'ಶಿವರಾಜ್ ಕುಮಾರ್' ನಂತರ 'ರಾಜಕುಮಾರ್'ನನ್ನು ನೋಡಿದ ಗೌಡರು

Published : May 27, 2017, 08:05 PM ISTUpdated : Apr 11, 2018, 12:39 PM IST
'ಶಿವರಾಜ್ ಕುಮಾರ್' ನಂತರ 'ರಾಜಕುಮಾರ್'ನನ್ನು ನೋಡಿದ ಗೌಡರು

ಸಾರಾಂಶ

ಇತ್ತೀಚೆಗೆ ಮೈಸೂರಿನಲ್ಲಿ ಶಿವರಾಜ್ ಕುಮಾರ್ ನಟನೆಯ 'ಬಂಗಾರು ಸನ್ ಆಫ್ ಬಂಗಾರದ ಮನುಷ್ಯ' ಚಿತ್ರ ನೋಡಿದ್ದರು.

ಬೆಂಗಳೂರು(ಮೇ.27): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನಿಮಾ ಯಶಸ್ವಿ 50 ದಿನಗಳನ್ನು ಪೂರೈಸಿ 100ನೇ ದಿನದತ್ತ ಮುನ್ನುಗುತ್ತಿದೆ.

ಸಿಎಂ ಸಿದ್ದರಾಮಯ್ಯನವರ ನಂತರ ಈಗ ಈ ಸಿನಿಮಾವನ್ನು ಮಾಜಿ ಪ್ರಧಾನಿ ದೇವಗೌಡರು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.  ಮಲ್ಲೇಶ್ವರದ ರೇಣುಕಾಂಬ ಚಿತ್ರಮಂದಿರದಲ್ಲಿ ಪತ್ನಿ ಸಮೇತ ಆಗಮಿಸಿದ್ದ ಗೌಡರು ಚಿತ್ರ ನೋಡಿ, ಸಮಾಜಕ್ಕೆ ನೀತಿ ಪಾಠ ಹೇಳುವ ಸಿನಿಮಾ ಹಾಗೇ ಪುನೀತ್ ಚೆನ್ನಾಗಿ ಅಭಿನಯಿಸಿದ್ದಾರೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮೈಸೂರಿನಲ್ಲಿ ಶಿವರಾಜ್ ಕುಮಾರ್ ನಟನೆಯ 'ಬಂಗಾರು ಸನ್ ಆಫ್ ಬಂಗಾರದ ಮನುಷ್ಯ' ಚಿತ್ರ ನೋಡಿದ್ದರು. ಅಣ್ಣ ತಮ್ಮಂದಿರಿಬ್ಬರೂ ಈ ವಯಸ್ಸಿನಲ್ಲೂ ಅದ್ಭುತ ಅಭಿನಯ ಮಾಡುತ್ತಿದ್ದಾರೆ ಎಂದು ರಾಜ್ ಪುತ್ರರನ್ನು ಹೊಗಳಿದರು.

(ಸಾಂದರ್ಭಿಕ ಚಿತ್ರ)

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಈ ಕೆಟ್ಟ ಸಂಸ್ಕೃತಿಯನ್ನು ನಾವು ಕೊನೆಗಾಣಿಸಲೇಬೇಕು: ಕಾಂತಾರ ನಟಿ ಸಪ್ತಮಿ ಗೌಡ ಆಗ್ರಹ
'ಅವ್ರು ತಬ್ಬಿಕೊಳ್ಳುವಾಗ್ಲೇ ನಂಗೆ ಗೊತ್ತಾಗತ್ತೆ' ಎಂದು ವೇದಿಕೆ ಮೇಲೆ ಹೇಳಿ ತಬ್ಬಿಬ್ಬು ಮಾಡಿದ Rakshita Shetty