ಗಂಗೆಯಲ್ಲಿ ಮಿಂದು ವಾರಾಣಾಸಿಯಲ್ಲಿ ಹುಟ್ಟುಹಬ್ಬ ಆಚರಿಸಿದ ಹಾಲಿವುಡ್ ನಟ!

By Anusha Kb  |  First Published Sep 27, 2024, 8:40 PM IST

ಹಾಲಿವುಡ್‌ ನಟ ವಿಲ್‌ಸ್ಮಿತ್ ಅವರ ಹುಟ್ಟುಹಬ್ಬ  ಹಬ್ಬ ಮೊನ್ನೆ ಕಳೆದು ಹೋಯ್ತು. 1968ರ ಸೆಪ್ಟೆಂಬರ್‌ 25 ರಂದು ಜನಿಸಿದ ವಿಲ್‌ಸ್ಮಿತ್ ಅವರು 56ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಆದರೆ ಅವರು ಈಗ ಭಾರತದ ವಾರಣಾಸಿಯಲ್ಲಿ  ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ!


ಹಾಲಿವುಡ್‌ ನಟ ವಿಲ್‌ಸ್ಮಿತ್ ಅವರ ಹುಟ್ಟುಹಬ್ಬ  ಹಬ್ಬ ಮೊನ್ನೆ ಕಳೆದು ಹೋಯ್ತು. 1968ರ ಸೆಪ್ಟೆಂಬರ್‌ 25 ರಂದು ಜನಿಸಿದ ವಿಲ್‌ಸ್ಮಿತ್ ಅವರು 56ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಆದರೆ ಅವರು ಈಗ ಭಾರತದ ವಾರಣಾಸಿಯಲ್ಲಿ  ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಎನ್ನಲಾದ ವೀಡಿಯೋವೊಂದು ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಾರಣಾಸಿಯ ಗಂಗಾ ನದಿಯಲ್ಲಿ ಮಿಂದು ಗಂಗಾರತಿ ಮಾಡುತ್ತಾ ಗಂಗೆಯ ತಟದಲ್ಲಿ ಪೂಜೆ ಮಾಡುತ್ತಾ ಇರುವ ವೀಡಿಯೋ ಫೋಟೋ ವೈರಲ್ ಆಗಿದೆ. ಆದರೆ ಇದು ಎಐ ನಿರ್ಮಿತ ವೀಡಿಯೋ ಎಂಬುದೇ ಮಜವಾದ ಸಂಗತಿ

ಇದು ಎಐ ಯುಗ ಏನೇ ಕೃತಕ ಬುದ್ಧಿಮತ್ತೆ ಬಳಸಿ ಯಾರ ಫೋಟೋವನ್ನು ಎಲ್ಲಿಗೆ ಬೇಕಾದರೂ ಜೋಡಿಸಬಹುದು. ಎಲ್ಲೋ ಇರುವಂತೆ ಮಾಡಬಹುದು. ಎಐ ತಂತ್ರಜ್ಞಾನದ ಈ ಅಪೂರ್ವ ಅವಕಾಶವನ್ನು ಬಳಸಿಕೊಳ್ಳುತ್ತಿರುವ ಕೆಲವರು ತಮಗೆ ಬೇಕಾದಂತೆ ತಮ್ಮ ನೆಚ್ಚಿನ ನಟ ನಟಿಯರ ವೀಡಿಯೋ ಪೋಟೋಗಳನ್ನು ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇದೇ ರೀತಿ ಈ ಹಿಂದೆ ಪ್ರಪಂಚದ ರಾಜಕಾರಣಿಗಳ ಬಾಲ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದರ ಜೊತೆಗೆ ಮೊನ್ನೆ ಮೊನ್ನೆಯಷ್ಟೇ ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಮಗುವಿನ ಎಐ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು.

