ಮಡಿಕೇರಿಗೆ ಕಾರಿನಲ್ಲಿ ತೆರಳುತ್ತಿದ್ದ ಹುಚ್ಚಾ ವೆಂಕಟ್ ಮಾರ್ಗಮಧ್ಯೆ ಕಾರಿನಿಂದ ಇಳಿದು ಯುವಕರ ಬಳಿ ಹಣ ಕೇಳಿದ್ದಾರೆ. ಅವರ ಬಳಿ 100 ಪಡೆದು ಮಡಿಕೇರಿಗೆ ಪ್ರಯಾಣ ಬೆಳೆಸಿದ್ದನೆನ್ನಲಾಗಿದೆ.
ಬೆಂಗಳೂರು [ಆ.30]: ಗುರುವಾರ ಸಂಜೆ 5.10ರ ಸಮಯದಲ್ಲಿ ಮಡಿಕೇರಿಯತ್ತ ಕಾರಿನಲ್ಲಿ ಹೋಗುತ್ತಿದ್ದ ಹುಚ್ಚ ವೆಂಕಟ್, ಸುಂಟಿಕೊಪ್ಪ ಸಮೀಪದ ಸೆವೆಂತ್ ಮೈಲ್‌ನಲ್ಲಿ ರಸ್ತೆ ಬದಿ ನಿಂತಿದ್ದ ಮೂವರು ಯುವಕರನ್ನು ಕಂಡು ಕಾರನ್ನು ನಿಲ್ಲಿಸಿದ್ದಾನೆ.
ಬಳಿಕ ಅವರ ಬಳಿಗೆ ತೆರಳಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು, ‘ಖರ್ಚಿಗೆ ದುಡ್ಡು ಕೊಡಿ’ ಎಂದು ಯುವಕರನ್ನು ಕೇಳಿದ್ದಾನೆ.
ಹುಚ್ಚ ವೆಂಕಟ್ ಹುಚ್ಚಾಟ; ಮಡಿಕೇರಿ ಬೀದಿಯಲ್ಲಿ ಕಾರ್‌ಗಳ ಗ್ಲಾಸ್ ಡಮಾರ್!
ಈ ವೇಳೆ ಅವರು 100 ಕೊಟ್ಟಿದ್ದು, ದುಡ್ಡು ಸಿಕ್ಕಿದ ಕೂಡಲೇ ಕಾರನ್ನು ಹತ್ತಿ ಮಡಿಕೇರಿ ಕಡೆಗೆ ಪ್ರಯಾಣ ಬೆಳೆಸಿದ ಎಂದು ತಿಳಿದುಬಂದಿದೆ.