
ಸಿನಿಮಾ ರಂಗದಲ್ಲಿ ಕೋಟಿ ಕೋಟಿ ಸಂಭಾವನೆ ಪಡೆಯುವ ಸಿನಿಮಾ ನಟ-ನಟಿಯರು ಯಾವುದೇ ಸಾರ್ವಜನಿಕ ಸಮಾರಂಭ ಅಥವಾ ಸೆಲೆಬ್ರಿಟಿ ಮದುವೆಗಳಿಗೆ ಬಂದರೆ ಸಾಮಾನ್ಯವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಡಿಸೈನರ್ ಉಡುಪುಗಳನ್ನು ಧರಿಸಿ ಮಿಂಚುತ್ತಾರೆ. ಆದರೆ, ಭಾರತೀಯ ಚಿತ್ರರಂಗದ ಏಕೈಕ 'ಸೂಪರ್‌ಸ್ಟಾರ್' ರಜನಿಕಾಂತ್ ಮಾತ್ರ ಇದೆಲ್ಲದಕ್ಕೂ ವಿಭಿನ್ನ.
ಇತ್ತೀಚೆಗೆ ಗ್ರೀಸ್‌ನಲ್ಲಿ ಅದ್ಧೂರಿಯಾಗಿ ಜರುಗಿದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಮಾಲಕಿ ಕಾವ್ಯಾ ಮಾರನ್ ಅವರ ವಿವಾಹ ಮಹೋತ್ಸವದಲ್ಲಿ ರಜನಿಕಾಂತ್ ಅವರ ಸರಳತೆಯೇ ಎಲ್ಲರ ಕಣ್ಣು ಕುಕ್ಕಿದ್ದು, ಇಡೀ ಇಂಟರ್ನೆಟ್‌ನಲ್ಲಿ ತಲೈವಾ ಅವರ ಸರಳತೆಯದ್ದೇ ಜಪ ಶುರುವಾಗಿದೆ!
ಬಾಕ್ಸ್ ಆಫೀಸ್ ಧೂಳಿಪಟ ಮಾಡುವ ರಜನಿಕಾಂತ್ ಅವರು ಪ್ರತಿ ಚಿತ್ರಕ್ಕೂ ಬರೋಬ್ಬರಿ ₹159 ರಿಂದ ₹200 ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಾರೆ. ಅವರ ಒಟ್ಟು ಆಸ್ತಿ ಮೌಲ್ಯವೇ ಸುಮಾರು ₹500 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಇಷ್ಟೆಲ್ಲಾ ವೈಭವ, ರಾಜವೈಭೋಗ ಅವರ ಕಾಲಡಿಯಲ್ಲಿದ್ದರೂ, ರಜನಿಕಾಂತ್ ವಿದೇಶದ (ಗ್ರೀಸ್) ರಮಣೀಯ ತಾಣದಲ್ಲಿ ನಡೆದ ಹೈ-ಪ್ರೊಫೈಲ್ ಮದುವೆಗೆ ಬಂದಿದ್ದು ಮಾತ್ರ ಕೇವಲ ಸಾಧಾರಣ ಶರ್ಟ್ ಮತ್ತು ಸಾಂಪ್ರದಾಯಿಕ ಬಿಳಿ ಪಂಚೆ ಧರಿಸಿ!
ಸುತ್ತಲೂ ಕೋಟ್ಯಧಿಪತಿಗಳು, ಸಿನಿಮಾ ತಾರೆಯರು, ರಾಜಕೀಯ ಗಣ್ಯರು ದುಬಾರಿ ಡಿಸೈನರ್ ಉಡುಪುಗಳನ್ನು ಧರಿಸಿ ಕಂಗೊಳಿಸುತ್ತಿದ್ದರೆ, ರಜನಿಕಾಂತ್ ಮಾತ್ರ ತಮ್ಮ ಎಂದಿನ ನೆಲಮೂಲದ ಸಹಜ ಶೈಲಿಯಲ್ಲಿ ಮಿಂಚಿ ಜನರ ಹೃದಯ ಗೆದ್ದಿದ್ದಾರೆ.
ಅನಿರುದ್ಧ್ ರವಿಚಂದರ್ ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರ ಸಹೋದರನ ಮಗ. ಹೀಗಾಗಿ ಈ ಮದುವೆ ರಜನಿಕಾಂತ್ ಅವರಿಗೆ ಕೇವಲ ಔಪಚಾರಿಕ ಸಮಾರಂಭವಾಗಿರದೆ ಕೌಟುಂಬಿಕ ಸಂಭ್ರಮವಾಗಿತ್ತು. ಮದುವೆ ಮಂಟಪದಲ್ಲಿ ಆಪ್ತರ ನಡುವೆ ಸಾಮಾನ್ಯರಂತೆ ಕುಳಿತು ನವದಂಪತಿಗೆ ಆಶೀರ್ವದಿಸಿದ ರಜನಿಕಾಂತ್, ನಂತರ ಅನಿರುದ್ಧ್ ಅವರ ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕಿ ಎಲ್ಲರನ್ನೂ ರಂಜಿಸಿದರು.
ರಜನಿಕಾಂತ್ ಅವರು ಪಂಚೆ ಧರಿಸಿ ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಹಾಗೂ ನೆಟ್ಟಿಗರು ಕೊಂಡಾಡುತ್ತಿದ್ದಾರೆ. 'ನಿಜವಾದ ವ್ಯಕ್ತಿತ್ವ ಹಾಗೂ ಆಕರ್ಷಣೆಗೆ ದುಬಾರಿ ಬಟ್ಟೆಗಳ ಹಂಗಿಲ್ಲ ಎಂಬುದನ್ನು ತಲೈವಾ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ' ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. 'ಕೋಟ್ಯಧಿಪತಿಯಾದರೂ ನೆಲದ ಮೇಲಿರುವ ಇವರ ವಿನಯತೆಯೇ ಇವರನ್ನು ನಿಜವಾದ ಸೂಪರ್‌ಸ್ಟಾರ್ ಮಾಡಿದೆ' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸರಳತೆಯಲ್ಲಿಯೇ ಅಪ್ರತಿಮ ಗಾಂಭೀರ್ಯವನ್ನು (Class and Swag) ಜಗತ್ತಿಗೆ ತೋರಿಸಿಕೊಟ್ಟಿರುವ ರಜನಿಕಾಂತ್ ಅವರ ಈ ರೂಪ, ಯುವ ಪೀಳಿಗೆಗೆ ನಿಜವಾದ ಸ್ಟಾರ್‌ಡಮ್ ಎಂದರೆ ಏನು ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.