
ಅರ್ಜುನ್ ರಾಜ್ ಆಕ್ಷನ್ ಸೀನ್ ನೋಡಿ ಪ್ರಪಂಚವೇ ಫಿದಾ!
ರಿಷಬ್ ಶೆಟ್ಟಿ (Rishab Shetty) ನಟನೆ-ನಿರ್ದೇಶನದ 'ಕಾಂತಾರ ಚಾಪ್ಟರ್ 1' ಸಿನಿಮಾ ರಿಲೀಸ್ ಆಗಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಜಗತ್ತಿನಾದ್ಯಂತ 7000 ಕ್ಕೂ ಹೆಚ್ಚು ಥೀಯೇಟರ್‌ಗಳಲ್ಲಿ 'ಕಾಂತಾರ ಪ್ರೀಕ್ವೆಲ್' ಅಬ್ಬರಿಸುತ್ತಿದೆ. ಕಾಂತಾರ ಚಾಪ್ಟರ್ 1 ಸಿನಿಮಾದ ಸಾಹಸ ದೃಶ್ಯಗಳ ಬಗ್ಗೆ ಭಾರೀ ಟಾಕ್ ಕ್ರಿಯೇಟ್ ಆಗಿದೆ. ಮೈನವಿರೇಳಿಸುವ ಆಕ್ಷನ್ ಸೀನ್ಸ್ ನೋಡಿದವರು ಥಿಯೇಟರ್‌ನಿಂದ ಹೊರಗೆ ಬಂದ ಬಳಿಕವೂ ಆ ಬಗ್ಗೆ ಮಾತನ್ನಾಡುತ್ತಿದ್ದು, ಆ ಹ್ಯಾಂಗೋವರ್ ವಾರ ಮುಗಿದರೂ ಸ್ಟಾಪ್ ಆಗಲ್ಲ ಅಂತಿದ್ದಾರೆ. ಈ ರೋಮಾಂಚನಕಾರಿ ಸಾಹಸ ದೃಶ್ಯಗಳ ಸೃಷಿಕರ್ತ ಕನ್ನಡಿಗ ಅರ್ಜುನ್ ರಾಜ್.
ಹೌದು, ಅರ್ಜುನ್ ಮಾಸ್ಟರ್ (Arjun Master) ಎಂದು ಕರೆಸಿಕೊಳ್ಳುವ ಈ ಹ್ಯಾಂಡ್‌ಸಮ್ ಸ್ಟಂಟ್ ಮಾಸ್ಟರ್ ಅರ್ಜುನ್ ರಾಜ್ (Arjun Raj) ಅವರು 'ಕಾಂತಾರ ಚಾಪ್ಟರ್ 1' ಸಿನಿಮಾಗೆ ಅದ್ಭುತ ಸಾಹಸ ದೃಶ್ಯಗಳನ್ನು ಕೊಟ್ಟಿದ್ದಾರೆ. ಸಿನಿಮಾ ಕಥೆಯದ್ದು 'ತಕ್ಕಡಿಯ ಒಂದು ಕಡೆ ತೂಕವಾದರೆ ಆಕ್ಷನ್ ದೃಶ್ಯಗಳನ್ನು ಇನ್ನೊಂದು ಕಡೆ ತೂಕ' ಎಂಬಷ್ಟರ ಮಟ್ಟಿಗೆ ಅರ್ಜುನ್ ರಾಜ್ ಅವರು ಸಾಹಸ ದೃಶ್ಯಗಳನ್ನು ಸಿನಿಮಾದಲ್ಲಿ ಅಳವಡಿಸಿ ಈ ಸಿನಿಮಾದ ಸಕ್ಸಸ್‌ನಲ್ಲಿ ಭಾರೀ ಪಾಲು ಗಳಿಸಿದ್ದಾರೆ. ಅರ್ಜುನ್ ರಾಜ್ ಆಕ್ಷನ್ ದೃಶ್ಯಗಳ ಕೊರಿಯಾಗ್ರಫಿ ಅಚ್ಚರಿ ಹುಟ್ಟಿಸುವಂತಿದೆ. ಅದಕ್ಕೆ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ಈಕ್ವೆಲ್ ಸಾಥ್ ಕೊಟ್ಟಿದ್ದಾರೆ.
