
ಯಶ್ ಅಭಿನಯದ ರಾಮಾಯಣ ಸಿನಿಮಾ ನವೆಂಬರ್ 5 ರಂದು ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡವು ಭರ್ಜರಿಯಾಗಿ ಪ್ರಚಾರ ನಡೆಸ್ತಿದೆ. ಬಿಡುವಿಲ್ಲದ ಪ್ರಚಾರದಲ್ಲಿ ಮುಳುಗಿರುವ ರಾಕಿಂಗ್ ಸ್ಟಾರ್ ಯಶ್ ಅವರು, ಕುತೂಹಲಕಾರಿ ವಿಷಯವೊಂದನ್ನ ತಿಳಿಸಿದ್ದಾರೆ! ಅದು ತುಂಬಾನೇ ಆಸಕ್ತಿದಾಯಕವಾಗಿದೆ.
ಅಂದಹಾಗೆ ನಿತೇಶ್ ತಿವಾರಿ ನಿರ್ದೇಶನದ Ramayana: Rise of a Legend ಚಿತ್ರದಲ್ಲಿ ಯಶ್ ಅವರು, ರಾವಣನ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಯಶ್ ರಾವಣನ ಪಾತ್ರ ಮಾಡುತ್ತಿದ್ದಾರೆ ಎಂದಾಗ 'ನೋ' ಅಂದವರೇ ಹೆಚ್ಚು. ಯಾಕೆ ಯಶ್ ರಾವಣನ ಪಾತ್ರವನ್ನೇ ಆಯ್ಕೆ ಮಾಡಿಕೊಂಡರು? ಯಶ್ ಒಪ್ಪಿಕೊಳ್ಳಬಾರದಿತ್ತು ಅಂದವರೇ ಜಾಸ್ತಿ. ಇದೀಗ ಇಂಥದ್ದೇ ಪ್ರಶ್ನೆಗಳನ್ನ ತಮ್ಮ ಮಕ್ಕಳಿಂದಲೂ ಎದುರಾಗಿದ್ದವು. ಆಗ ಮಕ್ಕಳನ್ನು ನಾನು ಹೇಗೆ ಎದುರಿಸಿದೆ. ಅವರಿಗೆ ಹೇಗೆ ರಾಮಾಯಣದ ಬಗ್ಗೆ ಅರಿವು ಮೂಡಿಸಿದೆ ಅನ್ನೋದನ್ನು ಯಶ್ ಹಂಚಿಕೊಂಡಿದ್ದಾರೆ. ಯಶ್ ನೀಡಿರುವ ಮಾಹಿತಿ ಹೀಗಿದೆ..
ಸಾಮಾನ್ಯವಾಗಿ ಮನೆಗಳಲ್ಲಿ ಅಜ್ಜ-ಅಜ್ಜಿ ಮಕ್ಕಳಿಗೆ ರಾಮಾಯಣದ ಕಥೆ ಹೇಳ್ತಾರೆ. ಆದರೆ ನನ್ನ ಮನೆಯಲ್ಲಿ ಪರಿಸ್ಥಿತಿ ಬೇರೆಯೇ ಇತ್ತು. ಯಾಕಂದ್ರೆ ನನ್ನ ಮಗನಿಗೆ ಅವನ ಅಪ್ಪನೇ ರಿಯಲ್ ಹೀರೋ. ಅವನಿಗೆ ರಾಮಾಯಣದ ಕಥೆಯೂ ಗೊತ್ತು. ಹೀಗಿರುವಾಗ ನಾನು ರಾವಣನ ಪಾತ್ರ ಮಾಡ್ತಿದ್ದೀನಿ ಅಂತ ತಿಳಿದಾಗ, ಅವನು ಗೊಂದಲಕ್ಕೊಳಗಾಗಿ ನನ್ನನ್ನೇ ಕೇಳಿದ. ‘ಡ್ಯಾಡಿ, ನೀನು ರಾವಣ ಹೇಗೆ ಆಗ್ತೀಯಾ? ನೀನು ರಾಮ ಅಲ್ವಾ? ಹಾಗಾದ್ರೆ ರಿಯಲ್ ಲೈಫ್‌ನಲ್ಲಿ ರಾಮ, ಸಿನಿಮಾದಲ್ಲಿ ರಾವಣನಾ? ಎಂದು ಕೇಳಿಬಿಟ್ಟ!
