ಗೃಹಭಂಗ ನೋಡಿದ ಮೇಲೆ ಮಾಳವಿಕಾ ಮೇಲಿದ್ದ ಕೋಪ ಹೋಗಿ ಗೌರವ ಬಂತು ಅಂತಿದ್ದಾರೆ ಜನ!

Published : Aug 19, 2025, 08:36 PM IST
malavika

ಸಾರಾಂಶ

ಎಸ್‌.ಎಲ್‌. ಭೈರಪ್ಪ ಅವರ 'ಗೃಹಭಂಗ' ಕಾದಂಬರಿ ಆಧಾರಿತ ಸೀರಿಯಲ್‌ನಲ್ಲಿ ಮಾಳವಿಕಾ ಅವರ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. 'ಗೃಹಭಂಗ' ನೋಡಿದ ನಂತರ ಮಾಳವಿಕಾ ಮೇಲಿನ ಕೋಪ ಮಾಯವಾಗಿ ಗೌರವ ಮೂಡಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಎಸ್‌ ಎಲ್‌ ಭೈರಪ್ಪ ಅವರ 'ಗೃಹಭಂಗ' ಕಾದಂಬರಿ ಆಧರಿಸಿ ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿದ್ದ 'ಗೃಹಭಂಗ' ಸೀರಿಯಲ್‌ ಹಿಂದೆ ಈ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಈಗ ಈ ಸೀರಿಯಲ್‌ನ ಎಪಿಸೋಡ್‌ಗಳನ್ನು ಯೂಟ್ಯೂಬ್‌ನಲ್ಲಿ ನೋಡಬಹುದು. ಈ ಸೀರಿಯಲ್‌ನ ಸಣ್ಣ ಸಣ್ಣ ಗ್ಲಿಂಪ್ಸ್‌ಗಳನ್ನು ಸೋಷಲ್ ಮೀಡಿಯಾದಲ್ಲಿ ಅನೇಕರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಉತ್ತಮ ರೆಸ್ಪಾನ್ಸ್ ಕೂಡ ಸಿಗುತ್ತಿದೆ. ಈ ಥರ ಗ್ಲಿಂಪ್ಸ್ ನೋಡಿ ಯೂಟ್ಯೂಬ್‌ಗೆ ಬಂದು ಫುಲ್ ಸೀರಿಯಲ್‌ ನೋಡುವವರ ಸಂಖ್ಯೆಯೂ ಹೆಚ್ಚಿದೆ. ಇದು ಸ್ವಾತಂತ್ರ್ಯ ಪೂರ್ವ ಕಾಲದ ಕಥೆ. ನಂಜಮ್ಮ ಅನ್ನುವ ಹೆಣ್ಣುಮಗಳ ಲೈಫ್‌ಸ್ಟೋರಿ ಇದರಲ್ಲಿದೆ. ನಂಜಮ್ಮ ಬದುಕನ್ನು ಸ್ವೀಕರಿಸುವ ರೀತಿ, ಆಕೆ ಅನುಸರಿಸಿದ ನೈತಿಕ ಪದ್ದತಿಗಳು, ಅನ್ಯಾಯದ ವಿರುದ್ದ ಸಿಡಿದು ಬೀಳುವ ಪರಿ ಎಲ್ಲವನ್ನೂ ಆ ಕಾಲಘಟ್ಟದ ಹಿನ್ನೆಲೆಯಲ್ಲಿ ಕಟ್ಟಿಕೊಡಲಾಗಿದೆ. ಅಷ್ಟಕ್ಕೂ ಈ ನಂಜಮ್ಮನ ಕಾರಣಕ್ಕೆ ಈ ಸೀರಿಯಲ್‌ ಬಂದ ಎಷ್ಟೋ ವರ್ಷದ ನಂತರ ಮಾಲವಿಕಾ ಸುದ್ದಿಯಲ್ಲಿದ್ದಾರೆ. ಸೋಷಲ್‌ ಮೀಡಿಯಾದಲ್ಲಿ ಅವರ ಬಗ್ಗೆ ಹೆಚ್ಚೆಚ್ಚು ವಿಚಾರಗಳು ಚರ್ಚೆ ಆಗುತ್ತಿವೆ.

ಮುಖ್ಯವಾಗಿ ಹೇಳಬೇಕು ಅಂದರೆ 'ಗೃಹಭಂಗ ನೋಡಿದ ಮೇಲೆ ಮಾಲವಿಕಾ ಮೇಲಿದ್ದ ಕೋಪವೆಲ್ಲ ಹೋಗಿ ಗೌರವ ಬಂತು' ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಮಾಲವಿಕಾ ಮೇಲೆ ಜನರಿಗೆ ಕೋಪ ಯಾಕೆ, ಇದನ್ನು ನೋಡಿ ಆ ಕೋಪ ಹೇಗೆ ಕಡಿಮೆ ಆಯ್ತು ಅನ್ನೋ ಪ್ರಶ್ನೆಗೆ ಉತ್ತರ ಮುಂದಿದೆ.

