ಪ್ರಚಾರದ ಅಬ್ಬರವೇ ಇಲ್ಲದೇ ಅಬ್ಬರಿಸಿದ 'ಹನುಮಾನ್​ ಅಂಶ್':​ ಅಂಧ ಗಾಯಕನಿಗೆ ಒಲಿಯುವುದೇ ಕಣ್ಣಿನ ದೃಷ್ಟಿ?

Published : Sep 06, 2026, 05:55 PM IST
Hanuman Ansh

ಸಾರಾಂಶ

ಕೇವಲ 2 ಕೋಟಿ ಬಜೆಟ್‌ನಲ್ಲಿ ತಯಾರಾದ 'ಹನುಮಾನ್ ಅಂಶ್' ಸಿನಿಮಾ ಯಾವುದೇ ಪ್ರಚಾರವಿಲ್ಲದೆ 100 ಕೋಟಿ ಗಳಿಸಿ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ಹಾಡಿರುವ ಅಂಧ ಗಾಯಕ ಸುನಿಲ್ ಲೋಧಿ ಅವರ ಜೀವನವೂ ಬದಲಾಗಿದ್ದು, ನೀಮ್ ಕರೋಲಿ ಬಾಬಾ ಅವರ ಜೀವನ ಆಧರಿತ ಈ ಕಥೆ ಪ್ರೇಕ್ಷಕರನ್ನು ಸೆಳೆಯುತ್ತಿದೆ.

ಥಿಯೇಟರ್​ ಕೊಡದೇ ಸತಾಯಿಸಿದ್ರು, ಮಾರ್ನಿಂಗ್​ ಷೋ ಸಾಕಾಂದ್ರು, ಯಾವುದೋ ಬಾಬಾನ ಜೀವನ ಚರಿತ್ರೆ ಇಂದಿನಿವರಿಗೆ ಯಾಕೆ ಬೇಕ್ರಿ, ಯಾರು ನೋಡ್ತಾರೆ ಅಂತ ಪ್ರಶ್ನಿಸಿದ್ರು. ರೊಮಾನ್ಸ್​ ಇಲ್ಲ, ಇಂದಿನ ಪೀಳಿಗೆಗೆ ಬೇಕಾದ ರಕ್ತ ಪಾತ, ಕೊಲೆ, ಹಿಂಸೆ, ಲೈಂ*ಗಿಕತೆ... ಯಾವುದೂ ಇಲ್ಲದಿದ್ರೆ ಚಿತ್ರ ಏಕೆ ಓಡತ್ತೆರಿ ಎಂದು ಪ್ರಶ್ನಿಸಿದ್ರು. ಪ್ರಚಾರಕ್ಕೆ ನಾಲ್ಕು ಕಾಸುನೂ ಖರ್ಚು ಮಾಡದೇ ಸಿನಿಮಾ ಓಡಲು ಸಾಧ್ಯವೇನ್ರಿ ಎಂದು ಪ್ರಶ್ನಿಸಿದ್ರು... ಆದರೆ ಎಲ್ಲದ್ದಕ್ಕೂ ಕಾಲವೇ ಉತ್ತರ ಕೊಡುತ್ತದೆ ಎನ್ನುವಂತೆ ಆಗಾಗ್ಗೆ ಕೆಲವು ಲೋ ಬಜೆಟ್​ ಸಿನಿಮಾಗಳು, ಪ್ರಚಾರದ ಅಬ್ಬರ ಇಲ್ಲದೆಯೇ, ಇಂಥದ್ದೊಂದು ಸಿನಿಮಾ ಬರುತ್ತಿದೆ ಎಂದು ಸದ್ದು ಕೂಡ ಮಾಡದೇ ನೂರಾರು ಕೋಟಿ ಕಲೆಕ್ಷನ್​ ಮಾಡುತ್ತಿರುವುದು ನಮ್ಮ ಕಣ್ಣಮುಂದೆಯೇ ಇದೆ. ಅಂಥವುಗಳಲ್ಲಿ ಒಂದು ಹನುಮಾನ್​ ಅಂಶ್​ (Hanuman Ansh)

