
ಬೆಂಗಳೂರು(ಅ.27): ಸ್ಯಾಂಡಲ್ವುಡ್ ಬೇಡಿಕೆಯ ನೃತ್ಯ ನಿರ್ದೇಶಕ ಕಮ್ ನಿರ್ದೇಶಕ ಹರ್ಷ ಜೈ ಮಾರುತಿ ಸಿನಿಮಾ ನಂತರ ಈಗ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ.
ಈ ಚಿತ್ರಕ್ಕೆ ಕಪಿಚೇಷ್ಠೆ ಅಂತಾ ಟೈಟಲ್ ಇಡಲಾಗಿದೆ. ಹರ್ಷ ಜೊತೆ ಬಹಳ ವರ್ಷಗಳಿಂದ ಸಹಾಯ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿರೋ ಮೋಹನ್ ಎಂಬ ಹುಡ್ಗನ ಈ ಚಿತ್ರಕ್ಕೆ ನಾಯಕನಾಗಿ ಸೆಲೆಕ್ಟ್ ಮಾಡಲಾಗಿದೆ.
ತರ್ಲೆನನ್ಮಮಕ್ಕಳು ಚಿತ್ರದ ನಾಯಕಿ ಅಂಜಲಿ ಮೋಹನ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಸದ್ಯದಲ್ಲೇ ನಿರ್ದೇಶಕ ಹರ್ಷ ನಿರ್ದೇಶನದ ಕಪಿಚೇಷ್ಠೆ ಚಿತ್ರ ಸೆಟ್ಟೇರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.