
ಬೆಂಗಳೂರು(ನ.20): ಬಿಗ್ ಬಾಸ್ ಸೀಜನ್-3 ರವಿ ಮುರೂರು ಮೇಲೆ ಹಲ್ಲೆ ನಡೆಸಿದ್ದ ವಿಚಾರವಾಗಿ ಯಾವುದೇ ನಾಮಿನೇಷನ್ ಇಲ್ಲದೆ ಬಿಗ್ ಮನೆಯಿಂದ ಹೊರ ಬಂದಿದ್ದ 'ಹುಚ್ಚ' ವೆಂಕಟ್ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಿಗ್ ಮನೆಗೆ ರೀ ಎಂಟ್ರಿ ಪಡೆದಿದ್ದರು. ಮನೆಯೊಳಗೆ ಹೋದ ಹುಚ್ಚ ವೆಂಕಟ್ ಸುಮ್ಮನಿರದೆ ಪ್ರಥಮ್ ಮೇಲೆ ಹಲ್ಲೆ ನಡೆಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ವೆಂಕಟ್ ಮಾತ್ರ ತಾನ್ಯಾಕೆ ಹೊಡೆದೆ ಎಂಬ ವಿಚಾರವನ್ನು ಸವಿಸ್ತಾರವಾಗಿ ಬಿಚ್ಚಿಟ್ಟಿದ್ದರು.
ವೆಂಕಟ್'ರವರ ಈ ವರ್ತನೆಯನ್ನು ಕಂಡ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಹುಚ್ಚ ವೆಂಕಟ್ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ತಾನು ಕಾರ್ಯಕ್ರಮವನ್ನು ನಿರೂಪಣೆ ಮಾಡುವುದಿಲ್ಲ ಎಂದು ಕಟ್ಟಿ ಮುರಿದಂತೆ ಹೇಳಿದ್ದರು. ಈ ಎಲ್ಲಾ ಬೆಳವಣಿಗೆಗಗಳ ಬಳಿಕ 'ಹುಚ್ಚ' ವೆಂಕಟ್ ಕ್ಷಮೆಯಾಚಿಸಿದ್ದು, ಕಿಚ್ಚ ಕಾರ್ಯಕ್ರಮವನ್ನು ಮತ್ತೆ ಹೋಸ್ಟ್ ಮಾಡಿದ್ದರು.ಆದರೆ ಕಾರ್ಯಕ್ರಮ ನಿರೂಪಣೆ ಮಾಡಿದ ಸಂದರ್ಭದಲ್ಲಿ ಕಿಚ್ಚ ಹೇಳಿದ ಮಾತೊಂದು ವೆಂಕಟ್ ಸುಳ್ಳು ಹೇಳಿದ್ದರಾ ಎಂಬ ಅನುಮಾನವನ್ನು ಮೂಡಿಸುತ್ತದೆ.
ಏನು ಆ ಮಾತು?
'ಹುಚ್ಚ' ವೆಂಕಟ್ ಪ್ರಥಮ್ ಬಿಗ್ ಮನೆಗೆ ರೀ ಎಂಟ್ರಿ ಕೊಟ್ಟು ಹಲ್ಲೆ ನಡೆಸಿ ಹಿಂತಿರುಗಿದ ಬಳಿಕ, 'ಕಲರ್ಸ್ ವಾಹಿನಿಯವರು ತಾವಾಗೇ ನನ್ನನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿದ್ದರು' ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆದರೆ ಸುದೀಪ್ ಮಾತ್ರ 'ವೆಂಕಟ್'ರವರು ಹಿಂದಿನ ಸೀಜನ್'ನಲ್ಲಿ ರವಿ ಮುರೂರ್ ಮೇಲೆ ಹಲ್ಲೆ ನಡೆಸಿದ ಹೊರ ಬಂದ ಘಳಿಗೆಯಿಂದ ರೀ ಎಂಟ್ರಿ ಪಡೆಯುವವರೆಗೂ ಚಾನೆಲ್'ನವರಲ್ಲಿ ನಾನಲ್ಲಿ ಏನೋ ಕಳೆದುಕೊಂಡಿದ್ದೇನೆ. ಅದೇ ಜಾಗಕ್ಕೆ ವಾಪಾಸ್ ಹೋಗಬೇಕು ಅದನ್ನು ಮತ್ತೆ ವಾಪಾಸು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದರು. ಹೀಗಾಗಿ ಈ ಅವಕಾಶವನ್ನು ಒಂದು ಮಾನವೀಯತೆಯ ದೃಷ್ಟಿಯಿಂದ ನೀಡಲಾಗಿತ್ತು. ವ್ಯಕ್ತಿಯೊಬ್ಬನಿಗೆ ಎರಡನೇ ಅವಕಾಶ ಯಾವ ರೀತಿ ಕೊಡಬೇಕೋ ಹಾಗೆಯೇ ಬಿಗ್ ಬಾಸ್ ಮತ್ತು ಕಲರ್ಸ್ ಕಡೆಯಿಂದ ವೆಂಕಟ್'ಗೆ ಈ ಚಾನ್ಸ್ ಕೊಟ್ಟಿದ್ದರು' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.