ಕೇವಲ ಎರಡು ಕೋಟಿ ರೂಪಾಯಿ ಬಜೆಟ್​ನ ಈ ಸಿನಿಮಾ ಇದಾಗಲೇ 100 ಕೋಟಿ ಗಳಿಕೆ ಮಾಡಿದೆ. ಆರಂಭದಲ್ಲಿ ಅಷ್ಟೊಂದು ಗಳಿಕೆ ಮಾಡದಿದ್ದರೂ, ಈ ಸಿನಿಮಾ ನೋಡುಗರೇ ಪ್ರಚಾರ ಮಾಡಿದ್ದರಿಂದ ಇದರ ಬಗ್ಗೆ ಕುತೂಲಹದಿಂದ ಜನರು ದೌಡಾಯಿಸುತ್ತಿದ್ದಾರೆ. ಭಾರಿ ಬಜೆಟ್​ನ, ಸೂಪರ್​ಸ್ಟಾರ್​ಗಳ ಚಿತ್ರಗಳು ಥಿಯೇಟರ್​ನಲ್ಲಿ ಇರುವಾಗ, ಥಿಯೇಟರ್​ಗಳನ್ನೂ ಕೊಡದೇ ಸತಾಯಿಸಿದರೂ, ಕೆಲವು ಕಡೆಗಳಲ್ಲಿ ಮಾರ್ನಿಂಗ್ ಷೋಕ್ಕೆ ಮಾತ್ರ ಸೀಮಿತ ಮಾಡಿದರೂ ಈ ಸಿನಿಮಾ 100 ಕೋಟಿ ಕ್ಲಬ್​ ಸೇರಿದೆ. ಎಲ್ಲವೂ ಹನುಮಂತನ ಕೃಪೆ ಎನ್ನುತ್ತಿದ್ದಾರೆ ಸಿನಿವೀಕ್ಷಕರು.

ಅಂಧ ಗಾಯಕ ಸುನಿಲ್​

ಇದರಲ್ಲಿ ಹನುಮಂತನ ಅಂಧ ಭಕ್ತನೊಬ್ಬ ಹಾಡಿದ ಹಾಡನ್ನು ಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಸುನಿಲ್ ಲೋಧಿ ಹುಟ್ಟಿನಿಂದಲೇ ದೃಷ್ಟಿಹೀನ. ಒಂದು ಕಾಲದಲ್ಲಿ ಅವರ ಕುಟುಂಬವನ್ನು ಪೋಷಿಸಲು ರೈಲುಗಳಲ್ಲಿ ಹಾಡುವ ಮೂಲಕ ಪ್ರಾರಂಭವಾದ ಪ್ರಯಾಣವು ಈಗ ಅವರ ಧ್ವನಿಯನ್ನು ಹೆಚ್ಚು ವಿಶಾಲ ಪ್ರೇಕ್ಷಕರಿಗೆ ಕೊಂಡೊಯ್ಯುವ ಪ್ರಯಾಣವಾಗಿ ಬೆಳೆದಿದೆ. ತಮುರಾ ಮತ್ತು ಭಕ್ತಿಗೀತೆಗಳ ಭಾವಪೂರ್ಣ ರಾಗಗಳ ಮೂಲಕ, ಸುನಿಲ್ ತನಗಾಗಿ ಒಂದು ವಿಶಿಷ್ಟ ಸ್ಥಾನವನ್ನು ಸೃಷ್ಟಿಸಿಕೊಂಡಿದ್ದಾರೆ, ಆದರೆ ಹನುಮಾನ್ ಅಂಶ್ ಚಿತ್ರದಲ್ಲಿನ ಅವರ ಧ್ವನಿ ಅವರಿಗೆ ಮತ್ತಷ್ಟು ಮನ್ನಣೆಯನ್ನು ತಂದುಕೊಟ್ಟಿತು.

ಅವರ ಪ್ರಯಾಣವು ಯಶಸ್ಸನ್ನು ಕಂಡುಕೊಳ್ಳುವ ಗಾಯಕನ ಕಥೆಗಿಂತ ಹೆಚ್ಚಿನದಾಗಿದೆ. ಇದು ಕಠಿಣ ಸಂದರ್ಭಗಳನ್ನು ನಿವಾರಿಸುವ ದೃಢನಿಶ್ಚಯ, ಪ್ರತಿಭೆ ಮತ್ತು ಧೈರ್ಯದ ಪ್ರಬಲ ಉದಾಹರಣೆಯಾಗಿದೆ. ಬದುಕುಳಿಯುವಿಕೆಗಾಗಿ ಹಾಡುವುದರಿಂದ ಹಿಡಿದು ಕೇಳುಗರ ಹೃದಯಗಳನ್ನು ತಲುಪುವವರೆಗೆ, ಸುನಿಲ್ ಲೋಧಿ ಅವರ ಪ್ರಯಾಣವು ಮನ್ನಣೆ ಮತ್ತು ಗೌರವಕ್ಕೆ ಅರ್ಹವಾಗಿದೆ. ಇವರು ಈ ಸ್ಟಾರ್​ ಆಗಿದ್ದಾರೆ. ಇದೀಗ ಇವರಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ,ಮೋಹನ್​ ಯಾದವ್​ ಅವರು ಗಾಯಕನನ್ನು ಭೇಟಿ ಮಾಡಿದ್ದು, ಅವರ ಕಣ್ಣಿನ ದೃಷ್ಟಿಯನ್ನು ವಾಪಸ್​ ತರಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುವುದಾಗಿ ಹೇಳಿದ್ದಾರೆ.