ಮಕ್ಕಳಿಗೆ ನಾನು ನಿಜ ಜೀವನ ಮತ್ತು ನಟನೆಯ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಸಬೇಕಿತ್ತು. ಅದಕ್ಕಾಗಿ ನಾನು ಚಿತ್ರಗಳನ್ನು (ಡ್ರಾಯಿಂಗ್ಸ್) ಬಿಡಿಸಿ ಅವರಿಗೆ ಕಥೆ ಮತ್ತು ಪಾತ್ರಗಳ ಬಗ್ಗೆ ಹೇಳಿಕೊಟ್ಟೆ. ನಾನು ಕೇವಲ ಆ ಪಾತ್ರದಲ್ಲಿ ನಟಿಸುತ್ತಿದ್ದೀನಿ ಅಷ್ಟೇ ಎಂದು ತಿಳಿಸಿದೆ. ಆಗ ಮಕ್ಕಳು, ಸಿನಿಮಾದಲ್ಲಿ ರಾವಣ ಸೋಲ್ತಾನಾ? ಸಾಯ್ತಾನಾ? ಹಾಗಾದ್ರೆ ನಾವು ಯಾರ ಪರ ಇರಬೇಕು? ಎಂದು ಕೇಳಿದರು. ಅದಕ್ಕೆ ನಾನು, ಸಿನಿಮಾದಲ್ಲಿ ನೀನು ನಿನ್ನಪ್ಪನಿಗೆ ಸಪೋರ್ಟ್ ಮಾಡು, ನಟನೆಯನ್ನು ಎಂಜಾಯ್ ಮಾಡು. ಆದರೆ ಅದನ್ನ ಪರ್ಸನಲ್ ಆಗಿ ತಗೋಬೇಡ ಎಂದು ಹೇಳಿದೆ.
ತುಂಬಾ ಜನ ನನ್ನನ್ನು, ಯಶ್ ಈ ಪಾತ್ರವನ್ನು ಯಾಕೆ ಮಾಡ್ತಿದ್ದಾರೆ? ಎಂದು ಕೇಳ್ತಾರೆ. ರಾವಣನ ಪಾತ್ರ ನೋಡೋಕೆ ತುಂಬಾ ಪವರ್‌ಫುಲ್ ಆಗಿ, ಗ್ಲಾಮರಸ್ ಆಗಿ ಅದ್ದೂರಿಯಾಗಿ ಕಾಣಿಸಬಹುದು. ಆದರೆ ಜೀವನದಲ್ಲಿ ನಿಜವಾಗಿ ನಾವು ಗೆಲ್ಲಬೇಕು ಅಂದರೆ.. ಶ್ರೀರಾಮನ ತತ್ವ ಮತ್ತು ಆದರ್ಶಗಳನ್ನು ಅರ್ಥಮಾಡಿಕೊಳ್ಳಬೇಕು. ನಾವೆಲ್ಲರೂ ಅನುಸರಿಸಬೇಕಾಗಿದ್ದು ಶ್ರೀರಾಮನ ದಾರಿಯನ್ನೇ. ಸಿನಿಮಾದಲ್ಲಿ ರಾವಣನನ್ನು ನೋಡಿ ಆಕರ್ಷಿತರಾಗುವುದಕ್ಕಿಂತ, ರಾಮಾಯಣದ ನಿಜವಾದ ಸಂದೇಶವಾದ ಶ್ರೀರಾಮನ ಮೌಲ್ಯಗಳನ್ನು ನಾವು ಮರೆಯಬಾರದು ಎಂದರು.
ಯಶ್ ಅವರ ಹೇಳಿಕೆಗಳಲ್ಲಿ.. ತಲೆಮಾರುಗಳಿಂದ ರವಾನಿಸಲ್ಪಟ್ಟಿರುವ ಮಹಾಕಾವ್ಯವನ್ನು ಪುನಃ ಹೇಳುವ ಜವಾಬ್ದಾರಿಯತ್ತ ಗಮನ ಸೆಳೆಯುತ್ತವೆ. ಪರಿಚಿತ ಕಥೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರಸ್ತುತಪಡಿಸುವುದರ ಬಗ್ಗೆ ಅಲ್ಲ. ಸಿನಿಮಾದ ಮೂಲಕ ರಾಮಾಯಣವನ್ನು ಎದುರಿಸಬಹುದಾದ ಕಿರಿಯ ಪ್ರೇಕ್ಷಕರಿಗೆ ಅದರ ಪಾತ್ರಗಳು ಮತ್ತು ಮೌಲ್ಯಗಳನ್ನು ಪ್ರವೇಶಿಸುವಂತೆ ಮಾಡುವ ಬಗ್ಗೆಯೂ ಇದು ಇದೆ. ನಿತೇಶ್ ತಿವಾರಿ ನಿರ್ದೇಶನದ ಮತ್ತು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ನಿರ್ಮಿಸಿದ ರಾಮಾಯಣ: ಭಾಗ 1 ದೀಪಾವಳಿಯ ಸಮಯಕ್ಕೆ ನವೆಂಬರ್ 5, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.