ಡ್ರೀಮ್ ಗರ್ಲ್ ಹೇಮಾ ಮಾಲಿನಿ 20 ವರ್ಷದವರಿದ್ದಾಗ ಹೇಗಿದ್ರು ನೋಡಿ! ಥೇಟ್ ಅಪ್ಸರೆಯೇ..

Published : Dec 21, 2025, 05:03 PM IST
Hema Malini

ಸಾರಾಂಶ

Hema Malini viral video: ಈ ನೃತ್ಯ ಪ್ರದರ್ಶನವು 1968 ರ ಹಿಂದಿನದು, ಆಗ ಅವರು ಕೇವಲ 20 ವರ್ಷ ವಯಸ್ಸಿನವರಾಗಿದ್ದರು. ಈ ವಿಡಿಯೋ ನೋಡಿದ ನಂತ್ರ ಡ್ರೀಮ್ ಗರ್ಲ್ ಅಭಿಮಾನಿಗಳ ಹೃದಯ ಫುಲ್ ಖುಷ್ ಆಗಿರುವುದಂತೂ ಸುಳ್ಳಲ್ಲ.

ಹಿಂದಿ ಚಿತ್ರರಂಗದ "ಡ್ರೀಮ್ ಗರ್ಲ್" ಹೇಮಾ ಮಾಲಿನಿ ನಟಿ ಮಾತ್ರವಲ್ಲದೆ, ಶಾಸ್ತ್ರೀಯ ನೃತ್ಯಗಾರ್ತಿಯೂ ಹೌದು. ಬಾಲ್ಯದಿಂದಲೇ ಭರತನಾಟ್ಯ ಮತ್ತು ಇತರ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಕಲಿಯಲು ಪ್ರಾರಂಭಿಸಿದರು. ಇಂದಿಗೂ 76 ನೇ ವಯಸ್ಸಿನಲ್ಲಿ ಹೇಮಾ ಮಾಲಿನಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಮ್ಮ ನೃತ್ಯ ಕೌಶಲ್ಯದಿಂದ ಪ್ರೇಕ್ಷಕರನ್ನು ಆಕರ್ಷಿಸುತ್ತಾರೆ. ಅಂದಹಾಗೆ ಹೇಮಾ ಮಾಲಿನಿ ಅವರ ಕ್ಲಾಸಿಕ್ ನೃತ್ಯದ ಸುಮಾರು ಆರು ದಶಕಗಳಷ್ಟು ಹಳೆಯದಾದ ವಿಡಿಯೋ ಇಂದು ವೈರಲ್ ಆಗುತ್ತಿದೆ. ಇದಲ್ಲಿ ನಟಿಯ ಆಕರ್ಷಕ ನೃತ್ಯ ನೋಡಬಹುದು. ಈ ನೃತ್ಯ ಪ್ರದರ್ಶನವು 1968 ರ ಹಿಂದಿನದು, ಆಗ ಅವರು ಕೇವಲ 20 ವರ್ಷ ವಯಸ್ಸಿನವರಾಗಿದ್ದರು. ಈ ವಿಡಿಯೋ ನೋಡಿದ ನಂತ್ರ ಡ್ರೀಮ್ ಗರ್ಲ್ ಅಭಿಮಾನಿಗಳ ಹೃದಯ ಫುಲ್ ಖುಷ್ ಆಗಿರುವುದಂತೂ ಸುಳ್ಳಲ್ಲ.

'ಡ್ರೀಮ್ ಗರ್ಲ್'ನ ಸುಂದರ ನೃತ್ಯ ಪ್ರದರ್ಶನ

ಈ ವಿಡಿಯೋದಲ್ಲಿ ಹೇಮಾ ಮಾಲಿನಿ ಸಾಂಪ್ರದಾಯಿಕ, ಕ್ಲಾಸಿಕ್ ಲುಕ್ ನಲ್ಲಿ ಭರತನಾಟ್ಯ ಪ್ರದರ್ಶಿಸುತ್ತಿರುವುದು ಕಂಡುಬರುತ್ತದೆ. ನಟಿ ಸುಂದರವಾದ ಗುಲಾಬಿ ಬಣ್ಣದ ಸೀರೆ, ನೆಕ್ಲೇಸ್, ಕೂದಲಿನಲ್ಲಿ ಗಜ್ರ, ದೊಡ್ಡ ಕಿವಿಯೋಲೆಗಳು ಮತ್ತು ಹಣೆಯ ಪಟ್ಟಿ ಧರಿಸಿದ್ದಾರೆ. ತನ್ನದೇ ಆದ ಲಯದಲ್ಲಿ ಮುಳುಗಿರುವ ಹೇಮಾ ಮಾಲಿನಿ ಸುಂದರವಾಗಿ ಭರತನಾಟ್ಯ ಪ್ರದರ್ಶಿಸಿದ್ದಾರೆ. ವಿಡಿಯೋದ ಕಾಮೆಂಟ್ಸ್ ವಿಭಾಗದಲ್ಲಿ ಬಳಕೆದಾರರು ಹೇಮಾ ಮಾಲಿನಿ ಮತ್ತು ಅವರ ನೃತ್ಯವನ್ನು ಹೊಗಳುತ್ತಿದ್ದಾರೆ. ಹಲವರು ಅದು ಹೇಮಾ ಮಾಲಿನಿ ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಪ್ರಭುದೇವ ಅವರಿಗೂ ನೃತ್ಯ ಕಲಿಸಿದ್ದು ಇದೇ ಮಾಸ್ಟರ್

