
ಯಶ್ ಮತ್ತು ರಣಬೀರ್ ಕಪೂರ್ ಮುಖ್ಯಭೂಮಿಕೆಯ ರಾಮಾಯಣ ಚಿತ್ರದ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದೆ. ನವೆಂಬರ್ 5 ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದ್ದು, ಬಿಗ್ ಸ್ಟಾರ್‍ಗಳು ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಚಿತ್ರದಲ್ಲಿ ಬರುವ ಪುಷ್ಪಕ ವಿಮಾನದ ಬಗ್ಗೆ ಸಿನಿಮಾ ರಸಿಕರ ಆಸಕ್ತಿ ಹೆಚ್ಚಾಗಿದೆ.
ಅಂತೆಯೇ ಸಂದರ್ಶನ ಒಂದರಲ್ಲಿ ರಣಬೀರ್ ಕಪೂರ್ 'ಪುಷ್ಪಕ ವಿಮಾನ'ದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರು ರಾಮಾಯಣದ ಪುಷ್ಪಕ ವಿಮಾನವನ್ನು ಎಲೋನ್ ಮಸ್ಕ್ ಅವರ ಹಾರುವ ಕಾರಿಗೆ ಹೋಲಿಸಿದ್ದಾರೆ! ಅಂದ್ಹಾಗೆ ಪುಷ್ಪಕ ವಿಮಾನವು ಹಿಂದೂ ಮಹಾಕಾವ್ಯ ರಾಮಾಯಣದಲ್ಲಿ ವಿವರಿಸಲಾದ ಪೌರಾಣಿಕ ವೈಮಾನಿಕ ರಥವಾಗಿದೆ. ಚಿತ್ರದ ಟ್ರೇಲರ್‌ನಲ್ಲಿ ಹಾರುವ ವಿಮಾನವೂ ಸೇರಿದೆ. ಅದರ ಬಗ್ಗೆ ಚಿತ್ರತಂಡ ಚಿಕ್ಕದಾಗಿ ಪ್ರತಿಕ್ರಿಯಿಸಿದೆ.
ಸಂದರ್ಶನ ಒಂದರಲ್ಲಿ ನಿರೂಪಕರು ಆಗ ಬಳಸಲಾಗುತ್ತಿದ್ದ ಆಯುಧಗಳು ಎಷ್ಟು ಅದ್ಭುತವಾಗಿದ್ದವು. ಅವು ಇಂದಿನ ಆಧುನಿಕ ಉಪಕರಣಗಳನ್ನು ಹೇಗೆ ಮೀರಿಸಬಲ್ಲವು ಎಂದು ಕೇಳುತ್ತಾರೆ. ಅದಕ್ಕೆ ನಿರ್ದೇಶಕ ನಿತೇಶ್.. ಅಕಾಡೆಮಿ ಪ್ರಶಸ್ತಿ ವಿಜೇತ ಸ್ಟುಡಿಯೋ DNEG ಮಾಡಿದ VFX ಕೆಲಸವನ್ನು ನಾವು ಮೆಚ್ಚಿಕೊಳ್ಳಲೇಬೇಕು. ಆ ವಸ್ತುಗಳನ್ನು ಪರದೆಯ ಮೇಲೆ ಮರುಸೃಷ್ಟಿಸುವುದನ್ನು ನೋಡುವುದು ಅದ್ಭುತವಾಗಿದೆ ಎನ್ನುತ್ತಾರೆ. ಇದೇ ವೇಳೆ ರಣಬೀರ್ ಕಪೂರ್ ಪ್ರತಿಕ್ರಿಯಿಸಿ.. ಎಲಾನ್ ಮಸ್ಕ್ ಇತ್ತೀಚೆಗೆ ಹಾರುವ ಕಾರನ್ನು ತಯಾರಿಸಿದರು. ಭಾರತವು 5,000 ವರ್ಷಗಳ ಹಿಂದೆ ಅದನ್ನು ಮಾಡಿದೆ ಎಂದಿದ್ದಾರೆ.
