
ಇದೇ 28ರಂದು ಜೀ ಕನ್ನಡದಲ್ಲಿ ಜಗದ್ಧಾತ್ರಿ ಸೀರಿಯಲ್ ಆರಂಭವಾಗಿದೆ. ಇದರ ವಿವಿಧ ರೀತಿಯ ಪ್ರೊಮೋ ಇದಾಗಲೇ ಬಿಡುಗಡೆಯಾಗುತ್ತಿದೆ. ಆರಂಭದ ಪ್ರೊಮೋದಲ್ಲಿಯೇ ಅತಿ ಕಡಿಮೆ ಟೈಮ್ನಲ್ಲಿಯೇ 10 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು ದಾಖಲೆಯಾಗಿತ್ತು. ಇದೀಗ ನಟ ವಿಜಯ ಸೂರ್ಯ ಮತ್ತು ನಟಿ ಮೋಕ್ಷಿತಾ ಪೈ ಒಂದಾಗಿ ಡ್ಯೂಯೆಟ್ ಹಾಡನ್ನು ಹಾಡಿರುವ ಪ್ರೊಮೋ ರಿಲೀಸ್ ಮಾಡಲಾಗಿದೆ. ಇದರಲ್ಲಿ ವಿಜಯ ಸೂರ್ಯ ಅವರು ಹುಕ್ ಸ್ಟೆಪ್ ಮಾಡಿದ್ದಾರೆ. ಇದೇ ರೀತಿ ಹುಕ್ ಸ್ಟೆಪ್ ಮಾಡುವಂತೆ ವೀಕ್ಷಕರಿಗೆ ಅದರಲ್ಲಿಯೂ ಡಾನ್ಸ್ ಪ್ರಿಯರಿಗೆ ಬಿಗ್ ಆಫರ್ ಕೊಟ್ಟಿದ್ದಾರೆ ವಿಜಯ ಸೂರ್ಯ.
ಇದರ ಪ್ರೋಮೋದಲ್ಲಿ ವಿಜಯ ಸೂರ್ಯ ಅವರು ಮಾಡಿದಂತೆ ಹುಕ್ ಸ್ಟೆಪ್ ಹಾಕಬೇಕು. ಅದನ್ನು ವಿಡಿಯೋ ಮಾಡಿ, ಜೀ ಕನ್ನಡಕ್ಕೆ ಟ್ಯಾಗ್ ಮಾಡಬೇಕು. ಆಯ್ದ ಅದೃಷ್ಟಶಾಲಿಗಳಿಗೆ ವಿಜಯ ಸೂರ್ಯ (Vijay Suriya) ಅವರ ಜೊತೆ ರೀಲ್ಸ್ ಮಾಡುವ ಅವಕಾಶ ಇರಲಿದೆ. ಈ ಬಗ್ಗೆ ಲೈವ್ಗೆ ಬಂದಿರುವ ನಟ ವಿಷಯವನ್ನು ತಿಳಿಸಿದ್ದಾರೆ. ಇನ್ನೇಕೆ ತಡ, ನೀವು ಡಾನ್ಸ್ ಪ್ರಿಯರಾಗಿದ್ದು, ನಟನ ರೀತಿಯಲ್ಲಿ ಹುಕ್ ಸ್ಟೆಪ್ ಹಾಕಲು ಬಂದರೆ, ಕೂಡಲೇ ಟ್ರೈ ಮಾಡಿ ಅದೃಷ್ಟ ಪರೀಕ್ಷಿಸಿಕೊಳ್ಳಿ.
ಈ ಪ್ರೊಮೋ ನೋಡಿದರೆ ನಾಯಕಿ ಮೋಕ್ಷಿತಾಗೆ ಅಮ್ಮನಿಲ್ಲ. ಇಲ್ಲಿಯೂ ಲೇಡಿ ವಿಲನ್ ಚಿಕ್ಕಮ್ಮನ ಟಾರ್ಚರ್ ಸಹಿಸಿಕೊಳ್ಳುತ್ತಿದ್ದಾಳೆ ನಾಯಕಿ. ಹೆಜ್ಜೆ ಹೆಜ್ಜೆಗೂ ಅಪಶುಕನ ಎನ್ನುವ ಬೈಗುಳ. ಜೊತೆಯಲ್ಲಿ ಮನೆಯ ಎಲ್ಲಾ ಜವಾಬ್ದಾರಿಗಳನ್ನೂ ನಿಭಾಯಿಸುತ್ತಿದ್ದಾಳೆ ನಾಯಕಿ ಜಗದ್ಧಾತ್ರಿ. ಆದರೆ, ಅದೇ ವೇಳೆ Mokshita Pai ಅವರು ಕ್ರೈಂ ಬ್ರ್ಯಾಂಚ್ ಆಫೀಸರ್ ಕೂಡ ಆಗಿದ್ದಾರೆ. ಬಹುಶಃ ಇದು ಮನೆಯವರಿಗೆ ತಿಳಿದಿಲ್ಲ ಎನ್ನುವುದು ಸದ್ಯ ಬಿಡುಗಡೆಯಾಗಿರುವ ಪ್ರೊಮೋದಿಂದ ಅಂದಾಜಿಸಬಹುದಾಗಿದೆ. ನಾಯಕಿ ಸ್ಪೈ ಏಜೆಂಟ್ ಆಗಿದ್ದು, ಅದರ ಬಗ್ಗೆ ಮನೆಯವರಿಗೆ ಅರಿವಿದ್ದಂತಿಲ್ಲ.
ನಾಯಕ ವಿಜಯ ಸೂರ್ಯ ಅವರೂ ಬ್ರ್ಯಾಂಚ್ ಆಫೀಸರ್ ಆಗಿದ್ದಾರೆ. ಅವರಿಗೆ ನಟಿಯ ಮೇಲೆ ಲವ್ ಶುರುವಾಗುತ್ತದೆ. ನಿಂತಲ್ಲಿ, ಕುಂತಲ್ಲಿ ಆಕೆಯದ್ದೇ ನೆನಪಾಗುತ್ತಿರುತ್ತದೆ. ಅದೇ ಗುಂಗಿನಲ್ಲಿ ಮಾಡಿರುವ ಡಾನ್ಸ್ ಇದಾಗಿದೆ. ಇದರ ಪ್ರೊಮೋ ರಿಲೀಸ್ ಆಗಿದ್ದು, ಜೀ ಕನ್ನಡ ವಾಹಿನಿಯ ಇನ್ಸ್ಟಾಗ್ರಾಮ್ ಪುಟದಲ್ಲಿ ನೋಡಬಹುದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.