ಹೇಮಾ ಮಾಲಿನಿಯ ಭರತನಾಟ್ಯ ವಿಡಿಯೋಗೆ ಬಳಕೆದಾರರೊಬ್ಬರು, "ನನಗೆ ರಾಜಾ ರವಿವರ್ಮ ಚಿತ್ರಕಲೆಯಂತೆ ಕಾಣುತ್ತಾರೆ" ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬ ಬಳಕೆದಾರರು, "ಅದ್ಭುತ! ಭರತನಾಟ್ಯ ಅಧ್ಯಯನ ಮಾಡಿದ ಅನೇಕ ಬಾಲಿವುಡ್ ತಾರೆಗಳನ್ನು ನಾನು ನೋಡಿದ್ದೇನೆ, ಆದರೆ ನಿಮ್ಮ ಹಾಗೆ ನೃತ್ಯ ಮಾಡುವವರನ್ನ ನಾನು ನೋಡಿಲ್ಲ" ಎಂದು ತಿಳಿಸಿದ್ದಾರೆ. ಹಾಗೆಯೇ "ಅವರು ದೇವತೆಯಂತೆ ಸುಂದರವಾಗಿ ಕಾಣುತ್ತಾರೆ." "ನಾನು ಅವರಲ್ಲಿ ದೇವತೆಯನ್ನು ನೋಡುತ್ತೇನೆ". "ಹೇಮಾ ಅವರ ಗುರು ಧರ್ಮರಾಜ್ ಮಾಸ್ಟರ್, ಅವರು ಪ್ರಭುದೇವ ಅವರಿಗೂ ನೃತ್ಯ ಕಲಿಸಿದರು" ಎಂದೆಲ್ಲಾ ಕಾಮೆಂಟ್ ಮಾಡಿರುವುದನ್ನ ನಾವಿಲ್ಲಿ ನೋಡಬಹುದು. ಈಗ, ಹೇಮಾ ಮಾಲಿನಿ ಅವರ ಈ 57 ವರ್ಷದ ಹಿಂದಿನ ಪ್ರದರ್ಶನಕ್ಕೆ ಜನರಿಂದ ತುಂಬಾ ಸುಂದರವಾದ ಕಾಮೆಂಟ್‌ಗಳು ಬರುತ್ತಿವೆ.

ಹೇಮಾ ಅವರ ತಾಯಿ ಜಯ ಚಕ್ರವರ್ತಿ. ಅವರು ಪ್ರಸಿದ್ಧ ನಿರ್ಮಾಪಕಿ ಮತ್ತು ವಸ್ತ್ರ ವಿನ್ಯಾಸಕಿಯಾಗಿದ್ದರು. ಕಳೆದ ವರ್ಷ ನಟಿ ತಮ್ಮ ತಾಯಿಯ ಹುಟ್ಟುಹಬ್ಬದಂದು ಒಂದು ಸುಂದರವಾದ ಟಿಪ್ಪಣಿಯನ್ನು ಸಹ ಬರೆದಿದ್ದರು.

"ಇಂದು ನನಗೆ ತುಂಬಾ ವಿಶೇಷವಾದ ದಿನ! ನನ್ನ ಪ್ರೀತಿಯ ತಾಯಿಯ ಹುಟ್ಟುಹಬ್ಬ. ಅವರು ನನ್ನನ್ನು ಅಗಲಿದ ನಂತರ ನಾನು ಪ್ರತಿ ವರ್ಷ ಆಚರಿಸುವ ದಿನ. ಈ ದಿನದಂದು ನಾನು ಸಾಕಷ್ಟು ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ, ಅವರು ನನ್ನ ಜೀವನ ಮತ್ತು ವೃತ್ತಿಜೀವನಕ್ಕೆ ಎಷ್ಟು ಕೊಡುಗೆ ನೀಡಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳುತ್ತೇನೆ ಮತ್ತು ನಾನು ಇಂದು ಆಗಿರುವ ಎಲ್ಲದಕ್ಕೂ ಅವರಿಗೆ ಮನ್ನಣೆ ನೀಡುತ್ತೇನೆ. ಧನ್ಯವಾದಗಳು ಅಮ್ಮ" ಎಂದು ಹೇಮಾ ಬರೆದುಕೊಂಡಿದ್ದರು.

ಹಿಂದಿ ಚಿತ್ರರಂಗದ ಡ್ರೀಮ್ ಗರ್ಲ್ ಎಂದು ಕರೆಯಲ್ಪಡುವ ಹೇಮಾ, 1963 ರ ತಮಿಳು ಚಿತ್ರ "ಇಧು ಸತ್ಯಂ" ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು ನಂತರ 1968 ರ ಚಿತ್ರ "ಸಪ್ನೋಂ ಕಾ ಸೌದಾಗರ್" ಮೂಲಕ ಹಿಂದಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಅವರು ರಾಜ್‌ಕುಮಾರ್ ರಾವ್ ಮತ್ತು ರಾಕುಲ್ ಪ್ರೀತ್ ಸಿಂಗ್ ಅವರೊಂದಿಗೆ 2020 ರ ಚಿತ್ರ "ಶಿಮ್ಲಾ ಮಿರ್ಚಿ" ಯಲ್ಲಿಯೂ ಕಾಣಿಸಿಕೊಂಡರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಅಷ್ಟು ಸುಳಿವು ಸಿಕ್ಕರೂ ಭೂಮಿಕಾ ಸುಮ್ನಿರೋದ್ಯಾಕೆ? ಸಿಡಿದೆದ್ದ ವೀಕ್ಷಕರು
Actors Death in 2025: ಈ ವರ್ಷ ಇಹಲೋಕ ತ್ಯಜಿಸಿದ ಚಂದನವನದ ತಾರೆಯರು