
ನಟ ದರ್ಶನ್ ಕುದುರೆ ಮಾರಾಟಕ್ಕಿದೆ!
ಜೈಲಿನಲ್ಲಿ ನಟ ದರ್ಶನ್ ತೂಗುದೀಪ (Darshan Thoogudeepa) ಅವರು ಕಾಲ ಕಳೆಯುತ್ತಿರುವುದು ಗೊತ್ತೇ ಇದೆ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ತೂಗುದೀಪ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಯಾಗಿ ಇದ್ದಾರೆ. ಇದೇ ವೇಳೆ, ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು 'ಕುದುರೆ ಮಾರಾಟಕ್ಕಿದೆ' ಎಂಬ ಬೋರ್ಡನ್ನು ದರ್ಶನ್ ಅವರ ಮೈಸೂರು ಫಾರ್ಮ್ ಹೌಸ್ ಮುಂದೆ ಹಾಕಿಸಿದ್ದಾರೆ. ಆದರೆ, ಫಾರ್ಮ್ ಹೌಸ್ ಹೆಸರು ಈಗ ಬದಲಾಗಿದೆ.
ಹೌದು, ನಟ ದರ್ಶನ್ ತೂಗುದೀಪ ಅವರ ಮೈಸೂರು ಫಾರ್ಮ್ ಹೌಸ್ ಹೆಸರನ್ನು ಒಮ್ಮೆ ಜೈಲಿಂದ ಹೊರಬಂದ ಸಮಯದಲ್ಲೆ ಸ್ವತಃ ನಟ ದರ್ಶನ್ ಅವರೇ ಬದಲಾಯಿಸಿದ್ದರು. ದರ್ಶನ್ ಫಾರ್ಮ್ ಹೌಸ್ ಬದಲಾಗಿ ಅದನ್ನು 'ವಿನೀಶ್ ದರ್ಶನ್ ಮಾರ್ವರಿ ಸ್ಟಡ್ ಪಾರ್ಮ್' (Vinish Darshan Marvari Stud Farm) ಎಂದು ಚೇಂಜ್ ಮಾಡಲಾಗಿತ್ತು. ಇದೀಗ ಈ ವಿನೀಶ್ ಫಾರಂ ಹೌಸ್ ಮುಂದೆ ಕುದುರೆ ಮಾರಾಟಕ್ಕಿದೆ (Horse for Sale) ಎಂಬ ಬೋರ್ಡ್ ಕಾಣಿಸುತ್ತಿದೆ. ಇದು ಹೊಸ ಕಥೆಯನ್ನು ಹೇಳುತ್ತಿದೆಯೇ?
ಆ ಬಗ್ಗೆ ಸರಿಯಾಗೊ ಗೊತ್ತಿಲ್ಲ, ಊಹಾಪೋಹ ಬೇಡ. ಆದರೆ, ಇಲ್ಲೊಂದು ಹೊಸ ಸುದ್ದಿ ಇದೆ ಹೇಳಲು.. ದರ್ಶನ್ ತೂಗುದೀಪ (Darshan Thoogudeepa) ನಟನೆಯ ‘ದಿ ಡೆವಿಲ್’ ಸಿನಿಮಾ ತಂಡ ಹೊಸ ನ್ಯೂಸ್ವೊಂದನ್ನ ಕೊಟ್ಟಿದೆ. ಮೊದಲ ಹಾಡು ರಿಲೀಸ್ ಮಾಡಿ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಅಂತ ಸಾರಿದ್ದ ಡೆವಿಲ್ ಟೀಂ, ಈಗ ‘ಒಂದೇ ಒಂದು ಸಲ’ ಅನ್ನೋ ರೊಮ್ಯಾಂಟಿಕ್ ಸಾಂಗ್ನ ರಿಲೀಸ್ ಮಾಡೋದಕ್ಕೆ ಸಜ್ಜಾಗಿದೆ.
ದಿ ಡೆವಿಲ್ ಸಿನಿಮಾದ ಮೊದಲ ಹಾಡು ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಟ್ರೆಂಡ್ ಸೃಷ್ಟಿಸಿರೋದು ಗೊತ್ತೇ ಇದೆ. ಹಾಡಿನ ಲಿರಿಕ್ಸ್, ಮ್ಯೂಸಿಕ್ ಅಷ್ಟೋಂದು ಮಜ ಕೊಡದೇ ಹೋದ್ರೂ ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಅನ್ನೋ ಒಂದು ಸಾಲಂತೂ ಭಾರೀ ಸದ್ದು ಮಾಡಿದೆ.