‘ಕಾಂತಾರ ಚಾಪ್ಟರ್ 1’ ಸಿನಿಮಾದ ಹಲವು ಸಾಹಸ ದೃಶ್ಯಗಳು ತುಂಬಾ ಕಠಿಣ ಎನ್ನಿಸುತ್ತವೆ. ಅಷ್ಟು ಕರಾರುವಕ್ಕಾಗಿ ಹಾಗೂ ನೋಡುಗರನ್ನು ಸೀಟಿನ ತುದಿಗೆ ತಂದು ಕೂಡ್ರಿಸುವ ಲೆವಲ್‌ನ ಆಕ್ಷನ್ ದೃಶ್ಯಗಳನ್ನು ಸೃಷ್ಟಿಸುವುದು ಅಷ್ಟು ಸಲುಭದ ಕೆಲಸವೇನೂ ಅಲ್ಲ. ಅದಕ್ಕೆ ಕಠಿಣ ಪರಿಶ್ರಮದ ಜೊತೆಗೆ ಅಪಾರ ಅನುಭವ ಕೂಡ ಬೇಕಾಗುತ್ತದೆ. ಅಂಥ ಅನುಭವ ಹಾಗೂ ಮನೋಸ್ಥೈರ್ಯ ಸ್ಟಂಟ್ ಮಾಸ್ಟರ್ ಅರ್ಜುನ್ ರಾಜ್ ಅವರಲ್ಲಿದೆ ಇದೆ ಎಂಬ ಸಂಗತಿ ಈಗ ಇಡೀ ಜಗತ್ತಿಗೇ ಗೊತ್ತಾಗಿದೆ.
ಹೌದು, ರಿಷಬ್ ಶೆಟ್ಟಿ ನಟನೆ-ನಿರ್ದೇಶನದ 'ಕಾಂತಾರ ಚಾಪ್ಟರ್ 1' ಇಡೀ ಗ್ಲೋಬಲ್ ಮಟ್ಟದಲ್ಲಿ ರೀಚ್ ಆಗಿರೋ ಸಿನಿಮಾ. ಇಂದು ಈ ಸಿನಿಮಾದ ಬಗ್ಗೆ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ. ಇದೇ ವೇಳೆ, ಅರ್ಜುನ್ ರಾಜ್ ಅವರ ಸೂಪರ್ ಆಗಿರೋ ಸ್ಟಂಟ್‌ಗಳ ಬಗ್ಗೆ ಕೂಡ ಇಡೀ ಪ್ರಪಂಚ ಮಾತನ್ನಾಡುವಂತೆ ಆಗಿದೆ. ರಿಷಬ್ ಶೆಟ್ಟಿ ಮಾಡುವ ಪ್ರತಿ ಸಾಹಸ ದೃಶ್ಯಗಳ ಹಿಂದೆ ಅರ್ಜುನ್ ರಾಜ್ ಅವರ ಪ್ರತಿಭೆ ಹಾಗೂ ಪರಿಶ್ರಮ ಅಡಗಿದೆ. ಈ ಸಿನಿಮಾ ಮೂಲಕ ಕನ್ನಡದ ಸ್ಟಂಟ್ ಮಾಸ್ಟರ್ ಅರ್ಜುನ್ ರಾಜ್ ಅವರು ಜಾಗತಿಕ ಮಟ್ಟದಲ್ಲಿ, 'ಆಹಾ, ಓಹೋ, ಸೂಪರ್, ಫೆಂಟಾಸ್ಟಿಕ್..' ಎನ್ನುವಂಥ ಆಕ್ಷನ್ ಸೀನ್ ಕ್ರಿಯೇಟ್ ಮಾಡಬಲ್ಲರು ಎಂಬ ಸತ್ಯ ಹೊರಬಿದ್ದಿದೆ. ಹಾಲಿವುಡ್ ತಂತ್ರಜ್ಞರು ಕೂಡ ಕಣ್‌ಕಣ್ ಬಿಟ್ಟು ನೋಡುತ್ತಿರುವುದು ಈಗ ಸೀಕ್ರೆಟ್ ಆಗಿ ಉಳಿದಿಲ್ಲ.
