
ನವದೆಹಲಿ (ನವೆಂಬರ್ 13): IFFI 2026 (ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ)ಕ್ಕೆ ದಿನಗಣನೆ ಶುರುವಾಗಿದೆ. 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದಾಗಿದ್ದು, ನವೆಂಬರ್ 20ರಿಂದ 28 ರವರೆಗೆ ಗೋವಾದಲ್ಲಿ ನಡೆಯಲಿದೆ. ವಿಶೇಷ ಅಂದರೆ 'ಇಂಡಿಯನ್ ಪನೋರಮಾ' ವಿಭಾಗವು ಬಾಲಿವುಡ್‌ನ ಧುರಂಧರ್ ಪ್ರದರ್ಶನದೊಂದಿಗೆ ಆರಂಭವಾಗಲಿದೆ. ಇನ್ನು BRICS ದೇಶಗಳ ಸಿನಿಮಾಗಳ ವಿಶೇಷ ವಿಭಾಗದಲ್ಲಿ 'ರಾಮಾಯಣ' ಸಿನಿಮಾ ಮೂಲಕ ಚಾಲನೆ ಸಿಗಲಿದೆ.
57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ಮಾಹಿತಿ ನೀಡಿರುವ ಎನ್‌ಎಫ್‌ಡಿಸಿ.. ಈ ಬಾರಿಯೂ ಆಯ್ಕೆ ಸಮಿತಿ ಮತ್ತು ತೀರ್ಪುಗಾರರು ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ. ಇಂಡಿಯನ್ ಪನೋರಮಾದ ಪೂರ್ಣ ಪ್ರಮಾಣದ ವಿಭಾಗದಲ್ಲಿ 'ಧುರಂಧರ್' ಮೊದಲ ಚಿತ್ರವಾಗಿ ಪ್ರದರ್ಶನಗೊಳ್ಳಲಿದೆ. ನಾನ್-ಫೀಚರ್ ವಿಭಾಗವು ಲಡಾಖಿ ಭಾಷೆಯ 'ಬಿಕಮಿಂಗ್' ಸಿನಿಮಾದೊಂದಿಗೆ ಆರಂಭವಾಗಲಿದೆ ಎಂದು ತಿಳಿಸಿದೆ. ಇನ್ನು ಇಂಡಿಯನ್ ಪನೋರಮಾ ವಿಭಾಗದಲ್ಲಿ ಒಟ್ಟು 25 ಫೀಚರ್ ಸಿನಿಮಾಗಳು ಮತ್ತು 20 ನಾನ್-ಫೀಚರ್ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
ನವೆಂಬರ್ 20 ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ. ಪಾವೆಲ್ ಪಾವ್ಲಿಕೋವ್‌ಸ್ಕಿ ನಿರ್ದೇಶನದ 2026ರ ಪೋಲಿಷ್ ಭಾಷೆಯ ಬಯೋಗ್ರಾಫಿಕಲ್ ಚಿತ್ರ Fatherland ಪ್ರದರ್ಶನಗೊಳ್ಳಲಿದೆ. ನವೆಂಬರ್ 28ರಂದು ಸಿಂಗಾಪುರದ We are all Strangers ಚಿತ್ರದೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ ಎಂದು ಎನ್‌ಎಫ್‌ಡಿಸಿ ತಿಳಿಸಿದೆ.
ಅಂದರೆ ಈ ವರ್ಷ 'ಸ್ಪೇನ್' ದೇಶವನ್ನು ಗೌರವ ಅತಿಥಿ ರಾಷ್ಟ್ರವಾಗಿ ಆಯ್ಕೆ ಮಾಡಲಾಗಿದೆ. ಜೊತೆಗೆ 4 ಸ್ಪ್ಯಾನಿಷ್ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ರಷ್ಯಾ ದೇಶವನ್ನ ಪಾಲುದಾರ ರಾಷ್ಟ್ರವಾಗಿ ಪರಿಗಣಿಸಲಾಗಿದೆ. ರಷ್ಯನ್ ಸಿನಿಮಾದ ಶ್ರೀಮಂತಿಕೆಯನ್ನು ತೋರಿಸುವ 4 ವಿಶೇಷ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಈ ಸಿನಿಮೋತ್ಸವದಲ್ಲಿ ಬ್ರಿಕ್ಸ್ ದೇಶಗಳ ಸಿನಿಮಾಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ.
ಭಾರತದ 'ರಾಮಾಯಣ' ಚಿತ್ರವು ಈ ವಿಭಾಗದ ಮೊದಲ ಸಿನಿಮಾವಾಗಿ ಪ್ರದರ್ಶನಗೊಳ್ಳಲಿದೆ. ಬ್ರಿಕ್ಸ್‌ನ ಎಲ್ಲಾ 11 ಸದಸ್ಯ ರಾಷ್ಟ್ರಗಳು ಹಾಗೂ ಪಾಲುದಾರ ದೇಶಗಳ ಸಿನಿಮಾಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ವಿವಿಧ ದೇಶಗಳ ಕಥಾ ಶೈಲಿಯನ್ನು ಪ್ರೇಕ್ಷಕರು ಸವಿಯಲು ಇದು ಒಳ್ಳೆಯ ಅವಕಾಶ ಆಗಿದೆ.
💫IFFI 2026 Set to Bring the World of Cinema Together in Goa Under the Theme ‘Stories Without Borders’
🎬Over 150 International Films from 86 Countries to Bring the World to Goa
🎬Goa Ready to Welcome Global Cinema Community for 57th IFFI: CM @DrPramodPSawant
🎬Festival Director @AshGowariker Highlights Cinema’s Power to Connect Cultures Across Borders
🎬'Fatherland' to Serve as the Opening Film of the 57th IFFI, ‘I Matter’ to Feature as Mid-Fest film, and ‘We Are All Strangers’ to Close the 57th #IFFI
🎬IFFI 2026 Places Special Focus on BRICS Cinema, with India’s ‘Ramayana’ as the Opening Film
➡️For more information, read here: https://t.co/qFrE125PyO
@IFFIGoa #IFFI57 #IFFI2026
1/2
— PIB India (@PIB_India) November 13, 2026
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.