
ಮುಂಬೈ(ಅ.20): ದಿಲ್ ವಾಲೇ ದಿಲ್ಹನಿಯಾ ಲೇ ಜಾಂಗೇ. ಇದು ಭಾರತೀಯ ಚಿತ್ರರಂಗದ ಲಾಂಗ್ ರನ್ ಸಿನಿಮಾ. 1995 ಅಕ್ಟೋಬರ್-20 ರಿಲೀಸ್ ಆಗಿತ್ತು. ಈಗ ಈ ಚಿತ್ರ ಬಂದು ಇಂದಿಗೆ 21 ವರ್ಷ ಪೂರ್ಣಗೊಂಡಿವೆ. ಹಲವು ದಾಖಲೆ ಈ ಚಿತ್ರಕ್ಕಿವೆ. ಯುವಕರ ಹೃದಯ ಕದ್ದ ಈ ಚಿತ್ರದಲ್ಲಿ ಶಾರುಖ್ ಮತ್ತು ಕಾಜೋಲ್ ಅಭಿನಯ ಎವರ್ ಫೇಮಸ್. ಹಾಡುಗಳೂ ಸೂಪರ್. ಜತಿನ್ ಲಲಿತ್ ಸಂಗೀತದಲ್ಲಿ ಅತ್ಯುತ್ತಮ ಹಾಡು ಬಂದಿವೆ. ಈಗಿನವರಿಗೂ ಇಷ್ಟವಾಗುತ್ತವೆ. ಆದಿತ್ಯ ಚೋಪ್ರಾ ಈ ಚಿತ್ರ ನಿರ್ದೇಶಿಸಿದ್ದರು. ಮುಂಬೈನ ಮರಾಠ ಮಂದಿರ್ ಥಿಯೇಟರ್ ನಲ್ಲಿ ಈ ಚಿತ್ರ ಈಗಲೂ ಪ್ರದರ್ಶನ ಕಾಣ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.