
ಬಾಲಿವುಡ್ ಮಂದಿ ಕುಳಿತರೂ ಸುದ್ದಿ, ನಿಂತರೂ ಸುದ್ದಿಯಾಗುವುದು ಸಹಜ. ಅದರಲ್ಲಿಯೂ ನಟಿಯರ ಪಾಲಿಗಂತೂ ಇದು ತುಸು ಹೆಚ್ಚೇ ಇರುತ್ತದೆ. ಅಭಿಮಾನಿಗಳು ಒಳ್ಳೆಯ, ಕೆಟ್ಟ ರೀತಿಯಲ್ಲೆಲ್ಲಾ ಕಾಮೆಂಟ್ ಮಾಡುತ್ತಾರೆ. ಇದು ಹಲವು ವೇಳೆ ಅವರ ತೀರಾ ವಯಕ್ತಿಕ ಜೀವನಕ್ಕೆ ಸಂಬಂಧಪಟ್ಟ ಘಟನೆಗಳೂ ಆಗಿರುತ್ತವೆ.
ಈಗ ಈ ಸರದಿ ಇಲಿಯಾನ ಡಿಕ್ರೂಜ್ ಅವರದ್ದು. ಈ ಹಿಂದೆಯೇ ಇಲಿಯಾನ ಪ್ರಗ್ನೆಂಟ್ ಎನ್ನುವ ಸುದ್ದಿ ಸಾಕಷ್ಟು ಹರಿದಾಡಿತ್ತು. ಮದುವೆಯೇ ಆಗಿಲ್ಲ ಇನ್ನು ಪ್ರಗ್ನೆಂಟ್ ಹೇಗೆ? ಏನಿದರ ಹಿಂದಿನ ಅಸಲಿಯತ್ತು ಎಂಬುದೆಲ್ಲಾ ಚರ್ಚೆಯ ಮುನ್ನೆಲೆಗೆ ಬಂದಿದ್ದವು. ಆಗ ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ತನ್ನ ಪಾಡಿಗೆ ತಾನಾಯಿತು, ತನ್ನ ಸಿನಿಮಾವಾಯಿತು ಎಂದುಕೊಂಡೇ ಇದ್ದ ಇಲಿಯಾನ ಈಗ ಅವೆಲ್ಲಕ್ಕೂ ಉತ್ತರಿಸಿದ್ದಾರೆ.
‘ನಾನು ನನ್ನ 18 ನೇ ವಯಸ್ಸಿಗೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವಳು. ಇಲ್ಲಿ ಏನೆಲ್ಲಾ ನಡೆಯುತ್ತೆ, ಯಾರು ಏನು ಮಾಡುತ್ತಾರೆ, ನಾನು ಏನು ಮಾಡಬೇಕು ಎನ್ನುವುದರ ಅರಿವು ನನಗಾಗಿದೆ. ಹಾಗಾಗಿ ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಪ್ರಗ್ನೆಂಟ್ ಎಂದು ಸಾಕಷ್ಟು ಜನ ಹೇಳಿದರು. ಈಗ ಅದು ಸುಳ್ಳು ಎನ್ನುವುದು ಸ್ವತಃ ಅವರಿಗೇ ಗೊತ್ತಾಗಿದೆ. ಹಾಗಾಗಿ ಸುಳ್ಳು ಹೆಚ್ಚು ದಿನ ಉಳಿಯುವುದಿಲ್ಲ. ಸತ್ಯವೇ ಜಯ ಗಳಿಸುವುದು. ಇದರಿಂದಾಗಿಯೇ ನಾನು ಮುಂದೆ ನನ್ನ ಕಾರ್ಯವನ್ನಷ್ಟೇ ಮಾಡಿಕೊಂಡು ಹೋಗುತ್ತೇನೆ’ ಎಂದು ಹೇಳಿ ತನ್ನ ವಿರುದ್ಧ ರೂಮರ್ಸ್ ಹಬ್ಬಿಸುವವರತ್ತ ಛಾಟಿ ಬೀಸಿದ್ದಾರೆ ಇಲಿಯಾನ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.