Tap to resize

Latest Videos

undefined

ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದ್ದ ಪ್ರಕರಣ; 'ಆಸ್ಕರ್'ನಿಂದ ವಿಲ್ ಸ್ಮಿತ್ ಗೆ 10 ವರ್ಷ ಬ್ಯಾನ್

ಅದೇ ರೀತಿ ಈಗ ಹಾಲಿವುಡ್‌ ನಟ ವಿಲ್‌ ಸ್ಮಿತ್ ಅವರ ಭಾರತೀಯ ಅಭಿಮಾನಿಗಳು ಯಾರೋ ಕೃತಕ ಬುದ್ಧಿಮತ್ತೆ ಬಳಸಿ ನಟ ಭಾರತದಲ್ಲಿ ಅದರಲ್ಲೂ ಗಂಗೆಯ ತಟದಲ್ಲಿ ತಮ್ಮ 56ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವಂತೆ ಫೋಟೋ ಹಾಗೂ ವೀಡಿಯೋ ಕ್ರಿಯೇಟ್ ಮಾಡಿ ಪೋಸ್ಟ್ ಮಾಡಿದ್ದು, ಈ ವೀಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಈಗ ಸಖತ್ ವೈರಲ್ ಆಗಿವೆ. ಒಂದು ವೀಡಿಯೋದಲ್ಲಿ ನಟ ವಿಲ್‌ಸ್ಮಿತ್ ಕತ್ತಿಗೆ ಹೂವಿನ ಮಾಲೆಯನ್ನು ಹಾಕಿ ಗಂಗೆಯಲ್ಲಿ ಇಳಿದು ಕೈಯಲ್ಲಿ ದೀಪವನ್ನು ಹಿಡಿದು ಆರತಿ ಮಾಡುವಂತಹ ದೃಶ್ಯವಿದ್ದರೆ, ಮತ್ತೊಂದು ಫೋಟೋದಲ್ಲಿ ಬಿಳಿ ವೇಸ್ಟಿಯುಟ್ಟು, ಹೆಗಲಿಗೊಂದು ಶಾಲು ಹಾಕಿಕೊಂಡು ಗಂಗೆಯ ತಟದಲ್ಲಿ ಕುಳಿತು ಪೂಜೆಯಲ್ಲಿ ಭಾಗಿಯಾದಂತೆ ಕಾಣುವ ಫೋಟೋವಿದೆ. ಹೀಗೆ ಒಟ್ಟು ಮೂರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Oscar 2022; ವೇದಿಕೆ ಮೇಲೆ ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದ ವಿಲ್ ಸ್ಮಿತ್, ವಿಡಿಯೋ ವೈರಲ್

 
 
 
 
 
 
 
 
 
 
 
 
 
 
 

A post shared by Times Now (@timesnow)


2022ರಲ್ಲಿ ತನ್ನ ಪತ್ನಿ ಜಡಾ ಪಿಂಕೆಟ್ ಸ್ಮಿತ್ ವಿರುದ್ಧ ಗೇಲಿ ಮಾಡಿದ್ದಕ್ಕೆ  ಮತ್ತೊಬ್ಬ ಹಾಲಿವುಡ್ ನಟ ಕ್ರಿಸ್‌ ರಾಕ್ ಕೆನ್ನೆಗೆ ಬಾರಿಸಿ ವಿಲ್‌ಸ್ಮಿತ್ ಸುದ್ದಿಯಾಗಿದ್ದರು. ನಂತರ ಅವರನ್ನು ಆಸ್ಕರ್‌ನಿಂದ 10 ವರ್ಷ ಬ್ಯಾನ್ ಮಾಡಲಾಗಿತ್ತು. 2022ರ ಮಾರ್ಚ್ 27ರಂದು ನಡೆದ ಆಸ್ಕರ್ ಸಮಾರಂಭದಲ್ಲಿ ಡಾಕ್ಯುಮೆಂಟರಿ ಫೀಚರ್ ವಿಭಾಗದ ಪ್ರಶಸ್ತಿಯನ್ನು ಘೋಷಿಸಲು ಬಂದ ಕ್ರಿಸ್ ರಾಕ್(Chris Rock), ನಟ ವಿಲ್ ಸ್ಮಿತ್(Will Smith) ಪತ್ನಿ ಹಾಗೂ, ಜಡಾ ಪಿಂಕೆಟ್ ಸ್ಮಿತ್ ಬಗ್ಗೆ ತಮಾಷೆ ಮಾಡಿ ನಟ ವಿಲ್ ಸ್ಮಿತ್ ಅವರಿಂದ ಕಪಾಳಕ್ಕೆ ಹೊಡೆಸಿಕೊಂಡಿದ್ದರು. ಇದು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು,

click me!