ಮಾಲವಿಕಾ ಇತ್ತೀಚೆಗೆ ನಟನೆಯ ಹೊರತಾದ ಕಾರಣಗಳಿಗೆ ಸುದ್ದಿಯಾಗುತ್ತಿದ್ದಾರೆ. ಮಾಳವಿಕಾ ಅವರ ಬಗ್ಗೆ ಯಾರಿಗೆ ಏನೇ ಕಂಪ್ಲೇಂಟ್ ಇರಲಿ, ಅವರ ಅಚ್ಚಗನ್ನಡದ ಬಗ್ಗೆ, ನಟನೆಯ ಬಗ್ಗೆ ಯಾರೊಬ್ಬರೂ ಕಮಕ್ ಕಿಮಕ್ ಅನ್ನಲ್ಲ. ಕಾರಣ ಭಾಷೆ ಮತ್ತು ನಟನೆ ಎರಡರಲ್ಲೂ ಈ ನಟಿಯದು ಎತ್ತಿದ ಕೈ. ಹಾಗೆ ನೋಡಿದರೆ ಮಾಲವಿಕಾ ಹುಟ್ಟಿದ್ದು ತಾಂಜಾವೂರಿನಲ್ಲಿ. ಅವರ ತಂದೆ ಸಾಹಿತಿ, ಬ್ಯಾಂಕ್ ಉದ್ಯೋಗಿ. ತಾಯಿ ಡ್ಯಾನ್ಸರ್‌. ಇಂಥಾ ಮಾಲವಿಕಾ ಬಾಲ್ಯದಿಂದಲೇ ಕಲಿಯೋದ್ರಲ್ಲಿ, ಡಾನ್ಸಿನಲ್ಲಿ, ಅಭಿನಯದಲ್ಲಿ ಎಲ್ಲದರಲ್ಲೂ ಬೆನ್ನು ತಟ್ಟಿಸಿಕೊಂಡವರೇ. ಪ್ರೇಮಾ ಕಾರಂತರ 'ನಕ್ಕಳಾ ರಾಜಕುಮಾರಿ' ಸಿನಿಮಾದಲ್ಲಿ ಮಾಳವಿಕಾ ಮಾಡಿದ ರಾಜಕುಮಾರಿ ಪಾತ್ರವನ್ನು ಹಿರಿಯರು ಈಗಲೂ ನೆನಪಿಸಿಕೊಳ್ತಾರೆ. ಇಷ್ಟೆಲ್ಲ ಪ್ರತಿಭಾವಂತೆ ಮೇಲೆ ಜನರಿಗೆ ಯಾಕೆ ಕೋಪ ಅಂದರೆ ಅದಕ್ಕೆ ಇಂಥದ್ದು ಅಂತ ಕಾರಣ ಇಲ್ಲ. ಅವರ ಬೇರೆ ಬೇರೆ ಮಾತುಗಳು ಕೋಪ ತರಿಸಿರಬಹುದು, ಯಾವುದೋ ವೀಡಿಯೋದಲ್ಲಿ ಅವರನ್ನು ನೋಡಿ ಮಾಲವಿಕಾಗೆ ಆಟಿಟ್ಯೂಡ್ ಅಂತ ತೋರಿರಬಹುದು. ಬಿಜೆಪಿಗೆ ಸೇರಿದ ಮೇಲೆ ಅವರು ರಾಜಕೀಯ ಆಂಗಲ್‌ನಿಂದ ಮಾತನಾಡೋದು ಇರಿಸುಮುರಿಸು ತಂದಿರಬಹುದು.

ಆದರೆ ಸದ್ಯಕ್ಕಂತೂ 'ಗೃಹಭಂಗ' ಸೀರಿಯಲ್ಲಿನ ನಂಜಮ್ಮನ ಪಾತ್ರದಲ್ಲಿ ಅವರ ನಟನೆ ನೋಡಿ ಅವರ ಮೇಲಿದ್ದ ಎಲ್ಲ ಕೋಪವೂ ಕರಗಿ ಆ ಜಾಗದಲ್ಲಿ ಗೌರವ ಮೂಡಿದೆ ಅಂತ ಬಹಳಷ್ಟು ಜನ ಹೇಳುತ್ತಿದ್ದಾರೆ. ಎಸ್‌ ಎಲ್‌ ಭೈರಪ್ಪ ಅವರ ಬಹಳ ಜನಪ್ರಿಯ ಕಾದಂಬರಿ 'ಗೃಹಭಂಗ'ವನ್ನು ಬಹಳ ಜನ ಓದಿದ್ದಾರೆ. ಅದಕ್ಕಿಂಯ ಜಾಸ್ತಿ ಜನ ಗಿರೀಶ್‌ ಕಾಸರವಳ್ಳಿ ನಿರ್ದೇಶನ ಮಾಡಿದ್ದ ಈ ಸೀರಿಯಲ್‌ ನೋಡಿದ್ದಾರೆ. ಆಗ ನೋಡಲಾಗದವರು ಈಗ ಯೂಟ್ಯೂಬ್‌ನಲ್ಲಿ ನೋಡಿ ಮೆಚ್ಚಿಕೊಂಡಿದ್ದಾರೆ. ಎಲ್ಲರಿಗೂ ಮಾಲವಿಕಾ ಆಕ್ಟಿಂಗ್‌ ನೋಡಿ ಅವರ ಮೇಲೆ ಗೌರವ ಉಕ್ಕಿ ಬಂದಿದೆ. ಎಂಥಾ ಕಲಾವಿದೆ ಇವ್ರು, ಆದರೆ ಇಂಥಾ ಟ್ಯಾಲೆಂಟೆಡ್‌ ನಟಿಗೆ ಸರಿಯಾದ ಪಾತ್ರ ಇತ್ತೀಚೆಗೆ ಯಾಕೋ ಸಿಕ್ತಿಲ್ಲವಲ್ಲ ಅನ್ನೋ ಮಾತೂ ಕೇಳಿ ಬರ್ತಿದೆ. ಈ ವಿಷಯ ಮಾಲವಿಕಾ ಅವರ ಕಿವಿಗೆ ಬಿದ್ದಿದೆಯೋ ಇಲ್ಲವೋ ಗೊತ್ತಿಲ್ಲ, ಅವ್ರಿಗೆ ಗೊತ್ತಾದರೆ ಹುಮ್‌ ಅಂತ ನಿಟ್ಟುಸಿರು ಬಿಟ್ಟು ಸುಮ್ಮನಾಗಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?