ್ಗಿ, ಮಗುವೆಂದರೆ ಆಸೆ, ಆದರೆ ಇನ್ನು 10 ವರ್ಷ ಅಮ್ಮನಾಗೋಲ್ಲ ಎಂಬುದಾಗಿಯೂ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಮಾದ್ಯಮದ ಮುಂದೆ ತುಸು ಹೆಚ್ಚಿಗೆ ಎನ್ನುವಷ್ಟು ಬಿಗುಮಾನ ತೋರುವ ಪ್ರಿಯಾಂಕಾ, ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಲು ಹಿಂದು ಮುಂದು ನೋಡುತ್ತಾರೆ. ಆದರೆ, ತಾನೇ ನಡೆಸುತ್ತಿರುವ ಸರ್ಕಾರೇತರ ಸಂಸ್ಥೆ ಬಗ್ಗೆ ಹೇಳಿ ಕೊಂಡಿದ್ದು, ಈ ಬಾಲಿವುಡ್ ಬೆಡಗಿ, 'ನನ್ನ ಸಂಸ್ಥೆ ಬಹಳ ಚಿಕ್ಕದು ಮತ್ತು ಸ್ವಯಂ ನಿಧಿಯಾದ್ದರಿಂದ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ. ರೋಹಿಂಗ್ಯಾಗಳಿಗೆ ಹಾಗೂ ದೇಶದೆಲ್ಲೆಡೆ  ನಾವು ಶಿಕ್ಷಣ ಪಡೆಯಲು ಅಸಾಧ್ಯವಾದ ಮಕ್ಕಳಿಗೆ ಸಹಾಯ ಮಾಡುತ್ತೇನೆ. ಇದನ್ನು 10 ವರ್ಷದಲ್ಲಿ ದೊಡ್ಡ ಯೋಜನೆಯಾಗಿ ಮಾಡಬೇಕೆಂದು ನನ್ನ ಆಸೆ,' ಎಂದು ಹೇಳಿಕೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮ್ಮನ ಸೀರೆಯಲ್ಲಿ ಮದನ ಮನಮೋಹಿನಿಯಾಗಿ ಕಂಡ ಆರಾಧನಾ ರಾಮ್
ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?