
ಬಿಗ್‌ಬಾಸ್ ಮನೆಯ ವೈಭವ ಹೇಳ ತೀರದು. ಹಾಸಿಗೆ, ಕಿಚನ್, ಬೇಕಾಗಿರೋ ತಿಂಡಿ ತಿನಿಸುಗಳು...ಒಂದಾ, ಎರಡಾ? ನಿಜವಾಗಲೂ ಇದು ಅರಮನೆಯೇ.
ಮನೆಯ ಒಳಗೆ ಹೋಗುವ ಪ್ರತಿ ಸ್ಪರ್ಧಿಗೂ ಸೂಪರ್ ಆಗಿರೋ ಹಾಸಿಗೆ-ಹೊದಿಕೆ ಜೋಡಿಸಿರುತ್ತಾರೆ. ಆದರೆ , ಒಬ್ಬರ ಹಾಸಿಗೆ ಮೇಲೆ, ಮತ್ತೊಬ್ಬರು ಹತ್ತಿದ್ದಕ್ಕೆ ಈಗ ಶುರವಾಗಿದೆ ಜಗಳ. ನವೀನ್ ಸಜ್ಜು ತಮ್ಮ ಹಾಸಿಗೆ ಬಿಟ್ಟು, ಸ್ನೇಹ ಹಾಸಿಗೆ ಮೇಲೆ ಕುಳಿತಿದ್ದರು. ಅವರ ಬೆಡ್‌ಶೀಟಿಗೆ ಕಾಲು ತಾಗಿಸಿದರು. ಅಷ್ಟೇ ನೋಡಿ, ಶುರುವಾಯಿತು ರಂಪಾಟ.
ಸರಿ ಸಜ್ಜು ತಕ್ಷಣವೇ ಕ್ಷಮೆಯಾಚಿಸಿದ್ದಾರೆ. ಆದರೂ ಸುಮ್ಮನಾಗದ ಸ್ನೇಹ ಅಶ್ಲೀಲ ಪದಗಳನ್ನು ಬಳಸಿ, ಮನೆಯಲ್ಲೀಗ ಸದ್ಯಕ್ಕೆ ಕೆಟ್ಟವರಾಗಿದ್ದಾರೆ.
ರ‍್ಯಾಪಿಡ್ ರಶ್ಮಿ ಹಾಗೂ ಸ್ನೇಹ ಬೆಸ್ಟ್ ಫ್ರೆಂಡ್ಸ್. ಅದಕ್ಕೆ ಸ್ನೇಹಾ ಎಲ್ಲರೊಂದಿಗೆ ಸ್ನೇಹಿಯಾಗಿಲ್ಲವೆಂದು ಉಳಿದ ಮನೆಮಂದಿ ಆರೋಪಿಸುತ್ತಿದ್ದು, ಆರು ಮತ ಹಾಕಿ, ನಾಮಿನೇಟ್ ಮಾಡಿದ್ದಾರೆ. 2ನೇ ವಾರ ಈ ಡ್ಯಾನ್ಸಿಂಗ್ ರಿಯಾಲಿಟಿ ಶೋ ಸ್ಪರ್ಧಿ, ಕೆಲವು ಚಿತ್ರಗಳಲ್ಲಿಯೂ ಅಭಿನಯಿಸಿರುವ ಸ್ನೇಹಾ ಮನೆಯಿಂದ ಹೊರ ಬರುತ್ತಾರಾ? ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.