ಮತ್ತೀಗ ದಿ ಡೆವಿಲ್ ಸಿನಿಮಾದ ಎರಡನೇ ಹಾಡು ಒಂದೇ ಒಂದು ಸಲ ಅಕ್ಟೋಬರ್ 10 ರಿಲೀಸ್ ಆಗಲಿದೆ. ಇದು ಪಕ್ಕಾ ರೊಮ್ಯಾಂಟಿಕ್ ಸಾಂಗ್. ಸದ್ಯ ರಿಲೀಸ್ ಆಗಿರೋ ಪೋಸ್ಟರ್ ನಲ್ಲಿ ನಾಯಕಿ ರಚನಾ ರೈ ಹಾಟ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಪಡ್ಡೆ ಹೈಕಳು ಫುಲ್ ಫಿಧಾ ಆಗಿದ್ದಾರೆ.
ಒಂದೇ ಒಂದು ಸಲ ಸಾಂಗ್ನಲ್ಲಿ ದರ್ಶನ್ ಅಂಡ್ ರಚನಾ ಹಾಟ್ ಕೆಮೆಸ್ಟ್ರಿ ಇರಲಿದೆ ಅನ್ನೋದ್ರ ಸೂಚನೆ ಕೊಟ್ಟಿದೆ ಪೋಸ್ಟರ್. ಪ್ರಮೋದ್ ಮರವಂತೆ ಈ ಹಾಡಿಗೆ ಲಿರಿಕ್ಸ್ ಬರೆದಿದ್ದು ಅಜನೀಶ್ ಲೋಕನಾಶ್ ಮ್ಯೂಸಿಕ್ ಇದೆ.
ದರ್ಶನ್ ಸಿನಿಮಾಗಳಲ್ಲಿ ಅದೆಷ್ಟು ಮಾಸ್ ಹಾಡುಗಳಿರ್ತಾವೋ ಜೊತೆಗೊಂದು ರೊಮ್ಯಾಂಟಿಕ್ ನಂಬರ್ ಕೂಡ ಇದ್ದೇ ಇರುತ್ತೆ. ಯಜಮಾನ, ಕ್ರಾಂತಿ, ರಾಬರ್ಟ್, ಕಾಟೇರಗಳಲ್ಲಿ ಇದು ವರ್ಕ್ ಆಗಿದೆ.
ದಿ ಡೆವಿಲ್ ಟೀಸರ್, ಪೋಸ್ಟರ್ ನೋಡ್ತಿದ್ರೆ ಇದು ಪಕ್ಕಾ ಮಾಸ್ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಈ ಮಾಸ್ ನಡುವೆ ಒಂಚೂರು ಮಸಾಲೆ ಕೂಡ ಇದೆ ಅನ್ನೋದಕ್ಕೆ ಈ ಸಾಂಗ್ ಸಾಕ್ಷಿ.
‘ದಿ ಡೆವಿಲ್’ ಸಿನಿಮಾದ ರಿಲೀಸ್ ಡಿಸೆಂಬರ್ 12ಕ್ಕೆ ಫಿಕ್ಸ್ ಆಗಿದೆ. ಸಿನಿತಂಡ ಇನ್ನೂ ಪ್ರಚಾರವನ್ನ ಶುರುಮಾಡಿಲ್ಲ. ಎರಡನೇ ಸಾಂಗ್ ಮೂಲಕ ಪ್ರಚಾರ ಕೂಡ ಶುರುಮಾಡಲಿರೋ ಡೆವಿಲ್ ಟೀಂ.. ಸಿನಿಮಾದಲ್ಲಿರೋ ಒಂದೋಂದೇ ಸರ್ಪ್ರೈಸ್ಗಳನ್ನ ರಿವೀಲ್ ಮಾಡೋ ತಯಾರಿಯಲ್ಲಿದ್ದಾರೆ. ಒಟ್ಟಿನಲ್ಲಿ, ತೆರೆಗೆ ಬರಲು ಇನ್ನು 3 ತಿಂಗಳಷ್ಟೇ ಬಾಕಿ ಇರುವ ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ಈಗಲೇ ಸಾಕಷ್ಟು ಸೌಂಡ್ ಮಾಡತೊಡಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.