ಎಲ್ಲಾ ಹನುಮನ ದಯೆ

ಈ ಕುರಿತು ಡಿಡಿನ್ಯೂಸ್​ ಜೊತೆ ಮಾತನಾಡಿರುವ ಸುನಿಲ್​ ಲೋಧಿ, ನನ್ನ ಹಾಡನ್ನು ಒಂದು ದಿನ ಸಿನಿಮಾದಲ್ಲಿ ಬಳಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಎಳ್ಳಷ್ಟೂ ಕನಸು ಕಂಡಿರಲಿಲ್ಲ. ಆದರೆ ನಾನು ನನ್ನ ಸಂಪೂರ್ಣ ಹಾಡನ್ನು ಹನುಮಂತನಿಗೆ ಮೀಸಲಿಟ್ಟೆ. ಇಂದು ಹನುಮಂತನೇ ನನ್ನ ಜೀವನದಲ್ಲಿ ಪವಾಡ ಮಾಡಿದ ಎಂದಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿಗಳ ಕಣ್ಣಿನ ಚಿಕಿತ್ಸೆಯ ಭರವಸೆಯೂ ಸಿಕ್ಕಿದೆ. ಕೆಲವು ಸಂದರ್ಭಗಳಲ್ಲಿ ಕೆಲವರ ಕಣ್ಣುಗಳಲ್ಲಿ ದೃಷ್ಟಿ ತರಿಸುವುದು ವೈದ್ಯಕೀಯಕ್ಕೂ ಸವಾಲಾಗಿಬಿಡುತ್ತದೆ. ಕೆಲವು ವೈದ್ಯಕೀಯ ಕಾರಣಗಳಿಂದ ಅದು ಸಾಧ್ಯವಾಗದ ಕೆಲಸ. ಸುನಿಲ್​ ಅವರು ಹುಟ್ಟು ಕುರುಡರು. ಆದರೆ ಆ ಭಗವಂತನ ಕೃಪೆಯಿಂದ ಇವರ ಕಣ್ಣುಗಳಲ್ಲಿ ಆದಷ್ಟು ಬೇಗ ದೃಷ್ಟಿ ಬರಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ.

ಇನ್ನು ಈ ಸಿನಿಮಾದ ಕುರಿತು ಹೇಳುವುದಾದರೆ, ಭಕ್ತರಿಂದ ‘ಮಹರಾಜ್ ಜಿ’ ಎಂದೇ ಕರೆಯಲ್ಪಡುವ ಪವಾಡ ಪುರುಷ ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳೇ ಈ ಚಿತ್ರದ ಜೀವಾಳ. ತನ್ನ ಅಗಲಿದ ತಾಯಿಯನ್ನು ಭೇಟಿಯಾಗಲು ದೇವರನ್ನು ಹುಡುಕುತ್ತಾ ಹೊರಡುವ ಒಂದು ಮಗು, ದೈವತ್ವದ ಹಾದಿಯಲ್ಲಿ ನಡೆದು ಹೇಗೆ ಜನಸೇವೆಯೇ ಜನಾರ್ಧನ ಸೇವೆ ಎಂದು ನೀಮ್ ಕರೋಲಿ ಬಾಬಾ ಆಗಿ ಬದಲಾಗುತ್ತದೆ ಎಂಬುದನ್ನು ಶೋಭಿನವ್ ಸತ್ಯ ತಮ್ಮ ಅದ್ಭುತ ನಟನೆಯ ಮೂಲಕ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಈ ಭಕ್ತಿಪ್ರಧಾನ ಕಥೆ ಈಗ ಯುವಜನತೆ ಮತ್ತು ಹಿರಿಯರು ಎಂಬ ಭೇದವಿಲ್ಲದೆ ಎಲ್ಲರನ್ನೂ ಚಿತ್ರಮಂದಿರಕ್ಕೆ ಸೆಳೆಯುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 13: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಓಂ ಪ್ರಕಾಶ್ ರಾವ್.. 'ಬೀಪ್‌ ಸೌಂಡ್‌' ಪ್ರಶ್ನೆ ಕೇಳಿದ್ಯಾಕೆ ಕಿಚ್ಚ ಸುದೀಪ್?
ಹೀರೋಯಿನ್ ಆಗಿ ಕಾಣಿಸಿಕೊಳ್ಳುವುದಲ್ಲ, ಪಾತ್ರಕ್ಕೆ ಬೆಲೆ ಬೇಕು: ನಟಿ ಶಾನ್ವಿ ಸಂದರ್ಶನ