
ಮುಂಬೈ (ಜು. 30): ಹೃತಿಕ್ ರೋಷನ್ ಹಾಗೂ ಸೂಸಾನೆ ಕಾನ್ ಮತ್ತೊಮ್ಮೆ ಮದುವೆಯಾಗ್ತಾ ಇದ್ದಾರಾ? ಹೀಗೊಂದು ಸುದ್ದಿ ನಿನ್ನೆಯಿಂದ ಹರಿದಾಡ್ತಾ ಇದೆ.
ಬಲ್ಲ ಮೂಲಗಳ ಪ್ರಕಾರ ಇದು ಸುಳ್ಳು ಸುದ್ದಿ. ಹೃತಿಕ್ ಮತ್ತು ಸೂಸಾನೆ ಮತ್ತೆ ಮದುವೆಯಾಗ್ತಾರೆ ಅಂದರೆ ಅದಕ್ಕಿಂತ ಸಂತೋಷ ಬೇರೆ ಏನಿದೆ? ಅವರಿಬ್ಬರು ಉತ್ತಮ ಪೋಷಕರಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಹೃತಿಕ್ ಮತ್ತು ಸೂಸಾನೆ ಸ್ವತಂತ್ರು. ಮುಕ್ತವಾಗಿ ಯೋಚನೆ ಮಾಡುವವರು. ಒಂದು ವೇಳೆ ಅವರಿಬ್ಬರು ಮತ್ತೆ ಒಂದಾಗಬೇಕು ಎನಿಸಿದರೆ ಮತ್ತೆ ಹಿಂದಿರುಗುತ್ತಾರೆ. ಅದನ್ನು ಅವರೇ ನಿರ್ಧರಿಸುತ್ತಾರೆ. ಅಲ್ಲಿಯವರೆಗೆ ಜನ ಇಂತಹ ಸುದ್ದಿಗಳನ್ನು ನಂಬಬಾರದು ಎಂದಿದ್ದಾರೆ.
ಹೃತಿಕ್ ಮತ್ತು ಸೂಸಾನೆ 2000 ನೇ ಇಸವಿಯಲ್ಲಿ ವಿವಾಹವಾಗಿದ್ದರು. 2014 ರಲ್ಲಿ ವಿಚ್ಚೇದನವಾಗಿದೆ. ಇವರಿಗೆ ರೆಹಾನ್ ಮತ್ತು ರಿದಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರು ಬಾಲಿವುಡ್’ನ ಕ್ಯೂಟ್ ಕಪಲ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.