'ಕಾಂತಾರ ಪ್ರೀಕ್ವೆಲ್' ಕೋರಿಯಾಗ್ರಫಿಯನ್ನು ಜಗತ್ತು ಮೆಚ್ಚಿ ಈಗ ಕೊಂಡಾಡುತ್ತಿದೆ. ಈ ಬಗ್ಗೆ 'ಕಾಂತಾರ ಚಾಪ್ಟರ್ 1' ಸಿನಿಮಾದ ಟ್ರೈಲರ್ ರಿಲೀಸ್ ವೇಳೆಯಲ್ಲಿಯೇ ಕೋರಿಯಾಗ್ರಫರ್ ಅರ್ಜುನ್ ಮಾಸ್ಟರ್ ಮಾತನ್ನಾಡಿದ್ದರು. ಆಕ್ಷನ್ ಸೀನ್‌ಗಳು ಹೈ-ಲೆವಲ್‌ನಲ್ಲಿವೆ ಎಂಬ ಸುಳಿವನ್ನು ನೀಡಿದ್ದರು. ಕಾಂತಾರ ಭಾಗ 1ರಲ್ಲಿ ತಾವು ಸೃಷ್ಟಿಸಿರುವ ಹಾಗೂ ರಿಷಬ್ ಶೆಟ್ಟಿ ಮಾಡಿರುವ ಸಾಹಸ ದೃಶ್ಯಗಳ ಬಗ್ಗೆ ಅವರು ಹೀಗೆ ಹೇಳಿದ್ದರು...
ಅರ್ಜುನ್ ರಾಜ್ ಅವರು ಈ ಬಗ್ಗೆ ‘ನಾನು ತುಂಬಾ ಕಷ್ಟದ ಸಾಹಸ ದೃಶ್ಯಗಳನ್ನು ಇದರಲ್ಲಿ ಕೊರಿಯಾಗ್ರಫಿ ಮಾಡಿದ್ದೇನೆ. ಇದರಲ್ಲಿ ತುಂಬಾನೇ ಕಷ್ಟದ ಹಲವಾರು ಆಕ್ಷನ್ ಸೀನ್‌ಗಳು ಇವೆ. ಆದರೆ ರಿಷಬ್ ಶೆಟ್ಟಿಯವರು ಯಾವುದಕ್ಕೂ ಅಳುಕದೇ ಇಲ್ಲವನ್ನೂ ಕಷ್ಟಪಟ್ಟು-ಇಷ್ಟಪಟ್ಟು ಮಾಡಿದ್ದಾರೆ. ಯಾವುದನ್ನೂ ಆಗಲ್ಲ ಅಂತ ಹೇಳ್ತಾ ಇರ್ಲಿಲ್ಲ. ’ನನ್ನ ಜೀವ ಇರೋವರೆಗೆ ಟ್ರೈ ಮಾಡ್ತೇನೆ..' ಅಂತ ಹೇಳಿ ಸಾಹಸ ದೃಶ್ಯ ಮಾಡ್ತಿದ್ರು..' ಎಂದಿದ್ದರು. ಇದೇ ಮಾತನ್ನು ಇನ್ನಷ್ಟು ವಿವರಣೆಗಳೊಂದಿಗೆ ಈಗಲೂ ಹೇಳುತ್ತಿದ್ದಾರೆ ಅರ್ಜುನ್ ರಾಜ್.
ಅಂದಹಾಗೆ, 'ಕಾಂತಾರ ಚಾಪ್ಟರ್ 1' ಸಿನಿಮಾದ ಆಕ್ಷನ್ ಮಾಸ್ಟರ್, ಸ್ಟಂಟ್ ಕ್ರಿಯೇಟರ್ ಅರ್ಜುನ್ ರಾಜ್ ಅವರು ಮುಂದಿನ ದಿನಗಳಲ್ಲಿ ಇನ್ನೂ ಬಹಳಷ್ಟು ಎತ್ತರಕ್ಕೆ ಏರುವ ಎಲ್ಲಾ ಸಾಧ್ಯತೆಗಳ ಬಗ್ಗೆ ಸ್ಯಾಂಡಲ್‌ವುಡ್ ಸೇರಿದಂತೆ ಇಡೀ ಜಗತ್ತು ಇಂದು ಮಾತನ್ನಾಡತೊಡಗಿದೆ. ಕನ್ನಡಿಗ ಅರ್ಜುನ್ ರಾಜ್ ಅವರು ಇನ್ನೂ ಹೆಚ್ಚಿನ ಸಾಮರ್ಥ್ಯ ಹಾಗೂ ಸಾಧನೆಗಳೊಂದಿಗೆ ವೈಯಕ್ತಿಕ ಬೆಳವಣಿಗೆ ಜೊತೆಜೊತೆಗೆ ಸ್ಯಾಂಡಲ್‌ವುಡ್ ಹೆಸರನ್ನೂ ವಿಶ್ವಮಟ್ಟದಲ್ಲಿ ಮತ್ತಷ್ಟು ಹೆಚ್ಚು ಪ್ರಚಾರ ಮಾಡುವಂತಾಗಲಿ ಎಂಬುದು ಎಲ್ಲರ ಹಾರೈಕೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.