ಕನ್ನಡಕ್ಕೆ ಒಳ್ಳೆಯ ಸುದ್ದಿ

Published : Nov 01, 2018, 02:27 PM IST
ಕನ್ನಡಕ್ಕೆ ಒಳ್ಳೆಯ ಸುದ್ದಿ

ಸಾರಾಂಶ

ಕನ್ನಡವನ್ನು ಪಸರಿಸುವಲ್ಲಿ ಸುದ್ದಿ ವಾಹಿನಿಗಳ ಪಾತ್ರವೂ ಮುಖ್ಯ. ಕನ್ನಡದ ಒಂದೇ ಒಂದು ವಾಹಿನಿಯೂ ಇಲ್ಲ ಎಂಬ ಕಾಲದಲ್ಲಿ ಕನ್ನಡಿಗರೆಲ್ಲರ ಭರವಸೆಯೆಂಬಂತೆ ಕಣ್ತೆರೆದ ದೂರದರ್ಶನ ಚಂದನದ ಜೊತೆಜೊತೆಗೆ ಸಾಕಷ್ಟು ಖಾಸಗಿ ವಾಹಿನಿಗಳೂ ಆರಂಭಗೊಂಡವು. ಸುದ್ದಿವಾಹಿನಿಗಳು ಕನ್ನಡವನ್ನು ಪ್ರಭಾವಿಸಿದ ಕುರಿತು ಆಸಕ್ತಿಪೂರ್ಣ ಮಾಹಿತಿ ಇಲ್ಲಿದೆ.

  • 1991ರಲ್ಲಿ ಕೇವಲ ಒಂದು ಸರ್ಕಾರಿ ಮನೋರಂಜನಾ ವಾಹಿನಿ ಇತ್ತು. ಈ 3 ದಶಕದಲ್ಲಿ ವಾಹಿನಿಗಳ ಸಂಖ್ಯೆ ಹಲವು ಪಟ್ಟು ಏರಿದೆ.
  • 25ಕ್ಕೂ ಹೆಚ್ಚು ಮನೋರಂಜನಾ ವಾಹಿನಿಗಳು ಆರಂಭಗೊಂಡಿವೆ. 17ಕ್ಕೂ ಹೆಚ್ಚು ಸುದ್ದಿ ವಾಹಿನಿಗಳು ಪ್ರಾದೇಶಿಕ ಭಾಷೆ ಕನ್ನಡದಲ್ಲೇ ವಾರ್ತೆಗಳನ್ನು ನೀಡುತ್ತಿವೆ.
  • ಪೂರ್ಣಾವಧಿ ಸುದ್ದಿ ವಾಹಿನಿಗಳು ಆರಂಭಗೊಂಡದ್ದು 2000 ಇಸವಿಯಲ್ಲೇ ಆದರೂ ಕಳೆದ 18 ವರ್ಷಗಳಲ್ಲಿ ವರ್ಷಕ್ಕೊಂದು ಹೊಸ ವಾಹಿನಿ ಎಂಬಂತೆ ಸುದ್ದಿವಾಹಿನಿಗಳು ಆರಂಭಗೊಂಡಿವೆ.
  • ಕನ್ನಡ ಮೊದಲ ಮನೋರಂಜನೆಯ ಖಾಸಗಿ ಚಾನಲ್ ಎಂಬ ಹೆಗ್ಗಳಿಕೆ ಪಡೆದ ಉದಯ ಟಿವಿಯನ್ನು ಆರಂಭಿಸಿದ ತಮಿಳುನಾಡಿನ ಚೆನ್ನೈ ಮೂಲದ ಸನ್‌ಟಿವಿ ನೆಟ್‌ವರ್ಕ್ ಸಂಸ್ಥೆ ಯೇ 2000ರಲ್ಲಿ ಉದಯ ನ್ಯೂಸ್ ಚಾನಲ್ ಪ್ರಾರಂಭಿಸಿದರು.
  • ಕನ್ನಡ ಸುದ್ದಿ ವಾಹಿನಿಗಳ ಗುಂಪಿಗೆ ಪ್ರತಿ ವರ್ಷ ಹೊಸ ಚಾನೆಲ್‌ಗಳು ಸೇರ್ಪಡೆಗೊಳ್ಳುತ್ತಲೇ ಇವೆ. ಮನೋರಂಜನಾ ವಾಹಿನಿ ಮತ್ತು ಸುದ್ದಿ ವಾಹಿನಿ ಎಂಬ ಸ್ಪಷ್ಟವಾದ ವಿಭಾಗೀಕರಣವೂ ಆಗಿದೆ. ದಿನದ 24 ಗಂಟೆಯೂ ಸುದ್ದಿ ನೀಡುವಷ್ಟು ಮಾಹಿತಿ, ಸುದ್ದಿ ಕನ್ನಡದಲ್ಲಿದೆ ಅನ್ನುವುದು ಕೂಡ ಕನ್ನಡಿಗರಿಗೆ ಹೊಸ ಸುದ್ದಿಯೇ ಆಗಿತ್ತು.
  • ಪ್ರಸ್ತುತ ಪ್ರಾದೇಶಿಕ ಸುದ್ದಿ ವಾಹಿನಿಗಳ ಪೈಕಿ 15 ಚಾನಲ್‌ಗಳು ಕಾರ್ಯನಿರ್ವಹಿಸುತ್ತಿವೆ. 2006 ರಲ್ಲಿ ಆರಂಭಗೊಂಡ ಎಬಿಸಿಎಲ್ ಬ್ರಾಡ್‌ಕಾಸ್ಟಿಂಗ್ ಸಂಸ್ಥೆಯ ಟಿವಿ 9, ಏಷ್ಯಾನೆಟ್ ನ್ಯೂಸ್ ನೆಟ್ ವರ್ಕ್ ಸಂಸ್ಥೆಯ 2008ರಲ್ಲಿ ಪ್ರಾರಂಭಗೊಂಡ ಸುವರ್ಣ ನ್ಯೂಸ್, 2011ರಲ್ಲಿ ಕಾರ್ಯಾರಂಭಿಸಿದ ಕಸ್ತೂರಿ ಮೀಡಿಯಾ ಸಂಸ್ಥೆಯ ಕಸ್ತೂರಿ ನ್ಯೂಸ್ 24, ರಲ್ಲಿ ಆರಂಭವಾದ ರೈಟ್‌ಮನ್ ಮೀಡಿಯಾದ ಪಬ್ಲಿಕ್ ಟಿವಿ, ಈ ಟಿವಿ ನೆಟ್‌ವರ್ಕ್ ಮಾಲೀಕತ್ವದ ನ್ಯೂಸ್ 18ಕನ್ನಡ, ರಾಜ್ ನ್ಯೂಸ್ ಕನ್ನಡ, ವಿಆರ್‌ಎಲ್ ಮೀಡಿಯಾ ಸಂಸ್ಥೆಯ ದಿಗ್ವಿಜಯ ಟಿವಿ 24*7, ಟಿವಿ 5  ಕನ್ನಡ, ನ್ಯೂಸ್ ಎಕ್ಸ್ ಕನ್ನಡ, ಟಿವಿ 1, ಬಿಟಿವಿ, ಪ್ರಜಾಟಿವಿ- ಹೀಗೆ ಕನ್ನಡದ್ದೇ ಆದ ವಾಹಿನಿಗಳು ಸಕ್ರಿಯವಾಗಿವೆ.

ಸಂಪತ್ ತರೀಕೆರೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