ಹಿಂದೂ ಪುರಾಣದ ಪ್ರಕಾರ.. ಈ ವಿಮಾನವನ್ನು ದೇವತೆಗಳ ಶಿಲ್ಪಿ ವಿಶ್ವಕರ್ಮನು ಬ್ರಹ್ಮ ದೇವರಿಗಾಗಿ ನಿರ್ಮಿಸಿದ. ನಂತರ ಅವನು ಅದನ್ನು ರಾವಣನ ಮಲಸಹೋದರ ಕುಬೇರನಿಗೆ ಉಡುಗೊರೆಯಾಗಿ ನೀಡಿದ್ದ. ಈ ಕುಬೇರನಿಂದ ರಾವಣನು ಪುಷ್ಪಕ ವಿಮಾನವನ್ನು ಕಿತ್ಕೊಂಡಿದ್ದ. ಮಹಾಕಾವ್ಯದಲ್ಲಿ ಪುಷ್ಪಕ ವಿಮಾನವನ್ನು ಹಾರುವ ಅರಮನೆ ಎಂದು ವಿವರಿಸಲಾಗಿದೆ. ಅದು ಆಲೋಚನೆಯ ವೇಗದಲ್ಲಿ ಹಾರಬಲ್ಲದು ಮತ್ತು ಜನಸಂಖ್ಯೆಗೆ ಅನುಗುಣವಾಗಿ ವಿಸ್ತರಿಸಿಕೊಳ್ಳಲಿದೆ ಎನ್ನಲಾಗಿದೆ.
ಅಕ್ಟೋಬರ್ 15 ರಂದು ಅಮೆರಿಕದ ಟೆಕ್ಸಾಸ್‌ನ ವಾಕೊದಲ್ಲಿ ತನ್ನ 'ರೋಡ್‌ಸ್ಟರ್' ಅನಾವರಣಗೊಳಿಸಿದೆ. ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರನ್ನು ಬಿಡುಗಡೆ ಮಾಡಿದೆ. ಟೆಕ್ಸಾಸ್‌ನಲ್ಲಿರುವ ಸ್ಪೇಸ್‌ಎಕ್ಸ್‌ನ ರಾಕೆಟ್ ಅಭಿವೃದ್ಧಿ ಮತ್ತು ಪರೀಕ್ಷಾ ಕೇಂದ್ರದಲ್ಲಿ ಇದರ ಪ್ರದರ್ಶನ ನಡೆಯಿತು. ಈ ವೇಳೆ ಆ ಕಾರು ಬಾಗಿದ ರ‍್ಯಾಂಪ್‌ನಲ್ಲಿ ತಲೆಕೆಳಗಾಗಿ ಚಲಿಸಿತು. ನಂತರ ಪಲ್ಟಿಯಾಯಿತು, ಕೆಲವು ಸೆಕೆಂಡುಗಳ ಕಾಲ ಗಾಳಿಯಲ್ಲಿ ಹಾರಿ ಹೋಯಿತು. ನಂತರ ಸುರಕ್ಷಿತವಾಗಿ ನೆಲದ ಮೇಲೆ ಇಳಿದಿತ್ತು. ಈ ಸೂಪರ್‌ಕಾರ್ ತಕ್ಷಣ ಖರೀದಿಗೆ ಲಭ್ಯವಿಲ್ಲದಿದ್ದರೂ 2028ರಲ್ಲಿ ಸಿಗಲಿದೆ ಎಂದು ಮಸ್ಕ್ ಹೇಳಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ ಮತ್ತು ನಮಿತ್ ಮಲ್ಹೋತ್ರಾ ನಿರ್ಮಿಸಿರುವ ರಾಮಾಯಣ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗವು 2026 ರ ದೀಪಾವಳಿಯಂದು ಬಿಡುಗಡೆಯಾಗಲಿದೆ. ಎರಡನೇ ಭಾಗವು 2027 ರ ದೀಪಾವಳಿಯಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್, ಲಕ್ಷ್ಮಣನಾಗಿ ರವಿ ದುಬೆ ಮತ್ತು ಹನುಮಂತನಾಗಿ ಸನ್ನಿ ಡಿಯೋಲ್ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.