’ಗೀತಾ’ ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಗೋಲ್ಡನ್ ಪುತ್ರ

By Web Desk  |  First Published Aug 2, 2019, 12:15 PM IST

ಗೀತಾ ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಪುತ್ರ ವಿಹಾನ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ವಿಹಾನ್  ತನ್ನದೇ ಪಾತ್ರಕ್ಕೆ ಡಬ್ಬಿಂಗ್ ಕೂಡಾ ಮಾಡಿದ್ದಾರೆ. 


ಗೋಲ್ಡನ್ ಸ್ಟಾರ್ ಗಣೇಶ್ ಬಹು ನಿರೀಕ್ಷಿತ ಚಿತ್ರ ‘ಗೀತಾ’ ದಲ್ಲಿ ಅವರ ಪುತ್ರ ವಿಹಾನ್ ನಟಿಸಿದ್ದು ಗೊತ್ತೇ ಇದೆ. ಇದೀಗ ಆ ಪಾತ್ರಕ್ಕೆ ಸ್ವತಃ ವಿಹಾನ್ ಡಬ್ಬಿಂಗ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಡಬ್ಬಿಂಗ್ ಮಾಡಿದ್ದು ವಿಶೇಷ. 

ಗೋಲ್ಡನ್ ಗಣಿ ಬಹುನಿರೀಕ್ಷಿತ ಸಿನಿಮಾ ‘ಗೀತಾ’ ಬಿಡುಗಡೆಯ ಹೊಸ್ತಿಲಲ್ಲಿದ್ದು ಈ ಚಿತ್ರದ ಡಿಜಿಟಲ್ ಹಕ್ಕು ಅಮೇಜಾನ್ ಪ್ರೈಮ್ ಖರೀದಿಸಿದೆ. 

Tap to resize

Latest Videos

‘ಗೀತಾ’ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್! ಪ್ರಸಾರ ಹಕ್ಕು ಖರೀದಿಸಿದ ಅಮೇಜಾನ್ ಪ್ರೈಮ್

ಗೀತಾ ಗಣೇಶ್ ಪಾಲಿಗೆ ಸ್ಪೆಷಲ್. ಅವರದೇ ಹೋಮ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾವಾಗಿದೆ.  ವಿಜಯ್ ನಾಗೇಂದ್ರ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಶೀರ್ಷಿಕೆಗೂ ಶಂಕರ್ ನಾಗ್ ಗೀತಾ ಸಿನಿಮಾಗೂ ಸಂಬಂಧವಿದೆಯಾ ಎಂಬ ಕುತೂಹಲ ಮೂಡಿಸಿದೆ. 

ಪಾರ್ವತಿ ಅರುಣ್, ಪ್ರಯಾಗ ಮಾರ್ಟಿನ್, ಶಾನ್ವಿ ಶ್ರೀವಾಸ್ತವ್ ನಾಯಕಿಯರಾಗಿ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ 6 ಕ್ಕೆ ತೆರೆಗೆ ಬರಲಿದೆ. 

click me!