ಹೀಗೊಂದು ಕುತೂಹಲ ತಣಿಸಲೆಂದೇ ಬಂದಿರುವಂತಿರುವ ಸಿನಿಮಾ ‘ದಮಯಂತಿ’. ಮೊನ್ನೆ ಈ ಚಿತ್ರದ ಟೀಸರ್ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು. ನವರಸನ್ ಈ ಚಿತ್ರದ ನಿರ್ದೇಶಕ ಕಂ ನಿರ್ಮಾಪಕ. ನೀಲಿ ಕಣ್ಣುಗಳಲ್ಲಿ ಮಿಂಚುತ್ತಿದ್ದ ರಾಧಿಕಾ ಕುಮಾರಸ್ವಾಮಿ ಅವರು ತೆರೆ ಮೇಲೆ ತಮ್ಮ ಹಾರರ್ ಅವತಾರವನ್ನು ನೋಡಿ ಖುಷಿಯಾಗುತ್ತಿದ್ದನ್ನು ಅವರ ಎದುರಿಗೆ ನಿಂತ ಕ್ಯಾಮೆರಾಗಳು ಒಂದೇ ಸಮನೆ ಸೆರೆಹಿಡಿಯುತ್ತಿದ್ದವು.
‘ತೆಲುಗಿನಲ್ಲಿ ಅನುಷ್ಕಾ ಶೆಟ್ಟಿಅವರಂತೆಯೇ ಕನ್ನಡದಲ್ಲಿ ರಾಧಿಕಾ ಕುಮಾರಸ್ವಾಮಿ’ ಎಂದು ಯಾರೋ ಹೇಳಿದ್ದು ಆ ಕ್ಯಾಮೆರಾಗಳ ಫ್ಲ್ಯಾಷ್‌ಗಳ ಸದ್ದಿನಲ್ಲಿ ಸಣ್ಣ ಕೇಳಿಸಿದ್ದು ಖರೆ!
ಹಾಗೆ ನೋಡಿದರೆ ನವರಸನ್ ಅವರಿಗೆ ಈ ಚಿತ್ರದ ಕತೆ ಹೊಳೆದಿದ್ದು, ಬೇರೊಂದು ಚಿತ್ರದ ಶೂಟಿಂಗ್‌ನಲ್ಲಿದ್ದಾಗಂತೆ. ಆ ಕತೆ ಏನು? ‘ಒಂದೂರಿನಲ್ಲಿ ದೇವತೆ ಇದ್ದರೆ ಏನಾಗುತ್ತೆ ಎಂಬುದರ ಸುತ್ತ ಮಾಡಿಕೊಂಡಿರುವ ಕತೆ ಇದು. ಅದು ಪವರ್‌ಫುಲ್ ದೇವಿಯ ಕತೆ. ಹೀಗಾಗಿ ಎಲ್ಲ ಪ್ರೇಕ್ಷಕರಿಗೂ ಈ ಸಿನಿಮಾ ಹತ್ತಿರವಾಗುತ್ತದೆ. ರಾಧಿಕಾ ಕುಮಾರಸ್ವಾಮಿ ಅವರು ಸಾಕಷ್ಟುಬ್ಯುಸಿ ಇದ್ದರು. ಆದರೂ ನನ್ನ ಕತೆ ಕೇಳಿ ಈ ಸಿನಿಮಾ ಒಪ್ಪಿಕೊಂಡಿದ್ದಕ್ಕೆ ದಮಯಂತಿ ಚಿತ್ರ ಈ ಹಂತಕ್ಕೆ ಬಂದಿದೆ.
ಕನ್ನಡ ಸೇರಿದಂತೆ ತೆಲುಗು, ತುಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿದ್ದಗೊಂಡಿದೆ’ ಎಂದು ಮಾಹಿತಿ ಕೊಟ್ಟಿದ್ದು ನಿರ್ದೇಶಕರು. ತಬಲಾ ನಾಣಿ, ಭಜರಂಗಿ ಲೋಕಿ, ಮಿತ್ರ, ರವಿ ಎಸ್ ಗೌಡ, ಬಾಲರಾಜವಾಡಿ, ಅನುಷಾ ರೈ, ವೀಣಾ ಸುಂದರ್, ಬೇಬಿ ಲಲನ, ಶರಣ್ ಸೇರಿದಂತೆ ಚಿತ್ರದಲ್ಲಿ ಐವತ್ತಕ್ಕೂ ಹೆಚ್ಚು ಕಲಾವಿದರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ರಾಧಿಕಾ, ತಮ್ಮ ನಡುವಿನ ಸಂಬಂಧದ ಗುಟ್ಟು ಬಿಚ್ಚಿಟ್ಟ ದರ್ಶನ್
ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಒಂದು ಒಳ್ಳೆಯ ಚಿತ್ರದಲ್ಲಿ ನಟಿಸುವ ಕನಸು ‘ದಮಯಂತಿ’ ಚಿತ್ರ ಈಡೇರಿಸಿದೆಯಂತೆ. ಅವರಿಗೆ ವೈಯಕ್ತಿಕವಾಗಿಯೂ ಈ ಸಿನಿಮಾ ತುಂಬಾ ಮೆಚ್ಚುಗೆ ಆಗಿದೆ ಎಂಬುದು ಅವರ ಮಾತು. ‘ನಿರ್ದೇಶಕರು ನನಗೆ ಕತೆ ಹೇಳಿದ ರೀತಿಯಲ್ಲೇ ಚಿತ್ರದ ಪ್ರತಿಯೊಂದು ದೃಶ್ಯವೂ ಬಂದಿದೆ. ನನ್ನ ಮಗಳು, ಅಣ್ಣನ ಮಕ್ಕಳು ಚಿತ್ರ ನೋಡಿದ ನಂತರ ಹತ್ತಿರ ಬರಲು ಭಯಪಟ್ಟರು. ಅಷ್ಟರ ಮಟ್ಟಿಗೆ ಸಿನಿಮಾ ನೋಡುಗರನ್ನು ಪ್ರಭಾವಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.
ಈ ಚಿತ್ರದಲ್ಲಿ ನಾನು ಮೂರು ರೀತಿಯ ಪಾತ್ರಗಳಲ್ಲಿ ನಟಿಸಿದ್ದೇನೆ. ಇನ್ನೂ ಚಿತ್ರದ ಮುಖ್ಯ ಖಳನಾಯಕ ಭಜರಂಗಿ ಲೋಕಿ ಅವರಿಗೆ ಈ ಸಿನಿಮಾ ಬಿಡುಗಡೆ ನಂತರ ದೊಡ್ಡ ಮಟ್ಟದಲ್ಲಿ ಹೆಸರು ಬರುತ್ತದೆ’ ಎಂದರು ರಾಧಿಕಾ ಕುಮಾರಸ್ವಾಮಿ. ಸಂಗೀತ ಆರ್.ಎಸ್.ಗಣೇಶ್ ನಾರಾಯಣ್, ಛಾಯಾಗ್ರಾಹಣ ಪಿ.ಕೆ.ಹೆಚ್.ದಾಸ್ ಅವರದ್ದಾಗಿದ್ದು, ‘ದಮಯಂತಿ’ ನವೆಂಬರ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆಗಳಿವೆ.
ರಾಧಿಕಾ ಪತಿ ಕುಮಾರಸ್ವಾಮಿ, ಮಗಳು ಶಮಿಕಾಳೊಂದಿಗೆ